Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಷ್ಮಿ ಯೋಜನೆಯ ಹಣ ಬರದವರಿಗೆ ಆಘಾತ! ಹಬ್ಬದ ದಿನವೇ ಕಹಿಸುದ್ದಿ

ಕರ್ನಾಟಕ ಸರಕಾರದ ಮುಖ್ಯ ವಾದ ಗ್ಯಾರಂಟಿ ಯೋಜನೆ (Guarantee Scheme) ಎಂದರೆ ಅದು ಗೃಹಲಕ್ಷ್ಮಿ ಯೋಜನೆ (Gruha Lakshmi Yojana), ಈಗಾಗಲೇ ಹಲವು ಮಹಿಳೆಯರಿಗೆ ಈ ಹಣ ಜಮೆ ಯಾಗಿದ್ದು, ಅರ್ಜಿ ಹಾಕಿದ 1.13 ಕೋಟಿ ಮನೆಯೊಡತಿಯರಲ್ಲಿ 82 ಲಕ್ಷ ಅರ್ಜಿದಾರರಿಗೆ ಹಣ ವರ್ಗಾವಣೆ ಈಗಾಗಲೇ ಆಗಿದೆ. ಇದರ‌ ಜೊತೆ ಮಹಿಳೆಯರು ಶಕ್ತಿ ಯೋಜನೆ (Shakti Yojana) ಯನ್ನು ಕೂಡ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ, ಅದರೆ ಕೆಲವೊಂದು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದರೂ ಕೂಡ ಹಣ ಜಮೆ ಯಾಗಿಲ್ಲ, ಅರ್ಜಿ ಕೂಡ ಸ್ವೀಕೃತ ಅಂತ ಬಂದಿದ್ದು, ಮೆಸೇಜ್ ಕೂಡ ಬಂದಿದೆ. ಇಷ್ಟು ಆದರೂ ಹಣ ಬಂದಿಲ್ಲ ಅಂತ ಶೇಕಡಾ 50 ರಷ್ಟು ಮಂದಿ ಮಹಿಳೆಯರು ಕೇಳ್ತಿದ್ದಾರೆ, ಅದರೆ ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಕೂಡ ನಿಗದಿ ಮಾಡಿಲ್ಲ, ಈ ನಿಟ್ಟಿನಲ್ಲಿ ಇನ್ನು ಕೂಡ ಇದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

Advertisement

ಯಾಕೆ ಬಂದಿಲ್ಲ:

Advertisement

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ರಾಜ್ಯದ ಹಲವಷ್ಟು ಮಹಿಳೆಯರು ಅರ್ಜಿ‌ ಸಲ್ಲಿಕೆ ಮಾಡಿದ್ದಾರೆ, ಸುಮಾರು 28 ಲಕ್ಷ ಮಂದಿಗೆ ಇನ್ನು ಕೂಡ ಬಂದಿಲ್ಲ,ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Department of Women and Child Welfare) ಸಚಿವೆ ಮಾಹಿತಿ ಕೂಡ ನೀಡಿದ್ದಾರೆ, ಪ್ರತಿ ದಿನ 6-8 ಲಕ್ಷ ಮಹಿಳೆಯರ ಖಾತೆಗೆ ಅಷ್ಟೇ ಹಣ (Gruha Lakshmi Money) ಹಾಕಲು ಆಗುತ್ತದೆ. ಆರ್​ಬಿಐ ರೂಲ್ಸ್ (RBI Rules) ಅನುಸರಿಸಿ ಹಣ ಹಾಕಬೇಕಾಗುತ್ತದೆ, ದಿನಕ್ಕೆ ಇಂತಿಷ್ಟೆ ನಿಯಮ ಇರುವುದರಿಂದ ತಡವಾಗುತ್ತಿದೆ. ಇನ್ನು ಪ್ರತಿಯೊಂದು ಅರ್ಜಿಯ ದಾಖಲೆಗಳನ್ನು ಪರಿಶೀಲನೆ ಮಾಡಿ . ಎಲ್ಲವೂ ಮಾಹಿತಿ ಸರಿ ಇದ್ದರೆ ಮಾತ್ರ ಹಣ ವರ್ಗಾವಣೆ ಮಾಡಲು ಸಾಧ್ಯ ವಾಗುತ್ತದೆ.

Advertisement

ಯಾವ ಸಮಸ್ಯೆ:

Advertisement

ಕೆಲವು ಮಹಿಳೆಯರ ದಾಖಲೆ ಮಾಹಿತಿ ಗಳು ಸರಿಇಲ್ಲ, ಮನೆಯೊಡತಿಯರ ಹೆಸರು ಆಧಾರ್​ ಕಾರ್ಡ್​ (Aadhaar Card) ನಲ್ಲಿ ಒಂದು ರೀತಿ, ರೇಷನ್​ ಕಾರ್ಡ್​​ನಲ್ಲಿ (Ration Card) ಒಂದು ರೀತಿ ಇರುವುದರಿಂದ ಇದು ಕೂಡ ಸಮಸ್ಯೆ ಯಾಗಿ ಬಿಟ್ಟಿದೆ, ಇನ್ನು ಕೆಲವರು ಮಹಿಳೆಯರು ಬ್ಯಾಂಕ್ ಪುಸ್ತಕ ಲಿಂಕ್ ಮಾಡಲೇ ಇಲ್ಲ, ಹೀಗಾಗಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯ ವಿಲ್ಲ, ಈ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳು , ಪಂಚಾಯತಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ‌ಕೊಟ್ಟು ಮಾಹಿತಿ ಪಡೆಯುತ್ತಿದ್ದಾರೆ

ಇನ್ನು ಅವಕಾಶ ಇದೆ:

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ಅರ್ಜಿ ಸಲ್ಲಿಕೆ ಮಾಡಲು ಇನ್ನು‌ಕೊನೆಯ ದಿನ ನಿಗದಿ ಗೊಂಡಿಲ್ಲ, ಹಾಗಾಗಿ ಅವಸರ ಪಡದೇ ಇನ್ನು ಕೂಡ ನೊಂದಣಿ ಮಾಡಬಹುದಾಗಿದೆ, ಹೋದ ತಿಂಗಳ ಹಣ ಜಮೆ ಯಾಗದ ಮಹಿಳೆಯರಿಗೆ ಈತಿಂಗಳಿನಲ್ಲಿಯೇ ಒಟ್ಟಿಗೆ ಜಮೆಯಾಗಲಿದೆ.

Leave A Reply

Your email address will not be published.