ಬ್ಯಾಂಕಿನ ಉದ್ಯೋಗಿಗಳು ಹಾಗೂ ಭಾರತೀಯ ಬ್ಯಾಂಕಿಂಗ್ ಸಂಘದ ನಡುವೆ ಕಳೆದ ಸಾಕಷ್ಟು ಸಮಯಗಳಿಂದ ನಡೆಯುತ್ತಿದ್ದಂತಹ ಹಗ್ಗ ಜಗ್ಗಾಟ ಕೊನೆಗೂ ಕೂಡ ಸುಖಾಂತ್ಯವನ್ನು ಕಾಣುವಂತಹ ಸಮೀಪಕ್ಕೆ ಬಂದಿದೆ. ಬ್ಯಾಂಕಿಂಗ್ ಉದ್ಯೋಗಿಗಳು ಆಗ್ರಹಿಸಿದ ಐದು ದಿನಗಳ ಬ್ಯಾಂಕಿಂಗ್ ವರ್ಕಿಂಗ್ ಅವಧಿ ಯನ್ನು ಭಾರತೀಯ ಬ್ಯಾಂಕಿಂಗ್ ಸಂಘ ಒಪ್ಪಿಕೊಂಡಿದ್ದು ಇದನ್ನು ವರ್ಷದ ಅಂತ್ಯದ ಒಳಗೆ ಜಾರಿಗೆ ತರುವಂತಹ ಗ್ರೀನ್ ಸಿಗ್ನಲ್ ನೀಡಿದೆ. ಇನ್ನೊಂದು ಕಡೆಯಲ್ಲಿ ಭಾರತ ಸರ್ಕಾರದ ಹಸಿರು ನಿಶಾನೆ ಸಿಗುವಂತಹ ನಿರೀಕ್ಷೆಯಲ್ಲಿ ಇಬ್ಬರೂ ಕೂಡ ಇದ್ದಾರೆ. ಈ ರೀತಿ ನಡೆದರೆ ವರ್ಷದ ಅಂತ್ಯದ ಒಳಗೆ ಅಂದರೆ ಡಿಸೆಂಬರ್ ಒಳಗೆ ವಾರಕ್ಕೆ 5 ದಿನಗಳ ಕಾಲ ಮಾತ್ರ ಬ್ಯಾಂಕಿಂಗ್ ಉದ್ಯೋಗಿಗಳು ಕೆಲಸ ಮಾಡುವಂತಹ ನಿಯಮ ಜಾರಿಗೆ ಬರಲಿದೆ.
ಬ್ಯಾಂಕಿಂಗ್ ನ ಪ್ರತಿಯೊಂದು ಆಗು ಹೋಗುಗಳನ್ನು ನಿಯಂತ್ರಿಸುವಂತಹ ಅಧಿಕಾರ ಇರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಜೊತೆಗೆ ಕೂಡ ಚರ್ಚಿಸಿ ನಂತರ ನಿರ್ಧಾರಕ್ಕೆ ಬರಬೇಕಾದಂತಹ ಅಗತ್ಯ ಇದೆ. ರಿಪೋರ್ಟ್ಗಳ ಪ್ರಕಾರ ವಾರಕ್ಕೆ 5 ದಿನಗಳ ಕೆಲಸ ಜಾರಿಗೆ ಬಂದರೆ ಪ್ರತಿದಿನ ಕೆಲಸ ಮಾಡುವಂತಹ ಸಮಯ ಹೆಚ್ಚಾಗಬಹುದು ಎನ್ನುವಂತಹ ಸಾಧ್ಯತೆಯ ಮಾತುಗಳು ಕೂಡ ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ ದಿನಕ್ಕೆ 40 ನಿಮಿಷಗಳ ಕಾಲ ಹೆಚ್ಚಾಗಿ ಕೆಲಸ ಮಾಡಬೇಕಾಗಿ ಬರುತ್ತೆ.
ಅಂದರೆ ಬೆಳಿಗ್ಗೆ 9.45 ರಿಂದ ಸಂಜೆ 5:30ರ ತನಕ ಕೆಲಸವನ್ನ ಬ್ಯಾಂಕಿಂಗ್ ಉದ್ಯೋಗಿಗಳು ಮಾಡಬೇಕಾಗಿರುತ್ತದೆ. ಇದುವರೆಗೂ ಬ್ಯಾಂಕಿನ ಉದ್ಯೋಗಿಗಳಿಗೆ ಕೇವಲ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾತ್ರ ಹೆಚ್ಚುವರಿ ರಜಾ ದಿನದ ರೂಪದಲ್ಲಿ ಕಂಡುಬರುತ್ತಿತ್ತು ಆದರೆ ಇನ್ನು ಮುಂದೆ ಇದು ಬದಲಾಗುವ ಸಾಧ್ಯತೆ ಹೆಚ್ಚಾಗಿದೆ. ಬ್ಯಾಂಕಿಂಗ್ ಉದ್ಯೋಗಿಗಳ ಆಗ್ರಹ 2015 ರಿಂದಲೂ ಕೂಡ ಕೇಳಿ ಬರ್ತಾ ಇತ್ತು ಆದರೆ ಕೊನೆಗೂ ಈಗ ಈ ವರ್ಷದ ಅಂತ್ಯದಲ್ಲಿ ಇದು ಜಾರಿಗೆ ಬರುವಂತಹ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಈ ಮೂಲಕ ಬ್ಯಾಂಕಿನ ಉದ್ಯೋಗಿಗಳು ವಾರಕ್ಕೆ 5 ದಿನ ಕೆಲಸ ಮಾಡಿ ಎರಡು ದಿನ ವೀಕೆಂಡ್ ರೂಪದಲ್ಲಿ ತಮ್ಮ ಕುಟುಂಬದ ಜೊತೆಗೆ ಸಮಯವನ್ನು ಕಳೆಯಬಹುದಾಗಿದೆ.