ಚುನಾವಣೆ ಬರುತ್ತಿದ್ದಂತೆ ಸರಕಾರ ಹೊಸ ಹೊಸ ನೀತಿ ನಿಯಮಗಳನ್ನು ಜಾರಿಗೆ ತರುವುದು ಸಾಮಾನ್ಯವಾಗಿದ್ದು, ಇದೀಗ ರಾಜ್ಯ ಸರಕಾರದ ಈ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮಹತ್ತರ ನಿರ್ಧಾರಕ್ಕೆ ಬಂದಿದ್ದಾರೆ.
ರೈತಪರ ಧೋರಣೆ:
ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ರೈತಪರ ಯೋಜನೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡುತ್ತಿದ್ದು ಇದೀಗ ಕಾಫಿನಾಡಿನ ಮಿತ್ರರಿಗೆ ಅಂದರೆ ಕಾಫಿ ಬೆಳೆಗಾರರಿಗೆ ಸೌಲಭ್ಯ ನೀಡಲು ಮುಂದಾಗಿದ್ದು ರೈತರಿಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿದ್ದಾರೆ. ಕೊಡಗಿನ ಮಡಿಕೇರಿಯಲ್ಲಿ ವಿವಿಧ ಅಭಿವೃದ್ಧಿಯೋಜನೆ ಕುರಿತು ಮಾತನಾಡಿದ ಅವರು ಹೊಸ ಯೋಜನೆ ಕೈಗೆತ್ತಿಕೊಳ್ಳುವ ಸುಳಿವೊಂದನ್ನು ನೀಡಿದೆ.
ಏನು ಆ ಹೊಸ ಯೋಜನೆ:
ಕಾಫಿ ಬೆಳೆಗಾರರ ಅಂದರೆ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 10 ಹೆಚ್ ಪಿ ವರೆಗಿನ ಉಚಿತ ವಿದ್ಯುತ್ ನೀಡಲು ಘೋಷಿಸಲಾಗಿದೆ. ಈ ಮೂಲಕ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಅದೇ ರೀತಿ ಈ ಯೋಜನೆ ಜಾರಿಗೆ ತರುವಾಗ ಬಾಕಿ ಇರುವ ವಿದ್ಯುತ್ ದರವನ್ನು ಪರಿಗಣಿಸುವ ಅಗತ್ಯವಿಲ್ಲ ಹೊಸ ಯೋಜನೆ ಎಲ್ಲರಿಗೂ ಅನುಕೂಲವಾಗಲಿ ಎಲ್ಲರಿಗೂ ಉಚಿತ ವಿದ್ಯುತ್ ಪೂರೈಕೆ ಮಾಡುವಂತೆ ಅವರು ತಿಳಿಸಿದ್ದಾರೆ.
ಅದೇ ರೀತಿ ರೈತರೊಂದಿಗೆ ವಿದ್ಯಾರ್ಥಿಗಳಿಗೆ ಅನುವಾಗಲೆಂದು ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯಲ್ಲಿ ಅಂದರೆ ಉಚಿತ ಬಸ್ ಪಾಸ್ ವ್ಯವಸ್ಥೆ ನೀಡುವುದಾಗಿ ಸಿ ಎಂ ಅವರು ತಿಳಿಸಿದ್ದಾರೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಮುಂದಿನ ದಿನದಲ್ಲಿ ಯಾವ ಒಂದು ಯೋಜನೆ ಬಂದರೆ ಜನರಿಗೆ ಒಳಿತಾಗುತ್ತದೆ ಮತ್ತು ಹೇಗೆ ಎಂದು ಕಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.