Karnataka Times
Trending Stories, Viral News, Gossips & Everything in Kannada

Matru Vandana Yojana: ಮೋದಿ ಸರ್ಕಾರದ ಈ ಯೋಜನೆಯಲ್ಲಿ‌ ಗರ್ಭಿಣಿಯರಿಗೆ ಸಿಗುತ್ತೆ ರೂ 5000 ಲಾಭ..

Advertisement

ಭಾರತ ಎಷ್ಟೆ ಮುಂದುವರಿಯುತ್ತಿದ್ದರು ಬಡತನವೆನ್ನುವುದು ಇನ್ನು ನಿರ್ಮೂಲನೆ ಯಾಗಿಲ್ಲ. ದಿನದಿಂದ ದಿನಕ್ಕೆ ಬಡತನದ ಸಮಸ್ಯೆ ಹೆಚ್ಚುತ್ತಿದೆ. ಅದರಲ್ಲು ದೇಶವನ್ನು ಕಾಡುತ್ತಿರುವ ಬಹುದೊಡ್ಡ ಆರೋಗ್ಯ ಸಮಸ್ಯೆ ಅಪೌಷ್ಟಿಕತೆ (Malnutrition) ಅಪೌಷ್ಟಿಕತೆ ಎಂಬುದು ಪ್ರಸ್ತುತ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಮಗುವಿನ ತಾಯಿ‌ ಸೇವಿಸುವ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಪೋಷಕಾಂಶಗಳು ಇಲ್ಲದೇ ಇದ್ದಲ್ಲಿ ದೇಹದ ಒಟ್ಟು ಬೆಳವಣಿಗೆಗೆ ಪೋಷಣೆ ಸಿಗುವುದಿಲ್ಲ, ಮಗು ಅಪೌಷ್ಟಿಕತೆ ಯಿಂದ ಬೆಳೆಯುತ್ತವೆ, ‌ಇಂಥ ತಾಯಂದಿರಿಂದ ಜನಿಸುವ ಮಕ್ಕಳೂ ಸಹ ಕಡಿಮೆ ತೂಕ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ.

ಅಪೌಷ್ಟಿಕತೆ, ರಕ್ತಹೀನತೆ ಮತ್ತು ಶಿಶು ಆರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ, ಬಡತನವನ್ನು ಹೋಗಲಾಡಿಸಲು ಆಗಾಗ್ಗೆ ಬಂದ ಸರಕಾರಗಳು ಹಲವಾರು ಯೋಜನೆಗಳನ್ನು ರೂಪಿಸುತ್ತಲೇ ಇವೆ. ಆದರೂ , ಬಡತನವನ್ನು ಈ ದೇಶದಿಂದ ಸಂಪೂರ್ಣವಾಗಿ ಹೊರದಬ್ಬಲು ಸಾಧ್ಯವಾಗಿಲ್ಲ. ಪ್ರಧಾನಿ ಮೋದಿ ಅರಂಭಿಸಿದ ಈ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ, ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆಯ ಕುರಿತು ಮಾಹಿತಿ ಇಲ್ಲಿದೆ.

ಮಾತೃತ್ವ ವಂದನಾ ಯೋಜನೆ ಯಾರೆಲ್ಲ ಪಡೆಯಬಹುದು:

ಮೊದಲ ಮಗುವಿನ ಹೆರಿಗೆಯ ಮೊದಲು ಮತ್ತು ನಂತರದಲ್ಲಿ‌ ಮಹಿಳೆಯರಿಗೆ ಸಹಾಯ ನೀಡುವ ಸಲುವಾಗಿ, ಈ ಯೋಜನೆಯು ನಗದು ಪ್ರೋತ್ಸಾಹದ ರೂಪದಲ್ಲಿ‌ ಪರಿಹಾರವನ್ನು ಒದಗಿಸುತ್ತದೆ. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗಾಗಿ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.

ಗರ್ಭಿಣಿಯರಿಗೆ ಸಿಗುತ್ತೆ ರೂ 5000 ಲಾಭ:

Advertisement

ಮೂರು ಕಂತುಗಳಲ್ಲಿ:

ಮಾತೃ ವಂದನಾ ಹಣ ದೊರೆಯುತ್ತದೆ, ಗರ್ಭಿಣಿಯರಿಗೆ ಮೊದಲ ಕಂತಿನಡಿ 1000 ರೂ. ಜಮೆ ಆಗುತ್ತದೆ. ಎರಡನೇ ಕಂತಿನಡಿ 2 ಸಾವಿರ ರೂ. ಬರುತ್ತದೆ. ಕೊನೆಯ ಕಂತಿನಲ್ಲಿ 2 ಸಾವಿರ ರೂಪಾಯಿಯನ್ನು ಜಮೆ ಮಾಡಲಾಗುತ್ತದೆ. ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಒಟ್ಟು 5 ಸಾವಿರ ರೂ. ಜಮೆ ಆಗುತ್ತದೆ.ರಾಜ್ಯ ಸರ್ಕಾರವು ಈಗಾಗಲೇ ಮಾತೃಶ್ರೀ ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ 2018ರ ನವೆಂಬರ್ 1ರಂದು ರಂದು ಆರಂಭಿಸಲಾಯಿತು

ಅರ್ಜಿ ಸಲ್ಲಿಸುವ ವಿಧಾನ ಹೇಗೆ?

ಯೋಜನೆಗೆ ಆಫ್‌ಲೈನ್ ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು . ಎಲ್ಲಾ ದಾಖಲೆಗಳೊಂದಿಗೆ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಬೇಕು.ಬೇಕಾಗುವ ದಾಖಲಾತಿಗಳನ್ನು ಕೂಡ ನಿಡಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಅಂಗನವಾಡಿ ಶಿಕ್ಷಕಿಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ

ಎರಡನೇ ಮಗುವಿಗೂ ಈ ಯೋಜನೆ ಅನ್ವಯ:

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY) ಈ‌ ಯೋಜನೆ ಎರಡನೇ ಮಗು ಹೊಂದಿದ್ದರೂ ಯೋಜನೆಯ ಸೌಲಭ್ಯ ಬೀಡಲಿದೆ. ಈ ಮೊದಲ ಮೊದಲ ಮಗುವಿಗಷ್ಟೇ ಈ ಯೋಜನೆಯಡಿ ಗರ್ಭಿಣಿಯರಿಗೆ ರೂ 5000 ನೀಡಲಾಗುತ್ತಿತ್ತು. ‌ ಕೇಂದ್ರ ಸರ್ಕಾರವು ಈ ಯೋಜನೆಯ ನಿಯಮಗಳನ್ನು ಬದಲಾಯಿಸಿದ್ದು, ಈಗ ಎರಡನೇ ಮಗುವಿಗೂ ದೊರೆಯಲಿದೆ ಎನ್ನಲಾಗಿದೆ. ಆದರೆ, ಎರಡನೇ ಮಗು ಹೆಣ್ಣು ಮಗು ಆಗಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

Advertisement

Leave A Reply

Your email address will not be published.