Karnataka Times
Trending Stories, Viral News, Gossips & Everything in Kannada

Indian Railway: ಇನ್ಮೇಲೆ ರೈಲಿನಲ್ಲಿ ಊಟ ಮಾಡುವ ಎಲ್ಲರಿಗೂ ಹೊಸ ಭಾಗ್ಯ! ಕೇಂದ್ರ ಸರ್ಕಾರ ಘೋಷಣೆ.

ಭಾರತದ ರೈಲ್ವೆ ಇಲಾಖೆಯಲ್ಲಿ (Indian Railway Department) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ರೈಲುಗಳ ಓಡಾಟ ನಡೆಯುತ್ತೆ ಹಾಗೂ ಎಲ್ಲಕ್ಕಿಂತ ಪ್ರಮುಖವಾಗಿ ಪ್ರತಿದಿನ ಕೋಟ್ಯಾಂತರ ಜನಸಂಖ್ಯೆಯಲ್ಲಿ ರೈಲು ಪ್ರಯಾಣವನ್ನು ಮಾಡುವಂತಹ ಗ್ರಾಹಕರು ಕೂಡ ನಮ್ಮ ಭಾರತ ದೇಶದಲ್ಲಿದ್ದಾರೆ. ಅವರಿಗೆಲ್ಲರಿಗೂ ಸಂತೋಷ ನೀಡುವಂತಹ ಒಂದು ಸುದ್ದಿ ರೈಲ್ವೆ ಇಲಾಖೆಯಿಂದ ಹೊರ ಬಂದಿದ್ದು ಪ್ರತಿಯೊಬ್ಬರು ಕೂಡ ಈ ಲೇಖನಿಯನ್ನು ಕೊನೆವರೆಗೂ ಓದುವ ಮೂಲಕ ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ.

Advertisement

ಒಂದು ವೇಳೆ ನೀವು ರೈಲ್ವೆ ಪ್ರಯಾಣ ಮಾಡುವ ಸಂದರ್ಭದಲ್ಲಿ ದುಬಾರಿ ಬೆಲೆಯ ಆಹಾರ (Expensive Food) ಪದಾರ್ಥಗಳಿಂದ ಬೇಸತ್ತಿದ್ದರೆ ಖಂಡಿತವಾಗಿ ಇದನ್ನು ನಿಮಗೆ ಸಂತೋಷ ನೀಡುವ ಸದ್ದಿಯಾಗಿದೆ ಎಂದು ಹೇಳಬಹುದಾಗಿದೆ. ಹೌದು ಇನ್ಮುಂದೆ ಕೇವಲ ರೂ. 20ಗಳ ಬೆಲೆಯಲ್ಲಿ ನಿಮಗೆ ಸ್ವಾದಿಷ್ಟವಾದ ದಕ್ಷಿಣ ಹಾಗೂ ಉತ್ತರ ಭಾರತದ ಖಾದ್ಯಗಳನ್ನು ಊಟದ ರೂಪದಲ್ಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ದೂರ ಪ್ರಯಾಣದ ಸಂದರ್ಭದಲ್ಲಿ ಊಟ ಹಾಗೂ ನೀರಿಗೆ ಸಾಕಷ್ಟು ಖರ್ಚು ಮಾಡಬೇಕಾದ ಪರಿಸ್ಥಿತಿ ಒದಗಿಬರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವ ವಿಚಾರವಾಗಿದೆ. ಈ ಪರಿಸ್ಥಿತಿಯನ್ನು ಮನಗೊಂಡಿರುವ ರೈಲ್ವೆ ಇಲಾಖೆ ಆರ್ಥಿಕವಾಗಿ ದುರ್ಬಲರಾಗಿರುವಂತಹ ಪ್ರಯಾಣಿಕರಿಗೆ ಸುಲಭವಾಗಿ ಎನ್ನುವ ಕಾರಣಕ್ಕಾಗಿಯೇ ಈ ಯೋಜನೆಯನ್ನು ಹೊರ ತಂದಿದ್ದು ಕೇವಲ 20 ರೂಪಾಯಿ ಹಾಗೂ 50 ರೂಪಾಯಿಗಳಿಗೆ ಫುಡ್ ಪ್ಯಾಕೆಟ್ ಅನ್ನು ನೀಡುವ ಕೆಲಸವನ್ನು ಮಾಡಲು ಹೊರಟಿದೆ.

Advertisement

ಇವುಗಳಲ್ಲಿ ನಿಮಗೆ ಇಷ್ಟ ಎನಿಸುವಂತಹ ಖಾದ್ಯ ತಿನಿಸುಗಳು ಇರುತ್ತವೆ ಎಂಬುದನ್ನು ಕೂಡ ನೀವು ಮನಗಾಣ ಬೇಕಾಗುತ್ತದೆ. ಪ್ರಯಾಣಿಕರೆಲ್ಲರೂ ಹೊಟ್ಟೆ ತುಂಬ ಊಟ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. 50 ರೂಪಾಯಿ ಆಹಾರದ ಪ್ಯಾಕೇಜ್ (Food package) ನಲ್ಲಿ ನಿಮಗೆ 350 ಗ್ರಾಂ ತೂಕದ ಆಹಾರವನ್ನು ನೀಡಲಾಗುತ್ತದೆ ಇದರಲ್ಲಿ ನೀವು ಚೋಲೆ ರೈಸ್ ಚೋಲೆ ಬಟೊರೆ ಮಸಾಲ್ ದೋಸೆ ಪಾವ್ ಬಾಜಿ ಗಳಂತಹ ಖಾದ್ಯಗಳನ್ನು ನೀವು ಪಡೆದುಕೊಳ್ಳಬಹುದಾಗಿದ್ದು ಮಾತ್ರವಲ್ಲದೆ IRCTC ಈಗಾಗಲೇ ಪ್ಯಾಕೇಜ್ ಮಾಡಿರುವಂತಹ ಶುದ್ಧವಾದ ಕುಡಿಯುವ ನೀರನ್ನು ಪೂರೈಸುವಂತೆ ಕೂಡ ರೈಲ್ವೆ ಇಲಾಖೆಗೆ ಸೂಚಿಸಿದೆ. ಆರಂಭದಲ್ಲಿ ಇವುಗಳನ್ನು ದೇಶದ 64 Railway Station ನಲ್ಲಿ ಆರು ತಿಂಗಳುಗಳ ಕಾಲ ಪ್ರಯೋಗಾತ್ಮಕ ರೀತಿಯಲ್ಲಿ ಚಾಲನೆ ನೀಡುವುದಕ್ಕೆ ಯೋಚಿಸಲಾಗಿದ್ದು ಮುಂದಿನ ದಿನಗಳಲ್ಲಿ ಯೋಚಿಸಿ ಇವುಗಳನ್ನು ಯಾವ ರೀತಿ ದೇಶಾದ್ಯಂತ ಎಲ್ಲಾ ರೈಲ್ವೆ ಸ್ಟೇಷನ್ಗಳಲ್ಲಿ ಜಾರಿಗೆ ತರಬೇಕು ಎನ್ನುವುದರ ಕುರಿತಂತೆ ಯೋಜನೆಗಳು ನಡೆಯಲಿವೆ ಎಂಬುದಾಗಿ ತಿಳಿದು ಬಂದಿದೆ.

Advertisement

General ಭೋಗಿಯ ಗ್ರಾಹಕರಿಗೆ ಸಾಮಾನ್ಯವಾಗಿ ಈ ಮೊದಲು ಆಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಸಾಕಷ್ಟು ದೂರ ಹೋಗಬೇಕಾಗಿತ್ತು, ಅದನ್ನು ಪರಿಗಣಿಸಿರುವಂತಹ ರೈಲ್ವೆ ಇಲಾಖೆ ಈಗ ಜನರಲ್ ಭೋಗಿಯ (General Bogie) ಸಾಮಾನ್ಯ ಪ್ರಯಾಣಿಕರಿಗೂ ಕೂಡ ಆಹಾರ ಸುಲಭವಾಗಿ ತಲುಪುವಂತೆ ಹತ್ತಿರದಲ್ಲಿ ನೀಡಲಾಗುತ್ತಿದೆ. ರೈಲ್ವೆ ಇಲಾಖೆಯ ನಿಯಮದ ಪ್ರಕಾರ ರೈಲು ಹೊರಟ 10 ನಿಮಿಷಗಳಿಗಾಗಿ ನೀವು ನಿಮ್ಮ ಭೋಗಿ ಅಥವಾ ಸೀಟ್ನಲ್ಲಿ ಇಲ್ಲದೆ ಹೋದಲ್ಲಿ ನಿಮ್ಮ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಲಾಗುತ್ತದೆ ಎನ್ನುವಂತಹ ಹೊಸ ನಿಯಮವನ್ನು ಕೂಡ ರೈಲ್ವೆ ಇಲಾಖೆ ಜಾರಿ ಮಾಡಿದೆ.

Leave A Reply

Your email address will not be published.