ರೇಷನ್ ಕಾರ್ಡ್ (Ration Card) ಇದ್ದವರು ಈ ಕೆಲಸ ಮಾಡುವುದು ಕಡ್ಡಾಯ ಎಂದು ಆಹಾರ ಇಲಾಖೆ ಇದೀಗ ಸೂಚನೆ ನೀಡಿದೆ. ಹೌದು ಈ ಕೆಲಸ ಮಾಡದೇ ಇದ್ದಲ್ಲಿ ರೇಷನ್ ಕಾರ್ಡ್ ರದ್ದು ಆಗಲಿದೆ. ಹಾಗಾಗಿ ಅಕ್ಟೋಬರ್ 31 ರ ಒಳಗೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡ ಬೇಕು. ಹಾಗಿದ್ದಲ್ಲಿ ಪಡಿತರ ಚೀಟಿದಾರರು ಏನು ಮಾಡಬೇಕು ಎಂದು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ.
ಇದೀಗ ಆಹಾರ ಇಲಾಖೆಯು ಪಡಿತರ ಚೀಟಿ (Ration Card) ಹೊಂದಿರುವವರು ಕೆವೈಸಿ ಮಾಡುವುದನ್ನು ಕಡ್ಡಾಯ ಮಾಡಿದ್ದು ಇದಕ್ಕಾಗಿ ಕೊನೆಯ ದಿನಾಂಕ ನಿಗದಿ ಮಾಡಿದೆ. ಹಾಗಾಗಿ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆಯಿಂದ ಸೂಚನೆಗಳು ಬಂದಿದ್ದು ಪಡಿತರ ಚೀಟಿದಾರರು ಇಕೆವೈಸಿ ಮಾಡದಿದ್ದರೆ ಪಡಿತರ ಪಡೆಯಲು ಸಾಧ್ಯ ಆಗೋದಿಲ್ಲ ಆದ್ದರಿಂದ ಯಾವುದೇ ಪಡಿತರ ಚೀಟಿದಾರರು e-KYC ಅನ್ನು ಕಡ್ಡಾಯವಾಗಿ ಮಾಡಬೇಕು.
ಯಾಕೆ ಅಗತ್ಯ!
ಈಗಾಗಲೇ ಸರಕಾರದಿಂದ ಸಿಗುವ ಯೋಜನೆಗಳಿಗೆ ರೇಷನ್ ಕಾರ್ಡ್ (Ration Card) ಕಡ್ಡಾಯ ಆಗಿದೆ. ಹಾಗೆಯೇ ರೇಷನ್ ಕಾರ್ಡ್ಗೆ ಇಕೆವೈಸಿ ಮಾಡಿಸುವುದು ಕಡ್ಡಾಯ ಮಾಡಿದೆ.ಇದರಿಂದ ನಕಲಿ ರೇಷನ್ ಕಾರ್ಡ್ (Fake Ration Card) ಪತ್ತೆ ಮಾಡಬಹುದು. ಹಾಗಾಗಿ ಇದರಲ್ಲಿ ಅಸಲಿ ರೇಷನ್ ಕಾರ್ಡ್ ಯಾವುದು ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯಲು ಸರ್ಕಾರ ಇಕೆವೈಸಿ ಕಡ್ಡಾಯ ಮಾಡಿದೆ.
ಕೆವೈಸಿ ಮಾಡಲು ಈ ದಾಖಲೆ ಬೇಕು!
- ಪಡಿತರ ಚೀಟಿಯ ಒರಿಜಿನಲ್ ಪ್ರತಿ
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್ನ ಫೋಟೋಕಾಪಿ
- ಕುಟುಂಬದ ಯಜಮಾನನ ಪೋಟೋ
ಮೊದಲಿಗೆ ಆಹಾರ ಸರಬರಾಜು ವೆಬ್ ಸೈಟ್
https://ahara.kar.nic.in ಇಲ್ಲಿ ನಿಮ್ಮ ವಿಭಾಗದ ಜಿಲ್ಲೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ, ಬಳಿಕ ಪಡಿತರ ಚೀಟಿ ಇ ಕೆವೈಸಿ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ. ಇಲ್ಲಿ with OTP ಆಪ್ಷನ್ ಅನ್ನು ಸೆಲೆಕ್ಟ್ ಮಾಡಿ ಕೊಳ್ಳಿ ನಂತರ ಮುಂದುವರೆದು ನಿಮ್ಮ ನೋಂದಾಯಿಸಿದ ಮೊಬೈಲ್ ನಂಬರಿಗೆ ಓಟಿಪಿಯು ಬರುತ್ತದೆ ಅದನ್ನು ಹಾಕಿ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಗು ಆಧಾರ್ ನಂಬರ್ ಹಾಕಿದರೆ ನಿಮ್ಮ Ration Card ಲಿಂಕ್ ಆಗಲಿದೆ.