Karnataka Times
Trending Stories, Viral News, Gossips & Everything in Kannada

ಸಹಕಾರಿ ಬ್ಯಾಂಕ್ ಗಳಲ್ಲಿ ಅಕೌಂಟ್ ಇರುವ ರೈತರಿಗೆ ಗುಡ್ ನ್ಯೂಸ್! ರಾಜ್ಯ ಸರ್ಕಾರ ಘೋಷಣೆ

advertisement

ಸರಕಾರವು ಬಡ ವರ್ಗದ ಜನತೆಗೆ, ಮಹಿಳೆಯರಿಗೆ, ಆರ್ಥಿಕ ವಾಗಿ ಹಿಂದುಳಿದ ಅವರಿಗೆ ಸಾಕಷ್ಟು ಯೋಜನೆಯನ್ನು ಸರಕಾರ ಜಾರಿ ಮಾಡಿದೆ.‌ ಹೌದು ಅದೇ ರೀತಿ ರೈತರಿಗಾಗಿಯು ಸರಕಾರ ಹಲವು ರೀತಿಯ ಯೋಜನೆಯನ್ನು ಜಾರಿ ಮಾಡಿದ್ದು ಇದೀಗ ಯಶಸ್ವಿನಿ ಯೋಜನೆಯ ಮೂಲಕ ಹೊಸ ಅವಕಾಶ ವನ್ನು ಕಲ್ಪಿಸಿದ್ದು ಈ ಯೋಜನೆಯ ಮೂಲಕ ರೈತರು ವೈದ್ಯಕಿಯ ಚಿಕಿತ್ಸಾ ವೆಚ್ಚವನ್ನು ಪಡೆಯಬಹುದು.‌ಈ ಬಗ್ಗೆ ಅಪ್ಡೇಟ್ ಮಾಹಿತಿ ಇಲ್ಲಿದೆ.

Yashaswini Yojana:

ರೈತರಿಗಾಗಿ ಸರಕಾರವು ಯಶಸ್ವಿನಿ ಯೋಜನೆ (Yashaswini Yojana) ಯನ್ನು ಜಾರಿ ಮಾಡಿತ್ತು. ಹೌದು 2003 ರಲ್ಲಿ ಮೊದಲ ಬಾರಿಗೆ ಪ್ರಾರಂಭ ಮಾಡಿದ್ದು 2003-04 ರಿಂದ 2017-18 ರವರೆಗೆ ಸಕ್ರಿಯ ವಾಗಿತ್ತು. ಬಳಿಕ‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಈ ಯೋಜನೆ ವರ್ಗಾವಣೆ ಆಗಿದ್ದು ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಜೊತೆ ಮುಂದುವರಿದೆ.‌ಬಳಿಕ ಈ ಯೋಜನೆಯು ಸ್ಥಗಿತಗೊಂಡಿದ್ದು, 2018 ರಿಂದ ಆರೋಗ್ಯ ಕರ್ನಾಟಕ ಯೋಜನೆಯಡಿ ವಿಲೀನ ಗೊಂಡಿದೆ.

ಯಾರು ಪಡೆಯಬಹುದು:

 

Image Source: The Hindu

 

ಈ‌ ಯೋಜನೆಯು ಸಹಕಾರ ಸಂಘಗಳ ಸದಸ್ಯರು ಆಗಿದ್ದರೆ ಅಲ್ಲಿ ಖಾತೆ ತೆರೆದಿದ್ದರೆ ರೈತರು ಈ ಸೌಲಭ್ಯ ವನ್ನು ಪಡೆದು ಕೊಳ್ಳ ಬಹುದಾಗಿದೆ. ಹೌದು ರೈತರ ಅನುಕೂಲಕ್ಕಾಗಿ ಜಾರಿಗೊಂಡಿರುವ ‌ ಯೋಜನೆಯಾಗಿದ್ದು, ಇದರಲ್ಲಿ ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕಿಯ ಚಿಕಿತ್ಸಾ ವೆಚ್ಚದ ಮೊತ್ತ ಸಿಗಲಿದ್ದು ರೂ. 5.00 ಲಕ್ಷದ ವರೆಗೆ ಸಿಗಲಿದೆ.ಈ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮೊದಲು ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿ ಇರಬೇಕು.

advertisement

ಈ ವೆಚ್ಚ ಸಿಗಲಿದೆ:

ಯಶಸ್ವಿನಿ ಯೋಜನೆ (Yashaswini Yojana) ಯಡಿಯಲ್ಲಿ ನಿಗದಿ ಪಡಿಸಿರುವ ನೆಟ್ ವರ್ಕ್ ಆಸ್ಪತ್ರೆಯಲ್ಲಿ ‌ ಚಿಕಿತ್ಸಾ ಸೌಲಭ್ಯ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರ ಚಿಕಿತ್ಸೆಯ ವೆಚ್ಚ, ಆಪರೇಷನ್ ಥಿಯೇಟರ್ ಬಾಡಿಗೆ, ಅರವಳಿಕೆ ತಾರ ಫೀ, ಕನ್ಸಲ್ಟಂಟ್ ಫೀ, ಬೆಡ್ ಚಾರ್ಜ್. ನರ್ಸ್ ಫೀ ಇತ್ಯಾದಿ ವೆಚ್ಚ ಇರಲಿದೆ.

ಇದರಲ್ಲಿ‌ ಸದಸ್ಯರಿಗೆ ಯೂನಿಕ್‌ ಐಡಿ ಸಂಖ್ಯೆಯುಳ್ಳ ಕಾರ್ಡ್‌ಅನ್ನು ನೀಡಲಿದ್ದು ಈ ಕಾರ್ಡಿನಲ್ಲಿ ಪ್ರಾಥಮಿಕ ಸದಸ್ಯರ ಸಹಕಾರ ಸಂಘದ ಸದಸ್ಯತ್ವದ ವಿವರಗಳು ಮತ್ತು ಅವರ ಕುಟುಂಬ ಸದಸ್ಯರ ಮಾಹಿತಿ, ವಾರ್ಷಿಕ ಮೊತ್ತ ಪಾವತಿಸಿರುವ ವಿವರ ಫೋಟೊ ಇರುತ್ತದೆ. ಈ ಯೋಜನೆಯಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಕಾಯಿಲೆಗಳು, ನರಗಳಿಗೆ ಸಂಬಂಧಿಸಿದ ಸಮಸ್ಯೆ, ಕಣ್ಣಿನ ಕಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ವಿಶೇಷ ಕಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ದಾಖಲೆ ಬೇಕು:

  • ರೇಷನ್ ಕಾರ್ಡ್
  • ಮನೆಯ ಸದಸ್ಯರ ಆಧಾರ್ ಕಾರ್ಡ್
  • ಪ್ರತಿಯೊಬ್ಬರ ಎರಡು ಫೋಟೋ
  • ವಿಳಾಸ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ ಇತ್ಯಾದಿ

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ನೀವು ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ ಶಾಖೆ ಭೇಟಿ ಮಾಡಿ

advertisement

Leave A Reply

Your email address will not be published.