ಹಿರಿಯನಾಗರಿಕರಿಗೆ (Senior Citizens) ಸರಕಾರ ಇದೀಗ ಗುಡ್ ನ್ಯೂಸ್ ಮಾಹಿತಿ ಯೊಂದನ್ನು ನೀಡಿದೆ. ಹೌದು ಜೀವ ವಿಮಾ (Life Insurance) ಕಂತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಹಾಗೂ ಆರೋಗ್ಯ ರಕ್ಷಣೆಗಾಗಿ ಹಿರಿಯ ನಾಗರಿಕರು ಪಾವತಿ ಸುವ ಪ್ರೀಮಿ ಯಂ ಗೆ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತೆ ಎನ್ನುವ ಸುದ್ದಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.
ಈಗಾಗಲೇ 70 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ನಾಗರಿ ಕರಿಗೆ ಆಯುಷ್ಮಾನ್ ಭಾರತ್ ಯೋಜನೆ (Ayushman Bharat Scheme) ಯನ್ನು ಜಾರಿ ಮಾಡಿದ್ದು ಹಿರಿಯ ನಾಗರಿಕರು (Senior Citizens) 5 ಲಕ್ಷ ರೂ. ವರೆಗೆ ಉಚಿತ ಆರೋಗ್ಯ ವಿಮೆ ಸೌಲಭ್ಯವನ್ನು ಪಡೆಯಲು ಅವಕಾಶ ಇರಲಿದೆ. ಹಾಗೆಯೇ ಜೀವವಿಮೆ ಪ್ರೀಮಿಯಂ ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯ ಮೇಲೆ ನಿಗದಿ ಪಡಿಸಿದಂತಹ ಜಿಎಸ್ಟಿ ತೆರಿಗೆಯನ್ನು ತೆಗೆಯ ಬೇಕು ಎಂದು ಸರಕು ಸೇವಾ ತೆರಿಗೆ ಮಂಡಳಿಗೆ ಜಿಎಸ್ಟಿ ರಾಜ್ಯ ಸಚಿವರ ಸಮೂಹ ಶಿಫಾರಸು ಮಾಡಿದೆ.
ಹಿರಿಯ ನಾಗರಿಕರ (Senior Citizen’s) ಆರೋಗ್ಯ ವಿಮೆ (Health Insurance) ಯ 5 ಲಕ್ಷ ರು.ಗಳ ಕವರೇಜ್ ವರೆ ಗಿನ ವಿಮೆಗಳಿಗೆ ಜಿಎಸ್ಟಿಯಿಂದ ವಿನಾ ಯಿತಿ ನೀಡಬೇಕು ಎಂದು ಶಿಫಾರಸು ಮಾಡಿದ್ದು, 5 ಲಕ್ಷ ರು.ಗಿಂತ ಅಧಿಕ ಮೊತ್ತದ ಕವರೇಜ್ನ ವಿಮೆಗಳ ಮೇಲಿನ ಶೇ.18 ತೆರಿಗೆ ಮುಂದುವ ರಿಯಲಿದ್ದು ಹಿರಿಯ ನಾಗರಿಕರ ವಿಮೆ ಮೇಲಿನ ತೆರಿಗೆಗಳನ್ನು ಜಿಎಸ್ಟಿ ಮಂಡಳಿ ರದ್ದು ಗೊಳಿಸುವ ನಿರೀಕ್ಷೆಯಿದೆ.
ಇವುಗಳ ಜಿಎಸ್ ಟಿ ರದ್ದು!
ಹಾಗೆಯೇ 20 ಲೀ. ನೀರಿನ ಬಾಟಲಿ, ಬೈಸಿಕಲ್ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಹಾಗೆಯೇ ಐಷರಾಮಿ ಕೈಗಡಿ ಯಾರ ಮತ್ತು ಐಷರಾಮಿ ಶೂಗಳ ಮೇಲಿನ ಜಿಎಸ್ಟಿ ಪ್ರಮಾಣವನ್ನು ಶೇ.18ರಿಂದ ಶೇ.28ಕ್ಕೆ ಏರಿಸಬೇಕು ಎಂದು ಉಲ್ಲೇಖ ಮಾಡಲಾಗಿದೆ.
ಈಗಾಗಲೇ ಈ ಶಿಫಾರಸನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮುಖ್ಯಸ್ಥರಾಗಿರುವ ಜಿಎಸ್ಟಿ ಮಂಡ ಳಿಗೆ ಸಲ್ಲಿಕೆ ಮಾಡಿದ್ದು, ಈ ಬಗ್ಗೆ ಜಿಎಸ್ಟಿ ಮಂಡಳಿ ತನ್ನ ಮುಂದಿನ ತಿಂಗಳಿನ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಮಾಡಲಿದೆ.