Govt Update: ಮಾರ್ಚ್ 31ರ ಒಳಗೆ ಈ 5 ಕೆಲಸಗಳನ್ನು ಮಾಡಿ ಮುಗಿಸಿ ಇಲ್ಲದಿದ್ದರೆ ಸಮಸ್ಯೆ ಖಚಿತ

Advertisement
ಮಾರ್ಚ್ ತಿಂಗಳು ಮುಗಿತು ಅಂದರೆ ಆರ್ಥಿಕ ವರ್ಷ ಮುಗಿಯಲಿದೆ ಎಂದು ಅರ್ಥ. ಅಂದರೆ 2022-23ರ ಆರ್ಥಿಕ ವರ್ಷ ಮುಗಿದು 2023 -24ರ ಆರ್ಥಿಕ ವರ್ಷ ಆರಂಭವಾಗಲಿದೆ. 2022 -23ರ ಆರ್ಥಿಕ ವರ್ಷ (Financial Year) ಮುಗಿಯಲು ಇನ್ನು ಕೇವಲ 10 ದಿನಗಳು ಬಾಕಿ ಇವೆ. ಈ 10 ದಿನಗಳಲ್ಲಿ ನೀವು ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸಗಳು ಇದ್ದರೂ ಅದನ್ನು ಮುಗಿಸಿಕೊಳ್ಳಬೇಕು ಇಲ್ಲದಿದ್ದರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್(Aadhaar Card) ನೊಂದಿಗೆ ಲಿಂಕ್ ಮಾಡುವುದು, ವಯೋವಂದನಾ ಯೋಜನೆಯಲ್ಲಿ ಹೂಡಿಕೆ ಮಾಡುವುದು, ಡಿಮ್ಯಾಟ್ ನಾಮಿನಿಯನ್ನು ಸೇರಿಸುವ ವ್ಯವಹಾರ ಮೊದಲಾದವನ್ನು ಕೂಡಲೇ ಮಾಡಿ ಮುಗಿಸಿ. ಮುಖ್ಯವಾಗಿ 10 ದಿನಗಳಲ್ಲಿ ನೀವು ಮಾಡಲೇಬೇಕಾದ ಹಣಕಾಸಿನ ವ್ಯವಹಾರದ ಬಗ್ಗೆ ಇಲ್ಲಿದೆ ಡೀಟೇಲ್ಸ್.
1. Pan ಅನ್ನು Aadhaar ನೊಂದಿಗೆ ಲಿಂಕ್:
ಇನ್ನೂ ನೀವು ನಿಮ್ಮ ಪಾನ್ ಕಾರ್ಡ್ PAN Card) ಅನ್ನು ಆಧಾರ್ ಕಾರ್ಡ್ (Aadhaar Card) ನೊಂದಿಗೆ ಲಿಂಕ್ ಮಾಡಿದೆ ಇದ್ದರೆ ತಕ್ಷಣವೇ ಈ ಕೆಲಸ ಮಾಡಿ ಮುಗಿಸಿ. ಸರ್ಕಾರವು ಈಗಾಗಲೇ ಈ ಬಗ್ಗೆ ಜನರಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿದೆ. 2023 ಒಳಗೆ ಪ್ಯಾನ್ ಆಧಾರ್ ಲಿಂಕ್ (PAN Aadhaar Link) ಆಗದೆ ಇದ್ದಲ್ಲಿ ನಿಮ್ಮ ಪ್ಯಾನ್ ಸಂಖ್ಯೆ ಅಮಾನ್ಯವಾಗುತ್ತದೆ. ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಬ್ಯಾಂಕ್ ಖಾತೆ, ಹೂಡಿಕೆ, ಆದಾಯ ತೆರಿಗೆ ಮೊದಲಾದವುಗಳಿಗೆ ಸಂಬಂಧಪಟ್ಟ ಯಾವ ಕೆಲಸವನ್ನು ಕೂಡ ನೀವು ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಮೊದಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಸಿಕೊಳ್ಳಿ.
2. Demat Account ನಾಮಿನಿ ಸೆಕ್ಯೂರಿಟಿ:
ಎಲ್ಲಾ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆದಾರರಿಗೆ ನಾಮಿನಿಯನ್ನು ಹೆಸರಿಸುವುದು ಕಡ್ಡಾಯವಾಗಿದೆ. ಇನ್ನು ಕೇವಲ 10 ದಿನಗಳು ಮಾತ್ರ ನಿಮ್ಮ ನಾಮಿನಿ ಹೆಸರನ್ನ ಸೇರಿಸಲು ಅವಕಾಶವಿದೆ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಗೆ ನಾಮಿನಿ ಹೆಸರನ್ನು ಸೇರಿಸದೆ ಇದ್ದಲ್ಲಿ ಏಪ್ರಿಲ್ ಒಂದರಿಂದ ಶೇರುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ.
3. Vaya Vandana Yojana ಯಲ್ಲಿ ಹೂಡಿಕೆ:
ಸರ್ಕಾರ (Govt) ಜಾರಿಗೆ ತಂದಿರುವ ವಯೋವೊಂದನ ಯೋಜನೆಯಲ್ಲಿ ಹೂಡಿಕೆ ಮಾಡಲು ಇನ್ನು ಕೇವಲ 10 ದಿನಗಳು ಮಾತ್ರ ಬಾಕಿ ಇದೆ. ಇದು ಹಿರಿಯ ನಾಗರಿಕರಿಗೆ ಅತ್ಯಂತ ಅನುಕೂಲವಾದ ಭವಿಷ್ಯ ನಿಧಿ ಯೋಜನೆಯಾಗಿದೆ. ಈ ಯೋಜನೆಯನ್ನು ಮುಂದುವರಿಸುವುದಕ್ಕೆ ಸರ್ಕಾರದಿಂದ ಅಧಿಸೂಚನೆ ಬಂದಿಲ್ಲ ಹಾಗಾಗಿ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಮಾರ್ಚ್ 31 2023 ಕೊನೆಯ ದಿನಾಂಕ.
4. March 31ರ ಒಳಗೆ ಹೂಡಿಕೆ ಮಾಡಿದರೆ ತೆರಿಗೆ ಉಳಿತಾಯ:
ತೆರಿಗೆ ಉಳಿತಾಯ ಹೂಡಿಕೆ ಮಾಡಲು ಮಾರ್ಚ್ 31ರ ವರೆಗೆ ಮಾತ್ರ ಅವಕಾಶವಿದೆ. ಅಂದರೆ ನೀವು 2022-23ರ ಹಣಕಾಸು ವರ್ಷದಲ್ಲಿ ತೆರಿಗೆ ಉಳಿಸಲು ಹೂಡಿಕೆ ಮಾಡಬೇಕು ಅಂದರೆ ಕೇವಲ ಹತ್ತು ದಿನಗಳು ಮಾತ್ರ ಬಾಕಿ ಉಳಿದಿದೆ. ತೆರಿಗೆ ಉಳಿಸುವುದಕ್ಕಾಗಿ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ಉಳಿತಾಯ ಮ್ಯೂಚುವಲ್ ಫಂಡ್ ಮೊದಲಾದವುಗಳಲ್ಲಿ ಹೂಡಿಕೆ ಮಾಡಬಹುದು.
5. Mutual Funds ಗಳಲ್ಲಿ ನಾಮ ನಿರ್ದೇಶನ:
ನೀವು ಮ್ಯೂಚುವಲ್ ಫಂಡ್ಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಗಿಸದೆ ಇದ್ದರೆ ಮಾರ್ಚ್ 31 2023ರ ಒಳಗೆ ಮುಗಿಸಿಕೊಳ್ಳಿ. ಒಂದು ವೇಳೆ ನೀವು ಹತ್ತು ದಿನಗಳಲ್ಲಿ ಈ ಕೆಲಸ ಮಾಡದೆ ಇದ್ದಲ್ಲಿ ನಿಮ್ಮ ಮ್ಯೂಚುವಲ್ ಫಂಡ್ ಖಾತೆಯನ್ನು ತಡೆಹಿಡಿಯಲಾಗುತ್ತದೆ.