Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ಬಗ್ಗೆ ಮೀಟಿಂಗ್ ಮುಗಿಸಿ ಸಿಎಂ ಇನ್ನೊಂದು ನಿರ್ಧಾರ ಘೋಷಣೆ

advertisement

ಇಂದು ಬಡ ವರ್ಗದ ಜನರನ್ನು ಮೇಲ್ದರ್ಜೆಗೆ ಕೊಂಡ್ಯೊಯಲು ಸರಕಾರ ಹಲವು‌ ರೀತಿಯ ಯೋಜನೆಗಳನ್ನು ರೂಪಿಸುತ್ತಲೇ ಬಂದಿದೆ. ಹೌದು ಅದರಲ್ಲಿ ಬಡ ವರ್ಗದ ಜನತೆಗೆ ನೀಡುವ ಪಡಿತರ ಚೀಟಿ (Ration Card) ಕೂಡ ಒಂದಾಗಿದೆ.ಈ ಪಡಿತರ ಪಡೆಯಲು ಇಂದು ರೇಷನ್ ಕಾರ್ಡ್ (Ration Card) ಬಹಳ ಮುಖ್ಯ ವಾಗಿದೆ.ಅದರಲ್ಲೂ ಬಿಪಿಎಲ್ ಕಾರ್ಡ್ ಇದ್ದರೆ ಸರಕಾರದ ಹಲವು ಸೌಲಭ್ಯ ಗಳು ನಿಮಗೆ ಸಿಗಲಿದೆ.‌ ಇದೀಗ ಪಡಿತರ ಪಡೆಯಲು ಮೋಸ ಮಾಡಿ ಕಾರ್ಡ್ ಮಾಡಿಕೊಂಡ ದಾಖಲೆ ಗಳು ಮತ್ತು ಅನರ್ಹರು ಕೂಡ ಪಡಿತರ ಪಡೆಯುವ ಸಂಖ್ಯೆ ‌ ಹೆಚ್ಚಾಗಿದ್ದು ಇದೀಗ ಇಂತವರಿಗೆ ಹೊಸ ಕ್ರಮವನ್ನು ಕೈಗೊಂಡಿದೆ.

ಹೌದು ಇಂದು ಪಡಿತರ ವಿತರಣೆಯಲ್ಲಿ ಕೂಡ ಸಾಕಷ್ಟು ಅಕ್ರಮಗಳು ಆಗುತ್ತಿದ್ದು ಇದೀಗ ತಡೆಗಟ್ಟಲು ಹೊಸ ನಿಯಮ ಜಾರಿಗೆ ತಂದಿದೆ. ಹೌದು ಪಡಿತರ ವಿತರಕರು ದಿನಕ್ಕೆ ಮೂರು ಭಾರಿ ಒಟಿಪಿ ಕಳಿಸಿದ್ರೆ ಮಾತ್ರ ಪಡಿತರ ಪಡೆಯಬಹುದು ಇದಲ್ಲದೆ, ಬೆರಳಚ್ಚು ಮತ್ತು ಐರಿಸ್ ಪ್ರಕ್ರಿಯೆಯು ಕೂಡ ಇರಲಿದೆ.

 

Image Source: The Hindu

 

advertisement

ಪಡಿತರ ಚೀಟಿದಾರರಿಗೆ ಪಿಒಎಸ್ ಯಂತ್ರದ ಆಧಾರದ ಮೂಲಕ ಪಡಿತರವನ್ನು ವಿತರಣೆ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಫಲಾನುಭವಿಯ ಕೈಯ ರೇಖೆಗಳನ್ನು ಧರಿಸಿದಾಗ ಅಥವಾ ಯಾವುದೇ ಚರ್ಮದ ಸಮಸ್ಯೆ ಇದ್ದಾಗ ಯಂತ್ರವು ಬೆರಳಚ್ಚು ತೆಗೆದುಕೊಳ್ಳಲು ಸಾಧ್ಯವಾಗಲ್ಲ. ಇದಕ್ಕಾಗಿ ಫಲಾನುಭವಿಯ ಕುಟುಂಬದ ಯಾವುದೇ ಸದಸ್ಯರ ಹ್ಯಾಂಡ್ಪ್ರಿಂಟ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವ ಮೂಲಕ ಪಡಿತರ ವಿತರಣೆ ಮಾಡಲಾಗುತ್ತದೆ

 

Image Source: dtnext

 

ಅದರಲ್ಲೂ ಇಂದು ಆಧಾರ್ ಕಾರ್ಡ್ (Aadhaar Card) ಗೆ ‌ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ ಒಟಿಪಿ (OTP) ಕಳುಹಿಸುವ ಮೂಲಕ ಹೆಚ್ಚಿನ‌ ಮೋಸ ವಂಚನೆಗಳು ನಡೆಯುತ್ತಿದೆ. ಈಗಾಗಲೇ ಈ ಬಗ್ಗೆ ಇಲಾಖೆಗೆ ದೂರು ಬಂದಿದ್ದು ‌ಇದೀಗ ಹೊಸ ಕ್ರಮ‌ಜಾರಿ ಮಾಡಿದೆ. ಫಲಾನುಭವಿಗಳಿಗೆ ಪಡಿತರವು ಬೆರಳಚ್ಚು ನೀಡುವ ಮೂಲಕ ಮತ್ತು ಒಟಿಪಿ ಮೂಲಕ ವಿತರಣೆ ಮಾಡಲಾಗುತ್ತಿತ್ತು. ಆದರೆ ಕೆಲವೊಮ್ಮೆ ಇದರಿಂದ ಸಮಸ್ಯೆ ಆಗಿ ಪಡಿತರದಿಂದ ವಂಚಿತರಾಗಿದ್ದರು. ಬಳಿಕ ಕಣ್ಣುಗಳ ಐರಿಸ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಪಡಿತರ ನೀಡುವ ಹೊಸ ಮಾರ್ಗವನ್ನು ಜಾರಿಗೆ ತಂದಿತ್ತು.‌ ಅದನ್ನು ಈಗ ‌ಮತ್ತೆ ಜಾರಿಗೆ ಮಾಡಲಿದೆ. ಈಗ ಐರಿಸ್ ಸ್ಕ್ಯಾನರ್ ಹೊಂದಿರುವ ಯಂತ್ರವನ್ನು ಅಳವಡಿಸಿದ್ದು ಇದು ಫಲಾನುಭವಿಯ ಕಣ್ಣುಗುಡ್ಡೆಗಳನ್ನು ಸ್ಕ್ಯಾನ್ ಮಾಡುವ ಮೂಲಕ ಮಾಹಿತಿಯನ್ನು ದೃಢ ಮಾಡಲಿದೆ.

ಹಾಗಾಗಿ ಆಹಾರ ಇಲಾಖೆಯು ಈ ಬಗ್ಗೆ ಕಣ್ಣಿಟ್ಟಿದ್ದು ಇಂದು ಆಕ್ರಮವಾಗಿ ಪಡಿತರ ಪಡೆಯುದಲ್ಲದೆ, ಸುಳ್ಳು ದಾಖಲೆ ನೀಡಿ‌ಕೂಡ ರೇಷನ್ ಪಡೆದವರು ಬಹಳಷ್ಟು ಮಂದಿ ಇದ್ದಾರೆ.‌ ಹಾಗಾಗಿ ಆಹಾರ‌ ಇಲಾಖೆಯು‌ ಇನ್ನು ಹೆಚ್ಚು ಕಟ್ಟು ನಿಟ್ಟಾಗಿ ನಿಗಾ ವಹಿಸಲಿದೆ.

advertisement

Leave A Reply

Your email address will not be published.