Karnataka Times
Trending Stories, Viral News, Gossips & Everything in Kannada

MSP: ಬೆಳೆ ಪರಿಹಾರ ಸರಿಯಾಗಿ ಬರದಿದ್ದರೂ ರೈತರಿಗೆ ಬೊಂಬಾಟ್ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ

advertisement

ನಮ್ಮ ದೇಶದಲ್ಲಿ ಕೃಷಿಕರ ಸಂಖ್ಯೆ ತುಂಬಾ ವರ್ಷದ ಹಿಂದೆ ಅಧಿಕ ಇತ್ತು ಆದರೆ ಈಗ ಆ ಬೆಲೆ ಕಡಿಮೆ ಆಗಿದೆ ಎಂದು ಹೇಳಬಹುದು. ಹಾಗಾಗಿ ರೈತರಿಗೆ ಕೃಷಿ ಮಾಡುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆ ಆಗಾಗ ಕಾಲಕ್ಕೆ ತಕ್ಕಂತೆ ನಿವಾರಣೆ ಮಾಡಲು ಸರಕಾರ ಮುಂದಾಗಿದೆ. ಬೆಂಬಲ ಬೆಲೆ ಅನುಮೋದನೆಗೆ ಇಷ್ಟು ಕಾಲ ಸಮಸ್ಯೆ ಆಗಿದ್ದು ರೈತರ ಬೆಳೆದ ಬೆಳೆಗೆ ಈಗ ಸಕಾಲ ಕೂಡಿ ಬಂದಿದೆ. ಉತ್ತಮ ಬೆಲೆ ಸಿಗುತ್ತಿಲ್ಲ, ಕೃಷಿಯಿಂದ ವೆಚ್ಚದ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಕಂಗೆಟ್ಟವರಿಗೆ ಈ ಮಾಹಿತಿ ಬಹಳ ಅನುಕೂಲ ಆಗಲಿದೆ.

ರಾಜ್ಯ ಮತ್ತು ಕೇಂದ್ರ ಸರಕಾರಗಳು ಅನೇಕ ಯೋಜನೆ ಮಂಡಿಸುವ ಮುನ್ನ ಅದರ ಬಗ್ಗೆ ಸಂಪುಟದಲ್ಲಿ ಚರ್ಚೆ ಮಾಡುವುದು ಅನುಮೋದನೆ ಪಡೆಯುವುದು ಸಾಮನ್ಯ. ಯಾವುದೆ ಮಸೂದೆ ಕಾಯ್ದೆ ಆಗುವ ಮುನ್ನ ಬಹುಪಕ್ಷವಾಗಿ ಅನುಮೋದನೆ ಪಡೆಯಲೇ ಬೇಕಿದೆ ಇದೀಗ ಬೆಳೆಗಳಿಗೆ ಬೆಂಬಲ ನೀಡಬೇಕು ಎಂಬ ಅಂಶಕ್ಕೆ ಅನುಮೋದನೆಗಾಗಿ ಸಂಪುಟದಲ್ಲಿ ಚರ್ಚೆ ನಡೆದಿದ್ದು 14 ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಅನುಮೋದನೆ ಸಿಕ್ಕಿದೆ.

ಎರಡನೇ ಸಂಪುಟ ಸಭೆಯಲ್ಲಿ ಬೆಳೆಗಳಿಗೆ ಹಾಗೂ ಅವರ ಉತ್ಪನ್ನಗಳಿಗೆ ಲಾಭದಾಯಕ  ಬೆಲೆ ಖಚಿತ ಪಡಿಸಿಕೊಳ್ಳಲು 2024-25ರಲ್ಲಿ  ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ.  ಹಾಗಾಗಿ ಕಳೆದ 2023-24 ರ ಅವಧಿಗಿಂತಲೂ ಈ ಬಾರಿ ಸಿಗುವ ಬೆಂಬಲ ಬೆಲೆ ಏರಿಕೆ ಬಹಳ ಉತ್ತಮವಾಗಿ ಇದೆ ಎಂದು ಹೇಳ ಬಹುದು.ಉತ್ಪಾದನಾ ವೆಚ್ಚದ 1.5% MSP ನಿಗದಿಸಿದ ಕೇಂದ್ರ ಬಜೆಟ್ ನಲ್ಲಿ ಈ ವಿಚಾರ ಮಂಡಿಸಲಾಗುತ್ತಿದೆ. ಆ ಬಳಿಕ ಈ ಒಂದು ಬೆಂಬಲ ಬೆಲೆಯೂ ಉತ್ಪಾದನಾ ವೆಚ್ಚಕ್ಕಿಂತ ಅಧಿಕ ನೀಡಿ ರೈತರಿಗೆ ಲಾಭ ಆಗುವಂತೆ ನೋಡಕೊಳ್ಳಲಾಗುವುದು.

ಯಾವ ಬೆಳೆಗೆ ಎಷ್ಟು?

 

advertisement

Image Source: Moneycontrol

 

ಬೆಂಬಲ ಬೆಲೆ ಏರಿಕೆ ಎಲ್ಲ ಬೆಳೆಗಳಿಗೆ ಏಕ ಪ್ರಕಾರವಾಗಿ ಇರಲಾರದು ಕೆಲವು ಬೆಳೆಗೆ ಅಧಿಕ ಇರಲಿದೆ. ತೊಗರಿ ಬೆಳೆ 59% , ಮೆಕ್ಕೆ ಜೋಳ54% , ಉದ್ದಿನ ಕಾಳು 52%, ಹೀಗೆ ಒಂದೊಂದು ಬೆಳೆಗು ಅವುಗಳ ಉತ್ಪಾದನೆ ವೆಚ್ಚದಮೇಲೆ ಬೆಂಬಲ ಬೆಲೆ ನಿಗಧಿಯಾಗಲಿದೆ. ದ್ವಿದಳ ಧಾನ್ಯ, ಹುಚ್ಚೆಳ್ಳು, ಎಳ್ಳು , ತೊಗರಿ  ದ್ವಿದಳ ಮತ್ತು ಎಣ್ಣೆ ಕಾಳಿನ ಬೆಳೆಗೂ ಕೂಡ ಬೆಂಬಲ ಬೆಲೆ ಸಿಗಲಿದೆ. ಹುಚ್ಚೆಳ್ಳಿಗೆ ಕ್ವಿಂಟಲ್ ಗೆ 983ರೂ., ಎಳ್ಳು ಕ್ವಿಂಟಲ್ 632 ರೂಪಾಯಿ, ತೊಗರಿಗೆ 550 ರೂಪಾಯಿ  ನಂತೆ ಬೆಂಬಲ ಬೆಲೆ ಸಿಗುತ್ತದೆ.

 

Image Source: The Hindu

 

ಬೆಳೆಗಳ ಉತ್ಪಾದನಾ ವೆಚ್ಚದ ಆಧಾರದ ಮೇಲೆ ರೈತರಿಗೆ ಲಾಭವು 50% ನಷ್ಟು ಅಧಿಕ ಲಾಭ ಬರಲಿದೆ. ಈ ಮೂಲಕ ಕೃಷಿಯಲ್ಲಿ ಅಕ್ಕಿ, ಎಣ್ಣೆಕಾಳು, ಪೌಷ್ಟಿಕ ಧಾನ್ಯಗಳಿಗೆ, ಹತ್ತಿ ಬೆಳೆಗೆ ಅಧಿಕ ಬೆಂಬಲ ಬೆಲೆ ಸಿಗುತ್ತಿದೆ ಎಂದು ಹೇಳಬಹುದು. ಇದು ರೈತರಿಗೆ ಭವಿಷ್ಯದಲ್ಲಿ ಬಹಳ ಉತ್ತಮ ಲಾಭ ಕೂಡ ತಂದುಕೊಡಲಿದೆ.

advertisement

Leave A Reply

Your email address will not be published.