Karnataka Times
Trending Stories, Viral News, Gossips & Everything in Kannada

CM Siddaramaiah: KSRTC ಬಸ್ ಹತ್ತುವವರಿಗೆ ಗಿಡ ನ್ಯೂಸ್! ಸಿಎಂ ಸಿದ್ದರಾಮಯ್ಯ ಹೊಸ ನಿರ್ಧಾರ

advertisement

ಸರಕಾರಿ ಬಸ್ ಹೆಣ್ಣು ಮಕ್ಕಳ ಪಾಲಿನ ಪ್ರೀತಿಯ ಅಂಬಾರಿ ಎನ್ನಬಹುದು. ಅದರಲ್ಲೂ ಈಗ ಸರಕಾರ ಶಕ್ತಿ ಯೋಜನೆ (Shakti Yojana) ಜಾರಿಗೆ ತಂದ ಮೇಲೆ ಬಸ್ ಬೇಡಿಕೆ , ಬಸ್ ಪ್ರಯಾಣಿಕರ ಸಂಖ್ಯೆ ದಿನನಿತ್ಯ ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಬಸ್ ಬೇಡಿಕೆ ಇನ್ನು ಕೂಡ ಪ್ರಸ್ತಾಪನೆಯಲ್ಲಿದ್ದು ಅದರ ಬೆನ್ನಿಗೆ ತೈಲ ದರ ಏರಿಕೆಯಿಂದಾಗಿ ರಾಜ್ಯದ ಜನತೆ ತತ್ತರಿಸುವಂತಾಗಿದೆ. ತೈಲ ಬೆಲೆ ಏರಿಕೆ (Oil Price Hike) ಆದ ಹಿನ್ನೆಲೆ ಬಸ್ ಪ್ರಯಾಣದ ಟಿಕೆಟ್ ದರ ಕೂಡ ಹೆಚ್ಚಿಸಲಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದ್ದು ಈ ಬಗ್ಗೆ ಸಿಎಂ (CM Siddaramaiah) ಅವರು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯ ಸರಕಾರದ ರೀಟೈಲ್ಸ್ ಸೇಲ್ ನಿಂದಾಗಿ ತೈಲ ದರ ಏರಿಕೆ ಕಂಡು ಬಂದಿದ್ದು ಇದರಿಂದಾಗಿ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ರಾಜ್ಯದಲ್ಲಿ ವಿವಿಧೆಡೆ ತೈಲ ಬೆಲೆ ಏರಿಕೆ ಖಂಡಿಸಿ ವಿಪಕ್ಷಗಳು, ವಾಹನ ಮಾಲಕರು, ಖಾಸಗಿ ವಾಹನಗಳ ಒಕ್ಕೂಟ ಅಲ್ಲಲ್ಲಿ ಹೋರಾಟ ಮಾಡಿದರೂ ಸರಕಾರ ಬೆಲೆ ಏರಿಕೆ ನೀತಿಯಿಂದ ಹಿಂದೆಸರಿದಿಲ್ಲ. ರಾಜ್ಯದ ಕಾಂಗ್ರೆಸ್ ಸರಕಾರವು ಪೆಟ್ರೋಲ್ ಹಾಗೂ ಡಿಸೇಲ್ (Petrol-Diesel) ಮೇಲಿನ ಮಾರಾಟ ತೆರಿಗೆ ಏರಿಸಿದೆ ಇದರಿಂದಾಗಿ ಎರಡು ಇಂಧನದ ಮೇಲೆ ಲೀಟರ್ ಗೆ 3 ರೂಪಾಯಿ ಒಮ್ಮಿಂದೊಮ್ಮೆಗೆ ಏರಿಕೆಯಾಗಿದೆ. ಇದನ್ನು ಸಿಎಂ ಅವರೇ ಸಮರ್ಥಿಸಿಕೊಂಡಿದ್ದರು ಪ್ರತಿ ಭಟನೆ ಮಾತ್ರ ನಡೆಯುತ್ತಲಿದೆ.

 

Image Source: Hindustan Times

 

ಬಸ್ ಟಿಕೆಟ್ ಹೆಚ್ಚಾಗುತ್ತಾ?

 

advertisement

Image Source: ThePrint

 

ತೈಲಗಳ ಬೆಲೆ ಏರಿಕೆ (Oil Price Hike) ಮಾಡಿದರೆ ಖಾಸಗಿ ಹಾಗೂ ಸರಕಾರಿ ಪ್ರಯಾಣ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಅದರಲ್ಲೂ ಶಕ್ತಿ ಯೋಜನೆ (Shakti Yojana) ಹಿಂಪಡೆದು ಎಲ್ಲರಿಗೂ ರಿಯಾಯಿತಿ ದರದ ಟಿಕೆಟ್ ನೀಡುತ್ತಾರೆ ಎಂಬ ವದಂತಿ ಗಾಳಿ ಸುದ್ದಿ ಕೂಡ ಹರಿದಾಡಿದ್ದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಈ ಬಗ್ಗೆ ಮಾಧ್ಯಮದ ಮೂಲಕ ಜನತೆಗೆ ಕೆಲವು ವಿಚಾರವನ್ನು ಸ್ಪಷ್ಟೀಕರಿಸಿದ್ದಾರೆ.

 

Image Source: The Hindu

 

ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ (Petrol-Diesel Price) ಏರಿದ್ದ ಪರಿಣಾಮ ಬಸ್ ನ ಟಿಕೆಟ್ ಬೆಲೆ ಹೆಚ್ಚಾಗುತ್ತದೆ ಎಂಬ ವಾದವನ್ನು ಸಿಎಂ (CM Siddaramaiah) ಅವರು ತಳ್ಳಿ ಹಾಕಿದ್ದಾರೆ. ಬಸ್ ಪ್ರಯಾಣ ದರದ ಏರಿಕೆ ಪ್ರಸ್ತಾವನೆ ಸದ್ಯಕ್ಕೆ ಸರಕಾರದ ಮುಂದೆ ಇಲ್ಲ. ಇನ್ನು ಗ್ಯಾರೆಂಟಿ ಯೋಜನೆ ಬಗ್ಗೆ ಜನರು ಗೊಂದಲ ಗೊಳ್ಳುವ ಅಗತ್ಯವಿಲ್ಲ. ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ರದ್ದಾಗಲಾರದು. ಸರಕಾರದ ಪಂಚಗ್ಯಾರೆಂಟಿ ಗಾಗಿಯೆ ಪ್ರತ್ಯೇಕ ಅನುದಾನ ಮೀಸಲಿರಿಸಲಾಗಿದ್ದು 60 ಸಾವಿರ ಕೋಟಿ ಅನುದಾಬ ಕಾಯ್ದಿರಿಸಲಾಗಿದೆ. ಹಾಗಾಗಿ ಅನಗತ್ಯ ಅಪಪ್ರಚಾರ ಬೇಡ ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಸಿಎಂ (CM Siddaramaiah) ಅವರ ಈ ಸ್ಪಷ್ಟನೆ ಇಂದಾಗಿ ಸರಕಾರದದಲ್ಲಿ ಸದ್ಯಕ್ಕೆ ಟಿಕೆಟ್ ದರ ಏರಿಕೆ ಬಗ್ಗೆ ಯಾವುದೇ ನಿಲುವು ಇಲ್ಲ ಎಂಬುದು ಸ್ಪಷ್ಟವಾಗಿದ್ದರು ಖಾಸಗಿ ಬಸ್ ದರ ಏರುವ ಸಾಧ್ಯತೆ ಇದೆ ಎನ್ನಬಹುದು. ಹಾಗೆ ಏರಿಕೆಯಾದರು ಅದು ಜನತೆಗೆ ಹೊರೆ ಆಗುವುದರಲ್ಲಿ ಅನುಮಾನ ಇಲ್ಲ. ಅದಕ್ಕೆ ಸರಕಾರ ಯಾವ ಕ್ರಮ ಕೈಗೊಳ್ಳ ಬಹುದೆಂದು ಕೂಡ ಕಾದು ನೋಡಬೇಕು.

advertisement

Leave A Reply

Your email address will not be published.