Karnataka TimesKarnataka TimesKarnataka Times
  • News
    • Govt Updates
  • Auto
  • Schemes
  • Entertainment
    • Bigg Boss Kannada
    • Cinema
    • Serials
    • Web Series
  • Finance
    • Stocks
  • Sports
    • Chess
    • Cricket
    • Football
    • IPL
    • Kabaddi
  • Jobs
  • More
    • Politics
    • Technology
    • Information
    • Gadget
    • Health
    • Krishi
    • Recipes
    • Lifestyle
    • Astrology
    • Videos
    • Viral
Font ResizerAa
Karnataka TimesKarnataka Times
Font ResizerAa
Search
  • News
  • Finance
    • Stocks
  • Entertainment
    • Bigg Boss Kannada
    • Cinema
    • Serials
    • Web Series
  • Auto
  • Astrology
  • Gadget
  • Govt Updates
  • Health
  • Information
  • Krishi
  • Lifestyle
  • Politics
  • Recipes
  • Sports
    • Chess
    • Cricket
    • Football
    • IPL
    • Kabaddi
  • Jobs
  • Technology
  • Videos
  • Viral
Follow US
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use
© 2021-2024 Karnataka Times. All Rights Reserved
Home » Bullet Train: ಭಾರತಕ್ಕೆ ಬರಲಿದೆ ಮೊದಲ ಅತಿವೇಗದ ಬುಲೆಟ್ ಟ್ರೈನ್, ತಯಾರಿಕೆ ಬೆಂಗಳೂರಿನ ಈ ಕಂಪನಿಯಲ್ಲೇ!
AutoGovt UpdatesTechnology

Bullet Train: ಭಾರತಕ್ಕೆ ಬರಲಿದೆ ಮೊದಲ ಅತಿವೇಗದ ಬುಲೆಟ್ ಟ್ರೈನ್, ತಯಾರಿಕೆ ಬೆಂಗಳೂರಿನ ಈ ಕಂಪನಿಯಲ್ಲೇ!

Chetan Yedve
Last updated: April 15, 2025 5:26 pm
By Chetan Yedve

ಜಪಾನ್, ಚೀನಾ ಮುಂತಾದ ಬಹಳ ಮುಂದುವರೆದ ದೇಶಗಳಲ್ಲಿ ಈಗಾಗಲೇ ಪ್ರಮುಖ ನಗರಗಳನ್ನು ಸಂಪರ್ಕಿಸಲು ಅತಿವೇಗದ ಬುಲೆಟ್ ಟ್ರೈನ್ ಚಾಲ್ತಿಯಲ್ಲಿದೆ. ಕೆಲವೇ ನಿಮಿಷಗಳಲ್ಲಿ ನೂರಾರು ಕಿ.ಮೀ ದೂರ ಸಾಗುವ ಈ ಬುಲೆಟ್ ಟ್ರೈನ್ ಕನಸು ಭಾರತಕ್ಕೆ ಈವರೆಗೂ ಕನಸಾಗಿಯೇ ಉಳಿದಿದೆ. ಆದರೆ, ಇದೀಗ ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ (India’s First Bullet Train) ನಿರ್ಮಾಣಕ್ಕೆ ಆರ್ಡರ್ ನೀಡಲಾಗಿದೆ.

ಹೌದು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಈಗಾಗಲೇ ಕಾರ್ಯನೀತಿ ರೂಪಿಸಿರುವಂತೆ, ದೇಶದ ಪ್ರಥಮ ಅತಿವೇಗದ ಬುಲೆಟ್ ಟ್ರೈನ್ ಪ್ರಾಜೆಕ್ಟ್ ದೇಶದ ಎರಡು ಅತ್ಯಂತ ಪ್ರಮುಖ ನಗರಗಳನ್ನು ಬೆಸೆಯಲಿದ್ದು, ಅದಕ್ಕಾಗಿ, ಈಗಾಗಲೇ ಟ್ರೈನ್ ನಿರ್ಮಾಣಕ್ಕೆ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ . ದೇಶದ ಮೊದಲ ಬುಲೆಟ್ ಟ್ರೈನ್ (India’s First Bullet Train) ನಿರ್ಮಾಣದ ಗುತ್ತಿಗೆ ಪಡೆದ ಸಿಲಿಕಾನ್ ಸಿಟಿಯ ಆ ಕಂಪನಿ ಯಾವುದು ಹಾಗೂ ಯಾವ ಮಾರ್ಗಗಳಲ್ಲಿ ಈ ಬುಲೆಟ್ ಟ್ರೈನ್ ಸಂಚರಿಸಲಿದೆ ಎನ್ನುವುದನ್ನು ಹೇಳ್ತೀವಿ ನೋಡಿ.

ಭಾರತದ ಮೊದಲ ಮೆಟ್ರೋ ರೈಲು ಈ ಮಾರ್ಗದಲ್ಲಿ!

ರಾಷ್ಟ್ರೀಯ ಅತಿವೇಗದ ರೈಲು ನಿಗಮ ನಿಯಮಿತ (National High Speed Rail Corporation Limited) ವು ಈಗಾಗಲೇ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಿರುವ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌‌‌ಗೆ, ಗರಿಷ್ಠ ಗಂಟೆಗೆ 250-280 ಕಿ.ಮೀ ವೇಗದಲ್ಲಿ ಚಲಿಸಬಹುದಾದ ರೈಲು ಬೋಗಿಗಳನ್ನು ಹಾಗೂ ಇಂಜಿನ್‌ನ್ನು ನಿರ್ಮಿಸಲು ಗುತ್ತಿಗೆ ನೀಡಿದೆ. ಈಗಾಗಲೇ 1.1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಮುಂಬೈ – ಅಹಮದಾಬಾದ್ ರೈಲ್ವೇ ಕಾರಿಡಾರ್ ನಿರ್ಮಾಣವಾಗುತ್ತಿದ್ದು, 508 ಕಿ.ಮೀ ಉದ್ದದ ಮಾರ್ಗವನ್ನು ಕ್ರಮಿಸಲಿದೆ.

ರೈಲುಗಳ ನಿರ್ಮಾಣದ ಗುತ್ತಿಗೆ ಸಿಲಿಕಾನ್ ಸಿಟಿಯ ಈ ಕಂಪನಿಗೆ!

ಈ ಬುಲೆಟ್ ಟ್ರೈನ್ ಕಾರಿಡಾರ್ ಮಾರ್ಗಗಳಿಗೆ ರೈಲುಗಳ ನಿರ್ಮಾಣದ ಗುತ್ತಿಗೆಯನ್ನು ಟೆಂಡರ್ ಮೂಲಕ ನೀಡಲಾಗಿದ್ದು, ದೇಶದ ಪ್ರಥಮ ಬುಲೆಟ್ ಟ್ರೈನ್ ನಿರ್ಮಾಣ (India’s First Bullet Train) ಮಾಡುವ ಭಾಗ್ಯ ಬೆಂಗಳೂರಿನಲ್ಲಿರುವ BEML (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ಗೆ ದೊರಕಿದೆ. ಅಂದರೆ, ಇಡೀ ರೈಲ್ವೇ ಕಾರಿಡಾರ್‌ಗೆ ಅಗತ್ಯವಿರುವ ಎರಡು ಬುಲೆಟ್ ರೈಲುಗಳ ನಿರ್ಮಾಣಕ್ಕೆ ಟೆಂಡರ್ ಪ್ರಪೋಸಲ್ ನೀಡಿರುವ ಏಕೈಕ ಕಂಪನಿ BEML ಆಗಿದ್ದು, ಸರಿಸುಮಾರು ಪ್ರತಿ ಟ್ರೈನ್ ನಿರ್ಮಾಣಕ್ಕೆ ₹250 ಕೋಟಿಯಿಂದ ₹300 ಕೋಟಿಗಳಷ್ಟು ವೆಚ್ಚ ತಗುಲಲಿದೆ ಎನ್ನಲಾಗಿದೆ. ಆದರೆ ಈ ವೆಚ್ಚದ ಬಗ್ಗೆ ಯಾವುದೇ ಅಧಿಕೃತ ವಿವರವನ್ನು ನೀಡಲಾಗಿಲ್ಲ.

BEML ಗೆ ಟೆಂಡರ್ ನೀಡಿರುವ ಕುರಿತು ICF (Integral Coach Factory) ಅಧಿಕೃತ ಹೇಳಿಕೆ ನೀಡಿದ್ದು, ಮುಂದಿನ ಎರಡೂವರೆ ವರ್ಷಗಳ ಗಡುವು ನೀಡಿದೆ. ಆ ಗಡುವಿನೊಳಗೆ BEML ರೈಲುಗಳನ್ನು ತಯಾರಿಸಿಕೊಡಬೇಕಿದ್ದು, 250 ಕಿ.ಮೀ ವೇಗದಲ್ಲಿ ಸಾಗುವ ಸಾಮರ್ಥ್ಯದ ಇಂಜಿನ್‌ಗಳನ್ನು BEML ಸಂಯೋಜಿತ ಸಂಸ್ಥೆಯಾದ ಮೇಧಾ ಸರ್ವೋ ಡ್ರೈವ್ಸ್ ಜಂಟಿಯಾಗಿ ತಯಾರಿಸಿಕೊಡಲಿದೆ ಹಾಗೂ ಆ ಇಂಜಿನ್‌ಗಳ ಸಾಮರ್ಥ್ಯವರ್ಧನೆ ಹಾಗೂ ಇತರ ಡಿಟೈಲಿಂಗ್‌‍ಗಳನ್ನು BEML ನಿರ್ವಹಿಸಲಿದೆ.

ದೇಶದ ಮೊದಲ ಬುಲೆಟ್ ಟ್ರೈನ್ ವಿಶೇಷತೆಗಳು!

ಈ ಮಾರ್ಗದ ಮೊದಲ ಬುಲೆಟ್ ಟ್ರೈನ್ ಡಿಸೆಂಬರ್ 2026 ರ ಸಮಯದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎನ್ನಲಾಗಿದ್ದು, ಮೊದಲ ಬುಲೆಟ್ ಟ್ರೈನ್ ಸೇವೆ ಸೂರತ್ – ಬಿಲಿಮೋರಾ ವಿಭಾಗದ ನಡುವೆ ಸಂಚರಿಸಲಿದೆ. ಪ್ರತಿ ಟ್ರೈನ್‌ನಲ್ಲಿಯೂ 3+2 ಸೀಟಿಂಗ್ ವಿನ್ಯಾಸದ ಏಳು ಕೋಚ್‌‌‌‌‌‌‌‌‌‌‌ಗಳಿರಲಿದ್ದು, ಒಂದು 2+2 ವಿನ್ಯಾಸದ ಎಕ್ಸಿಕ್ಯೂಟಿವ್ ಕೋಚ್ ಕೂಡ ಇರಲಿದೆ. ಒಟ್ಟು 175 ಜನ ಪ್ರಯಾಣಿಕರು ಒಮ್ಮೆಗೆ ಸಂಚರಿಸಬಹುದಾದ ಈ ಮೊದಲ ಬುಲೆಟ್ ಟ್ರೈನ್ ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ವಿಸ್ತರಣೆಯಾಗಬಹುದು ಎನ್ನುವ ನಿರೀಕ್ಷೆಯಿದೆ.

ದೇಶದಲ್ಲಿ ಪ್ರಪ್ರಥಮ ಬುಲೆಟ್ ಟ್ರೈನ್ ಸೇವೆಯನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಜನತೆ ಕಾತರರಾಗಿದ್ದು, ಸರ್ಕಾರ ಇತರ ನಗರಗಳ ಯಾವ ಮಾರ್ಗಗಳಿಗೆ ಬುಲೆಟ್ ಟ್ರೈನ್ ಸೇವೆ ನೀಡಲಿದೆ ಹಾಗೂ ಅದರ ನಿರ್ವಹಣೆ ಹೇಗೆ ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಷ್ಟೇ.

iPhone 16: ಇಲ್ಲಿದೆ ಬೆಲೆ ಹಾಗೂ ಮೊಬೈಲ್ ವಿಶೇಷತೆಗಳ ಪಟ್ಟಿ

Electric Cars: ಕಡಿಮೆ ಬೆಲೆಯ 5 ಎಲೆಕ್ಟ್ರಿಕ್ ಕಾರುಗಳು: ಒಂದು ಚಾರ್ಜ್‌ನಲ್ಲಿ ಹೆಚ್ಚು ರೇಂಜ್ !

Sim Cards: ನಿಮ್ಮ ಹೆಸರಿನಲ್ಲಿ ನೋಂದಣಿಯಾದ ಯಾದ ಫೇಕ್ ಸಿಮ್ಗಳನ್ನು ಈಗೆಲ್ ಡಿಯಾಕ್ಟಿವೇಟ್ ಮಾಡಿ, ಇಲ್ಲಿದೆ ಸಿಂಪಲ್ ವಿಧಾನ.

GST Council: ಜಿಎಸ್‌ಟಿ ಕೌನ್ಸಿಲ್‌ನಿಂದ ದೇಶದ ಜನತೆಗೆ ಶುಭಸುದ್ದಿ, ರಾತ್ರೋರಾತ್ರಿ ಈ ಉತ್ಪನ್ನಗಳ ಬೆಲೆಯಲ್ಲಿ ಧಿಡೀರ್ ಇಳಿಕೆ

Road Accidents: ರಸ್ತೆ ಅಪಘಾತದಿಂದ ಗಾಯಗೊಂಡವರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ!

TAGGED:BEMLICFIndia's First Bullet TrainIndia's First Bullet Train TenderMumbai Ahmedabad Railway Corridor
Previous Article Maruti Suzuki Swift CNG : 32 ಕಿ.ಮೀ ಮೈಲೇಜ್ ಕೊಡುವ ಈ ಕಾರಿಗಿವೆ ಹಲವು ವಿಶೇಷತೆಗಳು!
Next Article iPhone 16: ಇಲ್ಲಿದೆ ಬೆಲೆ ಹಾಗೂ ಮೊಬೈಲ್ ವಿಶೇಷತೆಗಳ ಪಟ್ಟಿ
Leave a Comment

Leave a Reply Cancel reply

Your email address will not be published. Required fields are marked *

- Advertisement -

Latest News

Hebbal Traffic Police: ಹೆಬ್ಬಾಳದಲ್ಲಿ ಪೊಲೀಸ್‌ಗೆ ಹೆಲ್ಮೆಟ್ ಇಲ್ಲದ ಕಾರಣ ಚಲನ್
News
ಆಸ್ತಿಯ ಮೇಲೆ ಸಾಲ ಇದ್ದಾಗ ತಂದೆ ನಿಧನವಾದರೆ ಮಕ್ಕಳು ಸಾಲ ತೀರಿಸಬೇಕಾ? ಬಂತು ಸರ್ಕಾರದ ಸ್ಪಷ್ಟನೆ
Finance Govt Updates News
Gold Price: ಇನ್ನು 3-4 ತಿಂಗಳುಗಳಲ್ಲಿ ಚಿನ್ನದ ಬೆಲೆ ಏರುತ್ತಾ ಅಥವಾ ಇಳಿಯುತ್ತಾ? ನಿಖರ ಉತ್ತರ ಕೊಟ್ಟ ತಜ್ಞರು
News
ಅಕ್ಕ ಪಕ್ಕದ ಹೊಲದವರು ನಿಮ್ಮ ಜಮೀನಿಗೆ ಹೋಗಲು ದಾರಿ ಬಿಡುತ್ತಿಲ್ಲವೇ? ಅಂಥವರಿಗೆ ಸರ್ಕಾರದ ಗುಡ್ ನ್ಯೂಸ್
Govt Updates Information
ಹೆಂಡತಿಯ ಹೆಸರಲ್ಲಿ ಆಸ್ತಿ ಖರೀದಿ ಮಾಡುವವರಿಗೆ ಭರ್ಜರಿ ಗುಡ್ ನ್ಯೂಸ್! ಎಲ್ಲಾ ರಾಜ್ಯಗಳಲ್ಲಿ ನಿಯಮ ಜಾರಿಗೆ.
Govt Updates Information
ರಾಜ್ಯಾದ್ಯಂತ ಹೊಸ BPL & APL ಕಾರ್ಡ್ ಹಾಗು ತಿದ್ದುಪಡಿಗೆ ಕಾಯುತ್ತಿದ್ದವರಿಗೆ ಭರ್ಜರಿ ಗುಡ್ ನ್ಯೂಸ್
Govt Updates
SSLC ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದು ನಿರಾಸೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್?, ಸಿಗಲಿದೆಯೇ ಗ್ರೇಸ್ ಮಾರ್ಕ್ಸ್?
News
Offers: ಈ 6 ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಧಿಡೀರ್ 14000 ಕ್ಕಿಂತ ಹೆಚ್ಚಿನ ಡಿಸ್ಕೌಂಟ್!
Auto
SIP vs PPF: ವರ್ಷಕ್ಕೆ 1,20,000 ರೂ ಹೂಡಿಕೆಯನ್ನು ಮಾಡಿದರೆ 25 ವರ್ಷದ ಬಳಿಕ ಯಾವುದು ಹೆಚ್ಚು ರಿಟರ್ನ್ಸ್ ನೀಡುತ್ತೆ?
Finance
Recharge Plan: ₹1200 ಕ್ಕಿಂತ ಕಡಿಮೆ ಯೋಜನೆ: 1 ವರ್ಷ ಕಾಲ್, ಡೇಟಾ, ಮೆಸೇಜ್ ಟೆನ್ಷನ್ ಫ್ರೀ
Telecom
Join us on Google News
Discover thousands of Articles and Stories from the Globe, one-click to jion and Follow.
Join Now

About Us

Karnataka Times is a 24-hour Kannada news website, bringing you the latest breaking news and updates from every industry.

Karnataka Times strictly follows the DNPA Code of Ethics and fully adheres to the Google News policies, ensuring responsible, accurate, and trustworthy journalism.

Contact US

Address:
Karnataka Times, Ground Floor, 
Opp. Bhawani Mandir, 6th Cross, Siddaramaiah Layout,
Bidar-585403 
Karnataka, India

Ph: +91 99721 495565
Email: [email protected]

Our Goal

At Karnataka Times, our goal is to deliver timely, accurate, and reliable news to our readers. We are committed to upholding the highest standards of journalism, ensuring transparency, and building a platform that our audience can trust. We strive to empower the people of Karnataka with information that matters.

Karnataka Times Sites

  • Karnataka Times Videos
  • India Mint
  • Karnataka Daily
  • Nadu Nudi
  • Telugu Varadhi
Karnataka TimesKarnataka Times
Follow US
© 2021-2024 Karnataka Times. All Rights Reserved
  • Home
  • DNPA Code of Ethics
  • Privacy Policy
  • About Us
  • Careers
  • Contact Us
  • Correction Policy
  • Disclaimer
  • Editorial Team
  • Ethics Policy
  • Fact Check Policy
  • My Bookmarks
  • Ownership and Funding
  • Terms of Use