ಭಾರತದಲ್ಲಿ ಆಧಾರ್ ಕಾರ್ಡ್ ಬಹುತೇಕ ಎಲ್ಲಾ ದಾಖಲೆಗಳ ವೆರಿಫಿಕೇಶನ್‌ಗೆ ಬಳಕೆಯಾಗುತ್ತಿದೆ. ಬ್ಯಾಂಕ್, ಕೆವೈಸಿ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಆಧಾರ್ ಕಾರ್ಡ್ ಅತಿಮುಖ್ಯ ದಾಖಲೆಯಾಗಿದೆ. ಆದರೆ, ಇತ್ತೀಚೆಗಷ್ಟೇ ಆಧಾರ್ ಕಾರ್ಡ್ (Aadhaar Card ) ನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡಲು ಸೆಪ್ಟೆಂಬರ್ 14 ಅಂತಿಮ ದಿನಾಂಕ ಎಂದು ಯುಐಡಿಎಐ (UIDAI) ಗಡುವು ನೀಡಿದ್ದು, ಹಲವರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಇನ್ನೂ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳದವರಿಗೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ.
ಹೌದು. ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಸೆಪ್ಟೆಂಬರ್ 14 ಅಂತಿಮ ದಿನಾಂಕ ಹಾಗೂ ಅದರ ನಂತರ ಅಪ್‌ಡೇಟ್ ಮಾಡುವವರಿಗೆ ಶುಲ್ಕಗಳು ಅನ್ವಯವಾಗುತವೆ ಎಂದು ಯುಐಡಿಎಐ ಗಡುವು ನೀಡಿತ್ತು. ಆದರೆ, ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದಲ್ಲಿರುವವರಿಗೆ ಈ ಬಗ್ಗೆ ಮಾಹಿತಿ ಇಲ್ಲದೇ, ಕೊನೆಯ ದಿನಾಂಕ ಸಮೀಪಿಸುತ್ತಿರುವಂತೆಯೇ ಆತಂಕ ಶುರುವಾಗಿತ್ತು. ಆದರೆ, ಅವರಿಗೆ ಕೇಂದ್ರ ಸರ್ಕಾರ ಕೊನೆಯ ದಿನಾಂಕವನ್ನು ಮೂರು ತಿಂಗಳು ವಿಸ್ತರಿಸಿ ಗುಡ್ ನ್ಯೂಸ್ ನೀಡಿದೆ.
ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಲು ಇದೇ ಕೊನೆಯ ದಿನಾಂಕ!
ಆಧಾರ್ ಕಾರ್ಡ್ ಸರ್ಕಾರಿ ಸಂಬಂಧಿ ಸೇವೆಗಳಿಗೆ ಪ್ರಮುಖ ದಾಖಲೆಯಾಗಿರುವುದರಿಂದ, ಆಧಾರ್ ಕಾರ್ಡ್ ಅನ್ನು ತಕ್ಷಣವೇ ಅಪ್‌ಡೇಟ್ ಮಾಡಿಕೊಳ್ಳಿ ಎಂದು ಯುಐಡಿಎಐ ಹಲವು ಬಾರಿ ಮನವಿ ಮಾಡಿತ್ತು ಹಾಗೂ ಕೊನೆಯ ದಿನಾಂಕವನ್ನು ಹಲವು ಬಾರಿ ವಿಸ್ತರಿಸಿತ್ತು. ಒಂದೊಮ್ಮೆ ಕೊನೆಯ ದಿನಾಂಕ ಮೀರಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕಾದರೆ, ನಿಗದಿತ ಶುಲ್ಕ ಸಲ್ಲಿಸಬೇಕಾಗುತ್ತದೆ ಎನ್ನುವ ವಾರ್ನಿಂಗ್ ಕೂಡ ನೀಡಿತ್ತು. ಆದರೆ, ಈವರೆಗೂ ಬಹುತೇಕ ಜನರು ಅಪ್‌ಡೇಟ್ ಮಾಡಿಕೊಳ್ಳದ ಕಾರಣ, ಮತ್ತೆ ಮೂರು ತಿಂಗಳುಗಳ ಕಾಲ ದಿನಾಂಕ ವಿಸ್ತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಡಿಸೆಂಬರ್ 14 ರವರೆಗೆ ಹೆಸರು, ವಿಳಾಸ, ಹೊಸ, ಮೊಬೈಲ್ ನಂಬರ್ ಮುಂತಾದ ತಿದ್ದುಪಡಿಗಳಿದಲ್ಲಿ ಮಾಡಿಕೊಳ್ಳಬಹುದು ಎಂದು ಯುಐಡಿಎಐ ತಿಳಿಸಿದೆ. ಎಂ ಆಧಾರ್ (MyAaadhaar) ಪೋರ್ಟಲ್‌ನಲ್ಲಿ ಉಚಿತವಾಗಿ ಈ ಆಧಾರ್ ತಿದ್ದುಪಡಿ (Aadhaar Card Update) ಅಥವಾ ನವೀಕರಣಗಳನ್ನು ಮಾಡಿಕೊಳ್ಳಬಹುದಾಗಿದೆ. ಆದರೆ, ಯುಐಡಿಎಐ ನೀಡಿರುವ ಡಿಸೆಂಬರ್ 14 ರ ಗಡುವು ಮುಗಿದ ನಂತರ ತಿದ್ದುಪಡಿ ಅಥವಾ ನವೀಕರಣ ಮಾಡಲು, ನಾಗರಿಕರು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಹತ್ತು ವರ್ಷಗಳ ಹಿಂದಿನ ಆಧಾರ್ ಕಾರ್ಡ್ ಇದ್ದರೆ Aadhaar Card Update ಗೆ ನಿಮಗೆ ಇದೇ ಲಾಸ್ಟ್ ಚಾನ್ಸ್
ಇನ್ನು, ನೀವು ಹತ್ತು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಗೆ ಮುಂಚೆ ಆಧಾರ್ ಅನ್ನು ಪಡೆದಿದ್ದಲ್ಲಿ, ನೀವು ನವೀಕರಿಸುವುದು ಕಡ್ಡಾಯ. ಮಕ್ಕಳು ಅಥವಾ ವಯಸ್ಕ ನಾಗರಿಕರು ತಮ್ಮ ಹತು ವರ್ಷಗಳ ಹಳೆಯ ಆಧಾರ್ ಕಾರ್ಡ್ ನವೀಕರಿಸುವುದರೊಂದಿಗೆ, ತಮ್ಮ ವಿಳಾಸ, ಮೊಬೈಲ್ ನಂಬರ್ ಅಥವಾ ಯಾವುದೇ ಇತರ ವಿವರಗಳನ್ನು ನವೀಕರಿಸಿಕೊಳ್ಳಬಹುದು ಅಥವಾ ತಿದ್ದುಪಡಿ ಮಾಡಬಹುದು. ಹತ್ತು ವರ್ಷಗಳಲ್ಲಿ ಫಿಂಗರ್‌ಪ್ರಿಂಟ್, ಮುಖಚಹರೆ ಅಥವಾ ಮೊಬೈಲ್ ಸಂಖ್ಯೆಗಳು ಬದಲಾಗುವ ಸಾಧ್ಯತೆ ಇರುವುದರಿಂದ ಹಾಗೂ ಅಪ್ರಾಪ್ತ ಮಕ್ಕಳು ವಯಸ್ಕರಾದ ಮೇಲೆ ಎಲ್ಲಾ ವಿವರಗಳನ್ನು ಅಪ್‌ಡೇಟ್ ಮಾಡಬೇಕಾಗಿರುವುದರಿಂದ ಈ ನವೀಕರಣ ಅಗತ್ಯವಿದೆ. ಆದರೆ, ಆಧಾರ್ ಕಾರ್ಡ್ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ಎಂ-ಆಧಾರ್ (MyAadhaar) ಪೋರ್ಟಲ್ ಮೂಲಕ ನಿಮ್ಮ ಆಧಾರ್ ನವೀಕರಣ ಅಥವಾ ತಿದ್ದುಪಡಿ ಹೇಗೆ?
- MyAadhaar ಪೋರ್ಟಲ್‌ಗೆ ಭೇಟಿ ನೀಡಿ ಅಥವಾ https://myaadhaar.uidai.gov.in/ ಲಿಂಕ್ ಅನ್ನು ತೆರೆಯಿರಿ.
- ನಿಮ್ಮ ಆಧಾರ್ ನಂಬರ್ ಅಥವಾ ಯಾವುದೇ ದಾಖಲೆಯನ್ನು ಬಳಸಿ, ನಿಮ್ಮ ಎಲ್ಲಾ ವಿವರಗಳನ್ನು ನಮೂದಿಸಿ.
- ಆನ್‌ಲೈನ್‌ನಲ್ಲಿ ಆಧಾರ್ ನವೀಕರಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಿಮಗೆ ಅವಶ್ಯವಿರುವ ನವೀಕರಣ/ತಿದ್ದುಪಡಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
- ನವೀಕರಿಸುವ ವಿಳಾಸ ಅಥವಾ ಯಾವುದೇ ಇತರ ವಿವರಗಳಿಗೆ, ಸಮರ್ಪಕ ವಿಳಾಸ ಅಥವಾ ವಿವರಗಳಿರುವ ಇತರ ಯಾವುದೇ ದಾಖಲೆಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು.
- ಅಂತಿಮವಾಗಿ ಸೇವಾ ವಿನಂತಿ ಸಂಖ್ಯೆ ಅಥವಾ Service Request Number (SRN) ನ್ನು ನೋಟ್ ಮಾಡಿಕೊಳ್ಳಿ. ಅದು ಮುಂದಿನ ಸೇವೆಗಳಿಗಾಗಿ ಸಹಾಯಕವಾಗಬಹುದು.
ಉಚಿತವಾಗಿ ಆಧಾರ್ ತಿದ್ದುಪಡಿ (Aadhaar Card Update) ಮಾಡುವ ಅವಕಾಶವನ್ನು ಯುಐಡಿಎಐ ನೀಡಿದ್ದು, ಡಿಸೆಂಬರ್ 14 ರೊಳಗಾಗಿ ನೀವು ತಿದ್ದುಪಡಿ ಮಾಡಿಕೊಂಡಲ್ಲಿ ಯಾವುದೇ ಶುಲ್ಕ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಡಿಸೆಂಬರ್ 14 ರ ನಂತರ ನವೀಕರಣ ಅಥವಾ ಬದಲಾವಣೆಗಾಗಿ ನೀವು ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ನಿಮ್ಮ ಆಧಾರ್ ವಿವರಗಳಲ್ಲಿ ಯಾವುದೇ ಬದಲಾವಣೆಯಿದ್ದಲ್ಲಿಈ ಕೂಡಲೇ ಮಾಡಿಸಿಕೊಳ್ಳಿ. ನಿಮಗೆ ವೈಯುಕ್ತಿಕವಾಗಿ ಆಧಾರ್ ಅಪ್‌ಡೇಟ್ ಮಾಡಲು ಸಾಧ್ಯವಾಗದಿದ್ದಲ್ಲಿ, ನಿಮ್ಮ ಸಮೀಪದಲ್ಲಿರುವ ಆಧಾರ್ ಕೇಂದ್ರ/ಡಿಜಿಟಲ್ ಸೇವಾ ಕೇಂದ್ರ/ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗಳಲ್ಲಿರುವ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಸೇವೆಯನ್ನು ಪಡೆದುಕೊಳ್ಳಬಹುದು.