Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮಿ ಯೋಜನೆಯ 10 ಹಾಗೂ 11ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಜಮೆ! ಬೆಳ್ಳಂಬೆಳಿಗ್ಗೆ ಅಪ್ಡೇಟ್

advertisement

ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ಪ್ರಾರಂಭಿಸಿರುವಂತಹ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಇವತ್ತಿನವರೆಗೂ ಕೂಡ ಸರಿಯಾದ ರೀತಿಯಲ್ಲಿ ಮುಂದುವರಿಸಿಕೊಂಡು ಬರಲಾಗಿದೆ ಎನ್ನುವಂತಹ ವಿಚಾರ ನಿಮಗೆಲ್ಲರಿಗೂ ತಿಳಿದಿರುವ ಸುದ್ದಿಯಾಗಿದೆ. ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ರಾಜ್ಯ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಒಂದು ವರ್ಷದಿಂದಲೂ ಕೂಡ ತಾವು ಚುನಾವಣೆಯ ಸಂದರ್ಭದಲ್ಲಿ ನೀಡಿದಂತಹ ಪ್ರತಿಯೊಂದು ಗ್ಯಾರಂಟಿ ಯೋಜನೆಗಳನ್ನ ಜನರಿಗೆ ತಲುಪಿಸಲು ಶತಾಯಗತಾಯ ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಅದರಲ್ಲೂ ಹೆಚ್ಚಾಗಿ ಜನಪ್ರಿಯತೆಯನ್ನು ಹೊಂದಿರುವಂತಹ ಯೋಜನೆ ಅಂತ ಅಂದ್ರೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana). ಈ ಯೋಜನೆಯ ಮೂಲಕ ರಾಜ್ಯದಲ್ಲಿರುವಂತಹ ಪ್ರತಿಯೊಂದು ಬಡವರ್ಗದ ಮಹಿಳೆಯರಿಗೆ ಯೋಜನೆಯಲಿ ನೋಂದಾಯಿಸಿಕೊಂಡವರಿಗೆ ಪ್ರತಿ ತಿಂಗಳು 2000 ರೂಪಾಯಿ ಮಾಸಿಕ ಸಹಾಯಧನವನ್ನು ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ.

 

Image Source: Oneindia

 

ಇನ್ನು ಕಳೆದ ಬಾರಿಯ ಹಾಗೂ ಈ ಬಾರಿಯ 10 ಹಾಗೂ 11ನೇ ಕಂತಿನ ಹಣ ಸಾಕಷ್ಟು ಜನ ಮಹಿಳೆಯರಿಗೆ ಸಿಕ್ಕಿಲ್ಲ ಎನ್ನುವುದಾಗಿ ತಿಳಿದು ಬಂದಿದ್ದು ಇದಕ್ಕೆ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ ಎಂದು ಹೇಳಬಹುದಾಗಿದೆ.

advertisement

ಹೌದು ಗೆಳೆಯರೇ ರಾಜ್ಯದ 28 ಜಿಲ್ಲೆಗಳಿಗೆ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 10 ಹಾಗೂ 11ನೇ ಕಂತಿನ ಒಟ್ಟಾರೆ ಹಣ 4000 ಬಿಡುಗಡೆಯಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಆ ಜಿಲ್ಲೆಗಳು ಯಾವುವು ಅನ್ನೋದನ್ನ ತಿಳಿಯೋಣ. ಇನ್ನು ಈ ಹಣವನ್ನ ಇವತ್ತು 10:30 ಕ್ಕೆ ಇಲಾಖೆ ಬಿಡುಗಡೆ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ.

ಯಾವೆಲ್ಲ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ?

 

 

ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರಿ ನಗರ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಗದಗ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಮಂಗಳೂರು, ಚಿತ್ರದುರ್ಗ ಧಾರವಾಡ, ದಾವಣಗೆರೆ, ಹಾಸನ, ಹಾವೇರಿ, ಕಲ್ಬುರ್ಗಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಉಡುಪಿ, ಉತ್ತರ ಕನ್ನಡ ಗಳಂತಹ ಜಿಲ್ಲೆಗೆ ಇವತ್ತು ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಹಣವನ್ನ ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಹತ್ತು ಹಾಗೂ ಹನ್ನೊಂದು ಎರಡು ಕಂತಿನ ಹಣವನ್ನು ಕೂಡ ಇಲ್ಲಿ ವರ್ಗಾವಣೆ ಮಾಡಲಾಗಿದೆ.

ಒಂದು ವೇಳೆ ನಿಮ್ಮ ಖಾತೆಗೆ ಅದಾದ ನಂತರ ಕೂಡ ಹಣ ಬಂದಿಲ್ಲ ಅಂದ್ರೆ 48 ಗಂಟೆಗಳ ಕಾಲ ಕಾಯಿರಿ ಖಂಡಿತವಾಗಿ ಹಣ ಬಂದೇ ಬರುತ್ತದೆ. ಹೀಗಾಗಿ ಸರ್ಕಾರ ಎರಡು ಕಂತಿನ ಹಣವನ್ನ ಒಟ್ಟಿಗೆ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡುವ ಹೊರಟಿದ್ದು ಈ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡು ಇರುವಂತಹ ಮಹಿಳೆಯರು ಹಣ ವರ್ಗಾವಣೆ ವಿಚಾರದ ಬಗ್ಗೆ ಯಾವುದೇ ರೀತಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇಲ್ಲ.

advertisement

Leave A Reply

Your email address will not be published.