Karnataka Times
Trending Stories, Viral News, Gossips & Everything in Kannada

Ration Card: ಕೊನೆಗೂ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್! ಕೂಡಲೇ ಸ್ಟೇಟಸ್ ಚೆಕ್ ಮಾಡಿ

advertisement

ರಾಜ್ಯದಲ್ಲಿ ಬಡ ವರ್ಗದ ಜನತೆಗಾಗಿ ಸರಕಾರ ಹಲವು ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದು ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಈಗಾಗಲೇ ರೇಷನ್ ಕಾರ್ಡ್ (Ration Card) ಇದ್ದಂತಹ ಜನರಿಗೆ ಪಡಿತರ ಜೊತೆಗೆ ಆಹಾರ ಧಾನ್ಯ ಗಳನ್ನು ಕೂಡ ವಿತರಣೆ ಮಾಡ್ತಾ ಇದ್ದಾರೆ.ಇದೀಗ ಜೂನ್ ತಿಂಗಳ ಪಡಿತರ ವಿತರಿಸುವ ಬಗ್ಗೆ ಅಪ್ಡೇಟ್ ಮಾಹಿತಿ ಇಲ್ಲಿದೆ.

ಇದೀಗ ಅನ್ನಭಾಗ್ಯ ಯೋಜನೆಯ ಮೂಲಕ ಜೂನ್ ತಿಂಗಳ ಆಹಾರ ಧಾನ್ಯ ವಿತರಣೆ ಮಾಡಲಾಗ್ತ ಇದ್ದು ಪಡಿತರ ಗ್ರಾಹಕರು ರೇಷನ್ ಪಡೆಯಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

Anna Bhagya Money: 

 

Image Source: Tribune India

 

ಅನ್ನ ಭಾಗ್ಯ ಯೋಜನೆ (Anna Bhagya Yojana) ಯ ಮೂಲಕ‌ ಪ್ರತಿ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ಜಮೆಯನ್ನು ಮಾಡುತ್ತಿದೆ.ಈಗಾಗಲೇ ಬಿಪಿಎಲ್ ಕಾರ್ಡ್ ಇದ್ದಂತಹ ಪಡಿತ ದಾರರಿಗೆ ಈಗಾಗಲೇ ಮೂರು ತಿಂಗಳಿನಿಂದ ಅನ್ನಬಾಗ್ಯ ಹಣ ಜಮೆ ಯಾಗಿರಲಿಲ್ಲ.‌ಇದೀಗ ಈ ತಿಂಗಳಿನಲ್ಲಿ ಅನ್ನಭಾಗ್ಯ ಹಣ (Anna Bhagya Money) ಸರಕಾರ ಬಿಡುಗಡೆ ಮಾಡಿದ್ದು ಇದೇ ಜುಲೈ ತಿಂಗಳಿನ ಒಳಗೆ ಶೀಘ್ರದಲ್ಲೇ ಹಣ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಆಹಾರ ಸಚಿವರು ನೀಡಿದ್ದಾರೆ.

ಪಡಿತರ ವಿತರಣೆ:

advertisement

ಅಂತ್ಯೋದಯ ಪಡಿತರ ಚೀಟಿಗೆ 14 ಕೆ.ಜಿ ಜೋಳ ಮತ್ತು ಪಿ.ಹೆಚ್.ಹೆಚ್ ಫಲಾನುಭವಿಗಳಿಗೆ 2 ಕೆ.ಜಿ ಜೋಳ ಹಾಗೂ ಎಎವೈ ಪಡಿತರ ಚೀಟಿಗೆ 21 ಕೆ.ಜಿ ಅಕ್ಕಿ ಮತ್ತು ಪಿ.ಹೆಚ್.ಹೆಚ್ ಫಲಾನುಭವಿಗಳಿಗೆ 3 ಕೆ.ಜಿ ಅಕ್ಕಿ ವಿತರಣೆ ಮಾಡುವ ಬಗ್ಗೆ ಮಾಹಿತಿ ಕೂಡ ನೀಡಿದ್ದಾರೆ.

ಹೊಸ ಕಾರ್ಡ್?

 

Image Source: DNA India

 

ಅದೇ ರೀತಿ‌ ಇದೀಗ ಹೊಸ ಕಾರ್ಡ್ (New Ration Card) ಅರ್ಜಿ ಸಲ್ಲಿಕೆಗೆ‌ ಹೆಚ್ಚಿನ‌ ಜನರು ಕಾತರದಿಂದ ಕಾಯುತ್ತಿದ್ದು ಯಾವಾಗ ಅವಕಾಶ ನೀಡಲಿದ್ದಾರೆ ಎಂದು ಕಾದು ಕುಳಿತಿದ್ದಾರೆ. ಇದೀಗ ಸರ್ಕಾರ ಜೂನ್‌ನಲ್ಲಿ ಹೊಸ ರೇಷ್‌ನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಿದೆ ಎನ್ನಲಾಗಿತ್ತು.‌ ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಹಳೆ ಅರ್ಜಿ ಗಳ ವಿಲೇವಾರಿ ಆದ ಬಳಿಕವೇ ಹೊಸ ಕಾರ್ಡ್ ಗೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.

ಈ ಷರತ್ತು ಅನ್ವಯ:

ಹೊಸ ಕಾರ್ಡ್ ಗೆ ಅರ್ಜಿ ಹಾಕಲು ಕೆಲವು ಷರತ್ತು ಕೂಡ ಇರಲಿದ್ದು ವ್ಯಕ್ತಿಯು ‌ ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದೇ ರೀತಿ‌ ಪಡಿತರ ಚೀಟಿ ಹೊಂದಿಲ್ಲದವರು, ಹೊಸದಾಗಿ ವಿವಾಹವಾದ ದಂಪತಿಗಳು ಹೊಸ ಮನೆ ಮಾಡಿದವರು ಅರ್ಜಿ ಹಾಕಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ https://ahara.kar.nic.in/ಗೆ ಭೇಟಿ ನೀಡಿ ಮಾಹಿತಿ ಪಡೆಯಿರಿ.

advertisement

Leave A Reply

Your email address will not be published.