Karnataka Times
Trending Stories, Viral News, Gossips & Everything in Kannada

Transport Employees: KSRTC ಸೇರಿದಂತೆ ರಾಜ್ಯದ ಎಲ್ಲಾ ಸಾರಿಗೆ ನೌಕರರಿಗೆ ಹೊಸ ರೂಲ್ಸ್!

advertisement

ಇದೀಗ ಸಾರಿಗೆ ನೌಕರರಿಗೆ (Transport Employees) ಸರಕಾರವು ಹೊಸ ನಿಯಮವೊಂದನ್ನು ಜಾರಿ ಮಾಡಿದೆ.ಹೌದು ಇನ್ಮುಂದೆ ಮುಷ್ಕರ ಮಾಡುವಂತಿಲ್ಲ ಎನ್ನುವ ನಿಯಮ‌ ಜಾರಿ ಮಾಡಿದ್ದು ಸರ್ಕಾರದಿಂದ ಮಹತ್ವದ ಆದೇಶ ಕೂಡ ನೀಡಲಾಗಿದೆ.‌ಹೌದು ಯಾಕಾಗಿ ಈ ನಿಯಮ ಜಾರಿ ಮಾಡಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಇಂದು ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು (5 Guarantee Schemes) ಮಹತ್ವದ ಸ್ಥಾನ ಪಡೆದು ಕೊಂಡಿದ್ದು ಅದರಲ್ಲಿ ಶಕ್ತಿ ಯೋಜನೆ (Shakti Yojana) ಕೂಡ ಒಂದಾಗಿದೆ.

ಈ ಯೋಜನೆಯ ಮೂಲಕ ಮಹಿಳೆಯರು ಉಚಿತ ಪ್ರಯಾಣ ಮಾಡ್ತಾ ಇದ್ದಾರೆ. ಇಂದು ಸರಕಾರಿ ಬಸ್ ನಲ್ಲಿ ಮಹಿಳೆಯರದ್ದೆ ಸಂಖ್ಯೆ ಅಧಿಕ ವಾಗಿದೆ ಎಂದು ಹೇಳಬಹುದು‌. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಲಾಭ ವಾದರೆ ಅದನ್ನು ನಿಭಾಯಿಸುವ ಬಸ್ ಸಿಬ್ಬಂದಿ ಗಳಿಗೆ ಕಷ್ಟ ವೇ ಆಗಿದೆ.

ಇದೀಗ ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ (Transport Employees) ಸರಕಾರ ಈ ಆದೇಶ ವನ್ನು ನೀಡಿದ್ದು ಯಾವುದೇ ಕಾರಣಕ್ಕೂ ಮುಷ್ಕರ ಮಾಡಬಾರದು ಎನ್ನುವ ಸೂಚನೆಯನ್ನು ನೀಡಿದೆ.ಹೌದು ಪ್ರತಿಭಟನೆ ಅಸಹಕಾರ ಚಳುವಳಿಗಳನ್ನು ಮಾಡಲು ಅನುಮತಿ ಇಲ್ಲ ಎಂದಿದೆ. ಮುಂದಿನ ಆರು ತಿಂಗಳು ಯಾವುದೇ ಸಮಸ್ಯೆಗಳಿದ್ದರೂ, ತೊಂದರೆ ಇದ್ದರೂ ಪ್ರತಿಭಟನೆ ನಡೆಸುವಂತಿಲ್ಲ ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ.

 

advertisement

Image Source: Etemaad

 

ಇಂದು ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆಯ ಸಿಬ್ಬಂದಿಗಳ ಜವಾಬ್ದಾರಿ ಹೆಚ್ಚಾಗಿದೆ. ನೌಕರರ ಮುಷ್ಕರ ಹಾಗೂ ಪ್ರತಿಭಟನೆ ನಡೆಸುವ ಅವಕಾಶ ನೀಡಿದರೆ ಪ್ರಯಾಣಿಕರಿಗೂ ಕಷ್ಟ ವಾಗಲಿದೆ. ಈಗಾಗಲೇ ಸರಕಾರಿ ನೌಕರರಿಗೆ ಸಮಾನವಾದ ವೇತನವನ್ನು ನೀಡಬೇಕು ಎಂದು ರಾಜ್ಯ ಸಾರಿಗೆ ನೌಕರರು ಮುಷ್ಕರ ಮಾಡಲು ಹಲವು ಭಾರಿ ಮುಂದಾಗಿದ್ದಾರೆ.ಸಾರಿಗೆ ನೌಕರರಿಗೂ ಸಮಾನ ವೇತನ ನೀಡಬೇಕು, ನಮ್ಮನ್ನು ಸರ್ಕಾರಿ ನೌಕರರೆಂದು ನೋಡಬೇಕು.ಹೀಗೆ ಹಲವು ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದರು.

ಸಾರಿಗೆ ನಿಗಮಗಳ ನೌಕರರಿಗೆ (Transport Employees) ನಿವೃತ್ತಿ ನಂತರ ಕೇವಲ 3000 ರಿಂದ 3500 ಪಿಂಚಣಿ ಮಾತ್ರ ನೀಡಲಾಗುತ್ತಿದೆ. ಇಷ್ಟು ಹಣ ಸಾಲುವುದುಲ್ಲ. ನೌಕರರ ವಜಾ, ವರ್ಗಾವಣೆ, ಆಮಾನತ್ತು ವಿಚಾರದ ಮೇಲೆಯು ಅಸಮಾಧಾನ ಹೊರ ಹಾಕಿದ್ದರು.

ಇದೀಗ ರಾಜ್ಯದಲ್ಲಿ ಪೆಟ್ರೋಲ್‌ ದರ (Petrol Price) ಲೀಟರ್‌ಗೆ 3.03 ರೂ. ಏರಿಕೆಯಾಗಿದ್ದು ಡೀಸೆಲ್‌ ದರ (Diesel Price) ಲೀಟರ್‌ಗೆ 3.02 ರೂ. ಹೆಚ್ಚಿದೆ. ಸದ್ಯ ಸರಕಾರಕ್ಕೆ ಸಿಬ್ಬಂದಿಗಳ ವೇತನ, ವಾಹನದ ಬಿಡಿಭಾಗಗಳ ಖರ್ಚು, ನಿರ್ವಹಣಾ ಖರ್ಚು ಹೆಚ್ಚಾದ ಹಿನ್ನಲೆಯಲ್ಲಿ ಸಾರಿಗೆ‌ನಿಗಮಕ್ಕೆ ಹೆಚ್ಚು ಖರ್ಚು ಬೀಳಲಿದೆ.ಹೀಗಾಗಿ ಎಲ್ಲವನ್ನು ನಿಭಾಯಿಸುವುದು ಕಷ್ಟವೇ. ಇದೀಗ ಸಾರಿಗೆ ನೌಕರರಿಗೂ ಈ ಆದೇಶ ನೀಡಿದ್ದು ನೌಕರರಿಗೆ ಈ ನಿಯಮ ಬೇಸರ ಮೂಡಿಸಿದೆ

advertisement

Leave A Reply

Your email address will not be published.