Karnataka Times
Trending Stories, Viral News, Gossips & Everything in Kannada

Alok Kumar: ರಾಜ್ಯದ ಎಲ್ಲ ಬೈಕ್ ಹಾಗೂ ಕಾರು ಸವಾರರಿಗೆ ಖಡಕ್ ಆಫೀಸರ್ ಅಲೋಕ್ ಕುಮಾರ್ ಹೊಸ ಸೂಚನೆ!

advertisement

ಸಾರಿಗೆ ವಿಭಾಗದಲ್ಲಿ ಜಾರಿಗೆ ತರುವಂತಹ ಪ್ರತಿಯೊಂದು ಹೊಸ ನಿಯಮಗಳು ಅಥವಾ ಹೊಸ ಶಿಕ್ಷೆಗಳು ಕೂಡ ಪ್ರತಿಯೊಂದು ನಿಯಮ ಉಲ್ಲಂಘನೆ ಆಗುವಂತಹ ಕೆಲಸಗಳನ್ನು ಕಮ್ಮಿ ಮಾಡೋ ಕಾರಣಕ್ಕಾಗಿ ಅನ್ನೋದನ್ನ ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ವಾಹನಗಳ ಮೇಲೆ ವಾಹನ ಚಾಲಕರು ಮಾಡುವಂತಹ ಸಾಕಷ್ಟು ಬದಲಾವಣೆಗಳ ಕಾರಣದಿಂದಾಗಿ ಕೂಡ ಅನಗತ್ಯವಾಗಿ ರಸ್ತೆಗಳಲ್ಲಿ ಅಪಘಾತಗಳು ಗಣನೀಯವಾಗಿ ಹೆಚ್ಚಾಗುತ್ತಿವೆ ಅನ್ನೋದು ಟ್ರಾಫಿಕ್ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದ್ದು ಈಗ ಹೊಸ ನಿಯಮವನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಲಾಗಿದೆ.

ಈ ವಿಚಾರದ ಬಗ್ಗೆ ಇತ್ತೀಚಿಗಷ್ಟೇ ಸುದ್ದಿಗೋಷ್ಠಿ ನಡೆಸಿರುವಂತಹ ಅಲೋಕ್ ಕುಮಾರ್ (Alok Kumar) ರವರು ಈ ವಿಚಾರದ ಬಗ್ಗೆ ಸರಿಯಾದ ರೀತಿಯಲ್ಲಿ ಎಚ್ಚರಿಕೆ ರವಾನೆ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇನ್ಮುಂದೆ ಯಾವುದೇ ವಾಹನಗಳಲ್ಲಿಯೂ ಕೂಡ ಅತ್ಯಂತ ಹೆಚ್ಚು ಪ್ರಕಾಶಮಾನವಾಗಿರುವಂತಹ ಎಲ್ಇಡಿ ಹೆಡ್ಲೈಟ್ಗಳನ್ನ (LED Headlights) ಬಳಸುವುದು ಅಪರಾಧ ಎಂಬುದಾಗಿ ಪರಿಗಣಿಸಲಾಗಿದೆ. ಬನ್ನಿ ಹಾಗಿದ್ದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಇನ್ಮುಂದೆ ಎಲ್ಇಡಿ ಹೆಡ್ ಲೈಟ್ ಹಾಕೋ ಹಾಗಿಲ್ಲ ಹುಷಾರ್!

 

Image Source: Deccan Chronicle

 

advertisement

ಹೌದು ಪ್ರಯಾಣಿಸುವಾಗ ಎದುರುಗಡೆ ಬರುವಂತಹ ವಾಹನಗಳ ಕಣ್ಣಿಗೆ ಕುಕ್ಕುವಂತಹ ಎಲ್ಇಡಿ ಹೆಡ್ ಲೈಟ್‌ಗಳ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಪ-ಘಾತಗಳು ನಡೆದಿದೆ ಎನ್ನುವಂತಹ ಪ್ರಕರಣಗಳು ವರದಿ ಆಗಿರುವ ಬೆನ್ನಲ್ಲಿ ಈ ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ.

ಇನ್ಮುಂದೆ ಯಾರೇ ಆಗಲಿ ತಮ್ಮ ವಾಹನಗಳಿಗೆ ಪ್ರಕಾಶಮಾನವಾಗಿರುವಂತಹ ಎಲ್ಇಡಿ ಹೆಡ್ ಲೈಟ್ (LED Headlights) ಗಳನ್ನ ಬಳಸಿದರೆ ಸೆಂಟ್ರಲ್ ಮೋಟಾರ್ ರೂಲ್ಸ್ 1998ರ, ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ 177 ರ ಪ್ರಕಾರ ಶಿಕ್ಷೆಯನ್ನು ವಿಧಿಸಲಾಗುತ್ತದೆ ಎನ್ನುವುದಾಗಿ ಅಲೋಕ್ ಕುಮಾರ್ (Alok Kumar) ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

 

Image Source: YT-Scotty Kilmer

 

ಈ ಸಂದರ್ಭದಲ್ಲಿ ಅವರು ತಿಳಿಸಿರುವಂತಹ ಮಾಹಿತಿಯ ಪ್ರಕಾರ ಸಾಮಾನ್ಯವಾಗಿ 500 ರೂಪಾಯಿಗಳ ದಂಡವನ್ನು ವಿಧಿಸಬೇಕಾಗುತ್ತದೆ ಆದರೆ ಕೆಲವೊಂದು ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ಕೂಡ ಅನುಭವಿಸ ಬೇಕಾಗಿರುವಂತಹ ಅಗತ್ಯ ಇರುತ್ತದೆ ಅನ್ನೋದನ್ನ ತಿಳಿದುಕೊಳ್ಳಿ ಎನ್ನುವಂತಹ ಎಚ್ಚರವನ್ನು ಸಮಾಜಕ್ಕೆ ರವಾನೆ ಮಾಡಿದ್ದಾರೆ ‌ ತಮಗೆ ತಿಳಿಯದಂತೆ ಈ ಲೈಟ್ ಗಳನ್ನು ಹಾಕಿಕೊಳ್ಳುವ ಮೂಲಕ ಬೇರೆಯವರ ಜೀವನ ಹಾನಿಯನ್ನು ಮಾಡಬಹುದಾಗಿದ್ದು ಇನ್ನಾದರೂ ಈ ನಿಯಮವನ್ನ ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ತಮ್ಮ ವಾಹನಗಳಲ್ಲಿ ಕಣ್ಣು ಕುಕ್ಕುವಂತಹ ಎಲ್ಇಡಿ ಹೆಡ್ ಲೈಟ್ (LED Headlights) ಗಳಿದ್ರೆ ಅದನ್ನ ರಿಮೂವ್ ಮಾಡಬೇಕಾಗಿರುತ್ತದೆ. ಸಾರಿಗೆ ಇಲಾಖೆಯ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವ ಮೂಲಕ ಕಾನೂನು ನಿಯಮಗಳ ಪರಿಪಾಲನೆಯನ್ನು ಮಾಡುವ ಒಬ್ಬ ಜವಾಬ್ದಾರಿಯುತ ನಾಗರಿಕನ ಜವಾಬ್ದಾರಿಯನ್ನು ನಿಭಾಯಿಸಿ.

advertisement

Leave A Reply

Your email address will not be published.