Karnataka Times
Trending Stories, Viral News, Gossips & Everything in Kannada

Crop Loan Waiver: ರೈತರಿಗೆ ಗುಡ್ ನ್ಯೂಸ್, ಕೃಷಿಕರ 31 ಸಾವಿರ ಕೋಟಿ ರೂ ಬೆಳೆಸಾಲ ಮನ್ನಾ! ಬಿಗ್ ಅಪ್ಡೇಟ್

advertisement

ಭಾರತದಲ್ಲಿ ರೈತರು ಕೃಷಿ ಮಾಡುವ ಮೂಲಕ ಬದುಕು ರೂಪಿಸಿದ್ದಾರೆ. ಆದರೆ ಕೃಷಿ ಮಾಡಲು ಅಷ್ಟು ಸುಲಭ ಅಲ್ಲ. ಕಷ್ಟ ಪಟ್ಟ ರೇ ಮಾತ್ರ ಫಸಲು ಕೂಡ ಸಿಗಲಿದೆ.ಆದರೆ ಎಲ್ಲಾ ಕಾಲ ದಲ್ಲಿಯು ತಾವು ಮಾಡಿದಂತಹ ಕೃಷಿಗೆ ರೈತರಿಗೆ ಲಾಭ ಸಿಗಲು ಸಾಧ್ಯ ಇಲ್ಲ.ಯಾಕಂದರೆ ಮಾರುಕಟ್ಟೆ ಯಲ್ಲಿಯು ಇದರ ಬೆಲೆ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ.‌

ಹಾಗಾಗಿ ಎಲ್ಲ ಸಮಯದಲ್ಲಿಯು ಕೃಷಿಯಲ್ಲಿ ಲಾಭ ಬರಲ್ಲ. ಹಾಗೆಯೇ ಈ ಭಾರಿ ರೈತರು ಕೂಡ ಬರದಿಂದಾಗಿ ನಷ್ಟ ಅನುಭವಿಸಿದ್ದು ಕೃಷಿಗಾಗಿ ಮಾಡಿದಂತಹ ಸಾಲ (Loan) ಕಟ್ಟಲು ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಇದಕ್ಕಾಗಿ ಸರಕಾರಿ ಬೆಳೆ ನಷ್ಟ ಉಂಟಾದ ರೈತರಿಗೆ ಬೆಳೆ ಪರಿಹಾರ ನೀಡಲು ಮುಂದಾಗಿದೆ. ಈಗಾಗಲೇ ಕೆಲವು ರೈತರ ಖಾತೆಗೆ ಹಣ ಜಮೆ ಯಾಗಿದೆ.

ರೈತರು ಕೃಷಿ ಚಟುವಟಿಕೆ ಮಾಡಲು , ಕೃಷಿ ಅಗತ್ಯತೆಗಾಗಿ ಬ್ಯಾಂಕ್‌ ಸಾಲ (Bank Loan) ಮಾಡುತ್ತಾರೆ.ಇದನ್ನು ರೈತರಿಗೆ ಹೊಂದಿಸಲು ಕಷ್ಟ. ಇದೀಗ ತೆಲಂಗಾಣ ಸರಕಾರ ‌ಅಲ್ಲಿನ ರೈತರಿಗೆ ಗುಡ್ ನ್ಯೂಸ್ ನೀಡಿದ್ದು ‌ ಸಾಲ ಮನ್ನಾ (Crop Loan Waiver) ಮಾಡಲು ಮುಂದಾಗಿದೆ.

 

Image Source: Moneycontrol

 

advertisement

2018ರ ಡಿಸೆಂಬರ್ 12 ರಿಂದ 2023ರ ಡಿಸೆಂಬರ್ 9ರ ವರೆಗೆ ರೈತರು ಪಡೆದಿರುವ 2 ಲಕ್ಷ ರೂ.ವರೆಗಿನ ಎಲ್ಲಾ ಕೃಷಿಕರ ಬೆಳೆ ಸಾಲವನ್ನು ಮನ್ನಾ (Crop Loan Waiver) ಮಾಡಲು ಮುಂದಾಗಿದ್ದು ಅಲ್ಲಿನ ರೈತರಿಗೆ ಈ ವಿಚಾರ ಖುಷಿ ನೀಡಿದೆ. ಈ ಬಗ್ಗೆ ರಾಜ್ಯ ಸಚಿ ವಾಲಯದಲ್ಲಿ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದ್ದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಗುಡ್ ನ್ಯೂಸ್ ನೀಡಿದ್ದಾರೆ.

ರೈತರ ಬೆಳೆ ಸಾಲ ಮನ್ನಾ (Crop Loan Waiver) ಮಾಡಲು ಸುಮಾರು‌ 31,000 ಕೋಟಿ ರೂ. ಹಣ ಅಗತ್ಯವಿದೆ ಎನ್ನಲಾಗಿದ್ದು ಪ್ರತಿ ಕೃಷಿಕರ 2 ಲಕ್ಷ ರೂ.ಯಂತೆ 31,000 ಕೋಟಿ ರೂ. ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಇಲ್ಲಿನ ಹಿಂದಿನ ಬಿಆರ್‌ಎಸ್ ಸರ್ಕಾರವು ಕೂಡ 16,000 ಕೋಟಿ ರೂ. ಮತ್ತು 2 ನೇ ಅವಧಿಯಲ್ಲಿ 12,000 ಕೋಟಿ ರೂ.ಗಳನ್ನು ತನ್ನ ಬೆಳೆ ಸಾಲ ಮನ್ನಾ ಮಾಡಿತ್ತು.

 

Image Source: Business Standard

 

ಅದೇ ರೀತಿ ಜಾರ್ಖಂಡ್ಅಲ್ಲಿನ ಸರ್ಕಾರ ರೂ.50 ಸಾವಿರದವರೆಗಿನ ಸಾಲ ಮನ್ನಾ ಜಾರಿ ಮಾಡುತ್ತಿದೆ.ಹಾಗಾಗಿ ಇದೀಗ ಕರ್ನಾಟಕದ ರೈತರು ಕೂಡ ಈ ಭಾರಿ ಬಹಳಷ್ಟು ನಷ್ಟ ಅನುಭವಿಸಿದ್ದು ಇಲ್ಲಿಯು ಸಾಲ ಮನ್ನಾ (Crop Loan Waiver) ಮಾಡುವ ಸಾಧ್ಯತೆ ಇರಬಹುದು.ಆದರೆ ಸರಕಾರ ಈ ಬಗ್ಗೆ ಮಾಹಿತಿ ನೀಡಿಲ್ಲ.ಹಾಗಾಗಿ ಇಲ್ಲಿನ‌ ರೈತರಿಗೂ ಈ ಸೌಲಭ್ಯ ಜಾರಿ ತರಲಿ ಎಂದು ಇಲ್ಲಿನ ರೈತರು ಕಾದು ಕುಳಿತಿದ್ದಾರೆ.

advertisement

Leave A Reply

Your email address will not be published.