Karnataka Times
Trending Stories, Viral News, Gossips & Everything in Kannada

Aadhaar Card: UIDAI ಸಹಾಯದಿಂದ ಇನ್ನು ಮುಂದೆ ಯಾವುದೇ ದಾಖಲೆಯಿಲ್ಲದೇ ಆಧಾರ್ ಕಾರ್ಡ್ ಮಾಡಬಹುದು ಇಲ್ಲಿದೆ ವಿಧಾನ

Advertisement

ಭಾರತೀಯ ನಾಗರಿಕರಿಗೆ ಆಧಾರ್ ಕಾರ್ಡ್ (Aadhaar Card) ಯಾವುದೇ ವ್ಯವಹಾರ ಮಾಡೋದಿದ್ದರೂ ಬೇಕೇ ಬೇಕು. ವ್ಯಕ್ತಿಯ ಗುರುತಿನ ಆಧಾರವಾಗಿ ಆಧಾರ್ ಕಾರ್ಡ್ ಬಳಸಲಾಗುತ್ತದೆ. ಬೇರೆ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ ಕೆಲವೊಮ್ಮೆ ಕೆಲವು ವ್ಯವಹಾರ ನಡೆಯುತ್ತವೆ ಆದರೆ ಆಧಾರ್ ಕಾರ್ಡ್ ಇಲ್ಲದೆ ಮಾತ್ರ ನೀವು ಯಾವ ಹಣಕಾಸಿನ ವ್ಯವಹಾರವನ್ನು (A Financial Transaction) ಕೂಡ ಮಾಡಲು ಸಾಧ್ಯವಿಲ್ಲ. ಇನ್ನು ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಈಗ ಮೊದಲಿಗಿಂತಲೂ ಸುಲಭವಾಗಿದೆ. ನೀವು ಆಧಾರ್ ಕಾರ್ಡ್ ಮಾಡಲು ಬಯಸಿದರೆ ವಿಳಾಸ ಪುರಾವೆಗಾಗಿ ಯಾವುದೇ ದಾಖಲೆ ಇಲ್ಲದಿದ್ದರೂ ಕೂಡ ಆಧಾರ್ ಕಾರ್ಡ್ ಮಾಡಬಹುದು. ಇದಕ್ಕಾಗಿ ಯುಐಡಿಎಐ ವ್ಯಕ್ತಿಗೆ ಯಾವುದೇ ವಿಳಾಸದ ಪುರಾವೆ ಇಲ್ಲದಿದ್ದರೂ ಒಂದು ಪ್ರಮಾಣಿತ ಪ್ರಮಾಣ ಪತ್ರವನ್ನು ನೀಡುತ್ತದೆ ಇದನ್ನು ಇಟ್ಟುಕೊಂಡು ನೀವು ಯಾವುದೇ ದಾಖಲೆಗಳಿಲ್ಲದಿದ್ದರೂ ಆಧಾರ್ ಕಾರ್ಡನ್ನು ಪಡೆಯಬಹುದು.

ಯುಐಡಿಎಐ (UIDAI) ಸುತ್ತೋಲೆಯನ್ನು ಹೊರಡಿಸಿದ್ದು ಅದರ ಪ್ರಕಾರ, ಆಧಾರ್ ಕಾರ್ಡನ್ನು ಪಡೆಯಲು ಇಚ್ಚಿಸುವವರು ಶಾಸಕರು ಅಥವಾ ಎಂ ಎಲ್ ಎ, ಗೆಜಿಡೆಟ್ ಅಧಿಕಾರಿಗಳು ಅಥವಾ ತಹಶೀಲ್ದಾರರ ಪ್ರಮಾಣಿತ ಪ್ರಮಾಣ ಪತ್ರವನ್ನು ಪಡೆಯಬಹುದು. ಅಷ್ಟೇ ಅಲ್ಲ ಈ ಸ್ಟ್ಯಾಂಡರ್ಡ್ ಸರ್ಟಿಫಿಕೇಟ್ ಅನ್ನು ಶಿಕ್ಷಣ ಸಂಸ್ಥೆಯ ಮುಖ್ಯ ಅಧಿಕಾರಿಗಳು ಕೌನ್ಸಿಲರ್ ಅಥವಾ ಅನಾಥಾಶ್ರಮದ ಮುಖ್ಯ ಅಧಿಕಾರಿ ಹಾಗೂ ವಿಲೇಜ್ ಪಂಚಾಯತ್ ಅಧಿಕಾರಿಗಳಿಂದಲೂ ಪಡೆದುಕೊಳ್ಳಬಹುದು. ಇನ್ನು ಈ ಸ್ಟ್ಯಾಂಡರ್ಡ್ ಸರ್ಟಿಫಿಕೇಟ್ ಅನ್ನು ನೀವು ಆಧಾರ್ ಗಾಗಿ ಕೇವಲ ಅಡ್ದ್ರೆಸ್ ಪ್ರೂಫ್ ರೀತಿಯಲ್ಲಿ ಬಳಸಿಕೊಳ್ಳಬಹುದು. ಯಾರ ಬಳಿ ಯಾವುದೇ ದಾಖಲೆಗಳು ಅಥವಾ ವಿಳಾಸದ ಪುರಾವೆಗಳು ಇರುವುದಿಲ್ಲವೋ ಅಂತವರು ಸ್ಟ್ಯಾಂಡರ್ಡ್ ಸರ್ಟಿಫಿಕೇಟ್ ಬಳಸಿಕೊಂಡು ಆಧಾರ್ ಕಾರ್ಡ್ ಮಾಡಿಕೊಳ್ಳಬಹುದಾಗಿದೆ.

Aadhaar ಗಾಗಿ 3 ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು:

ಡಾಕುಮೆಂಟ್ (Document) ಆಧಾರಿತ ನಿಮ್ಮ ಬಗ್ಗೆ ಯಾರಿಗೆ ಪರಿಚಯ ಇದೆಯೋ ಅವರ ಆಧಾರದ ಮೇಲೆ, ಹಾಗೂ ಮನೆಯವರ ಗುರುತಿನ ಆಧಾರದ ಮೇಲೆ ಈ ಮೂರು ರೀತಿಯಲ್ಲಿ ನೀವು ಆಧಾರ್ ಪಡೆದುಕೊಳ್ಳಬಹುದು. ಆಧಾರ್ ಕಾರ್ಡ್ (Aadhaar Card) ಪಡೆಯಲು ಬಯಸುವ ವ್ಯಕ್ತಿಯ ಮಾನ್ಯವಾದ ಗುರುತಿನ ಅಥವಾ ವಿಳಾಸದ ಪುರಾವೆ ಇದ್ದರೆ ಹಾಗೂ ಜನ್ಮ ದಿನಾಂಕದ ಪುರಾವೆ ಇದ್ದರೆ ಡಾಕ್ಯುಮೆಂಟ್ ಆಧಾರಿತ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು. ವ್ಯಕ್ತಿ ಆಧಾರ್ ಕಾರ್ಡ್ (Aadhaar Card) ಮಾಡಿಸಲು ಅಗತ್ಯವಾದ ದಾಖಲೆಗಳನ್ನು ಹೊಂದಿಲ್ಲದೆ ಇದ್ದರೆ, ಕುಟುಂಬದ ಮುಖ್ಯಸ್ಥರ ಮೂಲಕ ಅಥವಾ ಪರಿಚಯದವರ ಮೂಲಕ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು.

Standard Certificate ಗಾಗಿ ಯಾವ Document ಬೇಕು:

ವಿಳಾಸದ ದಾಖಲೆಗಳು ಇಲ್ಲದೆ ಇದ್ದಾಗ ವಿಶೇಷ ಅಧಿಕಾರಿಗಳಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಲು ಅಡ್ರೆಸ್ (Address) ಅಥವಾ ಬರ್ತ್ ಡೇಟ್ ಸರ್ಟಿಫಿಕೇಟ್ (Birth Date Certificate) ನೀಡಬೇಕಾಗುತ್ತದೆ ಆದರೂ ಸ್ಟ್ಯಾಂಡರ್ಡ್ ಫಾರ್ಮೆಟ್ ತೆಗೆದುಕೊಳ್ಳಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು ಅಥವಾ ಫಾರ್ಮನಲ್ಲಿ ಏನನ್ನ ಫಿಲ್ ಮಾಡಬೇಕು ಎಂಬುದರ ಬಗ್ಗೆ ಹಲವರಿಗೆ ಗೊಂದಲ ಇದೆ. ಇದಕ್ಕೆ ಯುಐಡಿಎಐನಿಂದಲೆ ಉತ್ತರ ಸಿಗಬೇಕು.

Leave A Reply

Your email address will not be published.