ನೀವು ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿದ್ದರೆ, ಅಂಚೆ ಕಚೇರಿಯಲ್ಲಿ ಏಪ್ರಿಲ್ ಒಂದರಿಂದ ಬದಲಾಗುತ್ತಿರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ನೀವು ಪೋಸ್ಟ್ ಆಫೀಸ್ (Post Office) ನಲ್ಲಿ ಖಾತೆ ಹೊಂದಿದ್ದರೆ ನಿಮ್ಮ ಮೊಬೈಲ್ ಸಂಖ್ಯೆನ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇಂಡಿಯಾ ಪೋಸ್ಟ್ ಟ್ವೀಟ್ (India Post Tweet) ಮೂಲಕ ಹೊಸ ನಿಯಮಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದೆ. ಏಪ್ರಿಲ್ 1,2023 ರಿಂದ ಅಂಚೆ ಕಚೇರಿಯಲ್ಲಿ ಯಾವುದೇ ರೀತಿಯ ಹಣಕಾಸಿನ ವಹಿವಾಟನ್ನು ಮಾಡಲು ಮೊಬೈಲ್ ಸಂಖ್ಯೆಯನ್ನು ನಿಮ್ಮ ಖಾತೆಯೊಂದಿಗೆ ಮಾಡುವುದು ಕಡ್ಡಾಯವಾಗಿದೆ. ಅಂಚೆ ಕಚೇರಿಯಲ್ಲಿ ಇರುವ ಖಾತೆದಾರರ ಖಾತೆಯನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲು ಅಂಚೆ ಕಚೇರಿ ಮೊಬೈಲ್ ಸಂಖ್ಯೆ ನವೀಕರಣಕ್ಕೆ ಆದೇಶ ಹೊರಡಿಸಿದೆ.
Mobile No ನವೀಕರಿಸಿಕೊಳ್ಳುವುದು ಹೇಗೆ:
ಇದಕ್ಕಾಗಿ ನೀವು ಪೋಸ್ಟ್ ಆಫೀಸ್ (Post Office) ಕಚೇರಿಯ ಶಾಖೆಗೆ ಬೇಟಿ ನೀಡಬೇಕು. ಇಂಡಿಯಾ ಪೋಸ್ಟ್ ನ ವೆಬ್ಸೈಟ್ ನಿಂದ ಹತ್ತಿರದ ಅಂಚೆ ಕಚೇರಿಯ ಶಾಖೆಯನ್ನು ಆನ್‌ಲೈನ್ (Online) ಮೂಲಕ ಹುಡುಕಿ. https://www.indiapost.gov.in/vas/pages/LocatePostOffices.aspx ಇಲ್ಲಿ ನೀವು ರಾಜ್ಯ,ನಗರ, ಪಿನ್ ಕೋಡ್, ಕ್ಯಾಪ್ಚಾ ಕೋಡ್ ಮೊದಲಾದವುಗಳನ್ನು ನಮೂದಿಸುವುದರ ಮೂಲಕ ವಿಳಾಸ ಹುಡುಕಬಹುದು.
ಅಂಚೆ ಕಚೇರಿಯ 9 ಉಳಿತಾಯ ಯೋಜನೆಗಳು:
ಪೋಸ್ಟ್ ಆಫೀಸ್ ನಲ್ಲಿ (Post Office) ಒಟ್ಟು ಒಂಬತ್ತು ಉಳಿತಾಯ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯ ಮಾಡಲಾಗಿದೆ. ಇವುಗಳು ಸಣ್ಣ ಉಳಿತಾಯ ಯೋಜನೆಗಳಾಗಿದ್ದು
- ಪೋಸ್ಟ್ ಆಫೀಸ್ ಆರ್ ಡಿ
- ಪೋಸ್ಟ್ ಆಫೀಸ್ ಎಫ್ ಡಿ
- ರಾಷ್ಟ್ರೀಯ ಆದಾಯ ಮಾಸಿಕ ಆದಾಯ ಖಾತೆ
- ಹಿರಿಯ ನಾಗರಿಕರ ಉಳಿತಾಯ ಯೋಜನೆ
- ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ
- ಸಾರ್ವಜನಿಕ ಭವಿಷ್ಯ ನಿಧಿ
- ಕಿಸಾನ್ ವಿಕಾಸ್ ಪತ್ರ, ಪೋಸ್ಟ್ ಆಫೀಸ್ ಉಳಿತಾಯ ಖಾತೆ
- ಸುಕನ್ಯಾ ಸಮೃದ್ಧಿ ಖಾತೆ ಇವಿಷ್ಟು ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಉಳಿತಾಯ ಯೋಜನೆಗಳು.
ಅಜಯ್ ಕಚೇರಿಯ ಖಾತೆ ಎಷ್ಟು ಸುರಕ್ಷಿತ:
ಬ್ಯಾಂಕ್ ಗಳು ದಿವಾಳಿ ಆದರೆ ಅಥವಾ ಮುಳುಗಡೆಯಾದ ಸಂದರ್ಭದಲ್ಲಿ ಗ್ರಾಹಕನಿಗೆ 5 ಲಕ್ಷದವರೆಗೆ ರಕ್ಷಣೆ ನೀಡಲಾಗುತ್ತದೆ. ಆದರೆ ಬ್ಯಾಂಕಿನಲ್ಲಿ ಬೇರೆ ಬೇರೆ ಖಾತೆ ಹೊಂದಿದ್ದರು ಕೂಡ ಒಟ್ಟಾಗಿ ಸಿಗುವುದು ಕೇವಲ ಐದು ಲಕ್ಷ ರೂಪಾಯಿಗಳು ಮಾತ್ರ. ಆದರೆ ಅಂಚೆ ಕಚೇರಿಯಲ್ಲಿ ನೀವು ಖಾತೆ ಹೊಂದಿದ್ದರೆ ನಿಮ್ಮ ಸಂಪೂರ್ಣ ಠೇವಣಿಯ ಗ್ಯಾರಂಟಿ ನೀಡಲಾಗುತ್ತದೆ.