Karnataka Times
Trending Stories, Viral News, Gossips & Everything in Kannada

Congress Guarantees: ಈ ಯೋಜನೆಗೆ ಅರ್ಜಿ ಹಾಕಲು ಹೋಗಬೇಡಿ ಯಾವ ಹಣವು ಬರಲ್ಲ! ಬೆಳ್ಳಂಬೆಳಿಗ್ಗೆ ಮಹಿಳೆಯರಿಗೆ ಕಹಿಸುದ್ದಿ

advertisement

Congress Guarantees: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವ ಮುನ್ನ ತಾವು ಅಧಿಕಾರಕ್ಕೆ ಬಂದರೆ ಜನರಿಗಾಗಿ ಪಂಚ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದ್ದರು ಅದರಂತೆ ರಾಜ್ಯದಲ್ಲಿ ಬಹುಮತ ಸಾಬೀತು ಆಗುತ್ತಿದ್ದಂತೆ ಪಂಚ ಯೋಜನೆಯಲ್ಲಿ ಒಂದೊಂದೆ ಯೋಜನೆ ಅದ್ಧೂರಿಯಾಗಿ ಜಾರಿ ಆಗಿದೆ. ಹೀಗಾಗಿ ಜನರಿಗೂ ಕೂಡ ಸರಕಾರದ ಮೇಲೆ ವಿಶೇಷ ಒಲವು ಬಂದಿದ್ದು ಇದೇ ಪಂಚ ಗ್ಯಾರೆಂಟಿಯನ್ನು ಕೇಂದ್ರದಲ್ಲಿ ಕೂಡ ವಿಭಿನ್ನವಾಗಿ ಅನುಷ್ಠಾನ ತರಲು ಹೋದ ಪರಿಣಾಮ ಅಂಚೆ ಇಲಾಖೆಯ ಖಾತೆದಾರರ ಸಂಖ್ಯೆ ಹೆಚ್ಚಳ ಆಗಿದೆ ಎನ್ನಬಹುದು.

ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮನೆಯ ಹಿರಿಯ ಮಹಿಳೆಗೆ ಮಾಸಿಕ ಎರಡು ಸಾವಿರ ಮೊತ್ತ ನೀಡಲಾಗುತ್ತಿದೆ. ಈಗಾಗಲೇ ಅನೇಕ ಕಂತಿನ ಹಣ ಕೂಡ ಬಂದಿದೆ ಎನ್ನಬಹುದು ಇದೀಗ ಅದರಂತೆ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ನಾಯಕರದ ರಾಹುಲ್ ಗಾಂಧಿ ಅವರು ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟ ಬಹುಮತದಿಂದ ಅಧಿಕಾರ ಪಡೆದರೆ ಪಂಚ ಗ್ಯಾರೆಂಟಿ ನೀಡುವುದಾಗಿ ತಿಳಿಸಿದ್ದು ಅದರಲ್ಲಿ ಮಹಾಲಕ್ಷ್ಮೀ ಯೋಜನೆ ಕೂಡ ಒಂದು ಎನ್ನಬಹುದು.

Image Source: X.com

advertisement

ಸರತಿ ಸಾಲಿನಲ್ಲಿ ನಿಂತ ಮಹಿಳೆಯರು
ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟದ ಸರಕಾರ ಅಧಿಕಾರಕ್ಕೆ ಬಂದರೆ ಆಗ ಮಹಾಲಕ್ಷ್ಮೀ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡುವುದಾಗಿ ರಾಹುಲ್ ಗಾಂಧಿ ಅವರು ತಿಳಿಸಿದ್ದು ಅದನ್ನು ಪಡೆಯಲು ಅಂಚೆ ಇಲಾಖೆಯಲ್ಲಿ ಖಾತೆ ಹೊಂದಬೇಕಾಗುತ್ತದೆ ಎಂಬ ಸುದ್ದಿ ಹರಿದಾಡಿದೆ ಹಾಗಾಗಿ ಅಂಚೆ ಇಲಾಖೆಯಲ್ಲಿ IPPB ಖಾತೆ ತೆರೆಯಲು ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲು ಕೂಡ ಜನ ನಿಂತು ತಮ್ಮ ಖಾತೆ ತೆರೆದಿದ್ದಾರೆ.

ಅಂಚೆ ಇಲಾಖೆಯ ಜನಸಂದಣಿ ಕಡಿಮೆ ಮಾಡಲು ಸಾಧ್ಯವಾಗದೆ ಅನೇಕ ಕಡೆಯಲ್ಲಿ ಹೆಚ್ಚುವರಿ ಸಿಬಂದಿ ಪಡೆದು ಕಚೇರಿ ಹೊರಗೆ ಟೋಕನ್ ಪ್ರಕಾರವಾಗಿ ಖಾತೆ ಮಾಡಿಸಿದ್ದನ್ನು ಕೂಡ ಕಾಣಬಹುದು. ಆದರೆ ಸರಕಾರ ತಿಳಿಸಿದಂತೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿಲ್ಲ ಹಾಗಾಗಿ ಮಹಾಲಕ್ಷ್ಮೀ ಯೋಜನೆ ಕೂಡ ಈಗ ಬದಿಗೆ ಸರಿದಿದೆ ಎನ್ನಬಹುದು. ಹಾಗಿದ್ದರೂ ರಾಹುಲ್ ಗಾಂಧಿ ಸರಕಾರ ಖಂಡಿತ ಈ ಬಾರಿ ಅಧಿಕಾರ ಪಡೆಯುತ್ತೆ ನಮಗೆಲ್ಲ ಒಂದು ಲಕ್ಷ ಸಿಗುತ್ತೆ ಎಂದು ಮಹಿಳೆಯರು ಅಂಚೆ ಇಲಾಖೆಗೆ ಮುತ್ತಿಗೆ ಹಾಕಿ ಖಾತೆ ಓಪನ್ ಮಾಡಿಸಿದ್ದ ಸಲುವಾಗಿ ಬ್ಯಾಂಕ್ ಖಾತೆದಾರರ ಸಂಖ್ಯೆ ಹೆಚ್ಚಾಗಿದೆ ಎನ್ನಬಹುದು.

mahalakshmi yojana karenataka
Image Source: The Economic Times

ಬರೀ ಒಂದು ತಿಂಗಳ ಒಳಗೆ ಮಾಡಿದ್ದ ಪ್ರಚಾರದ ಸಲುವಾಗಿ ಅಂಚೆ ಇಲಾಖೆಯಲ್ಲಿ ಲಕ್ಷಾಂತರ ಜನರು ಕರ್ನಾಟಕದಲ್ಲಿ ಖಾತೆ ತೆರೆದಿದ್ದಾರೆ ಎನ್ನ ಬಹುದು. ಒಂದು ಅಂದಾಜಿನ ಪ್ರಕಾರ 15 ಲಕ್ಷಕ್ಕೂ ಅಧಿಕ ಮಹಿಳೆಯರು ಹೊಸದಾಗಿ ಖಾತೆ ತೆರೆದಿದ್ದಾರೆ ಎನ್ನಬಹುದು ಹಾಗಾಗಿ ಕಾಂಗ್ರೆಸ್ ಆಸ್ವಾಸನೇ ಇಡೇರದಿದ್ದರೂ ಅಂಚೆ ಇಲಾಖೆಯ ಗ್ರಾಹಕರ ಸಂಖ್ಯೆ ಹೆಚ್ಚಾಗಿದ್ದು ಖುಷಿಯ ವಿಚಾರ ಎನ್ನಬಹುದು.

advertisement

Leave A Reply

Your email address will not be published.