Karnataka Times
Trending Stories, Viral News, Gossips & Everything in Kannada

Marriage Assistance: ಗೃಹಲಕ್ಷ್ಮಿ ಗಿಂತ ಹೆಚ್ಚಿಗೆ ಹಣ ಸಿಗುವ ಕರ್ನಾಟಕದ ಈ ಯೋಜನೆಗೆ ಅರ್ಜಿಯೇ ಬರುತ್ತಿಲ್ಲ, ಮಹಿಳೆಯರೇ ಈಗಲೇ ಸಲ್ಲಿಸಿ

advertisement

ಹೆಣ್ಣು ಮಕ್ಕಳ ಮದುವೆಗೆ ಸರ್ಕಾರದಿಂದ 60,000 ಸಹಾಯಧನ ಸಿಗಲಿದೆ. ಹೌದು ಈ ಸೌಲಭ್ಯ ಬಡವರ್ಗದ ಜನತೆಗೆ ಹಲವಷ್ಟು ನೆರವಾಗುತ್ತಿದ್ದು ಇದ್ದು ಮದುವೆಯ ಹೊರೆ ನಿಭಾಯಿಸಲು ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಹಾಗಿದ್ದಲ್ಲಿ ಯಾರು ಈ ಸೌಲಭ್ಯ ಪಡೆದುಕೊಳ್ಳಬಹುದು, ಹೇಗೆ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಇಲ್ಲಿ ಇರಲಿದೆ.

ಇಂದು ಮದುವೆ ಎನ್ನುವುದು ಸುಲಭವಾಗಿ ಮಾಡುವಂತದ್ದು ಅಲ್ಲ.ಸಂಪ್ರದಾಯ ಬದ್ದ ವಾಗಿ ಮದುವೆ ಯಾಗ ಬೇಕಾದರೆ ಬಹಳಷ್ಟು ಖರ್ಚು ವೆಚ್ಚಗಳು ಕೂಡ ಇರಲಿದೆ.ಅದರಲ್ಲೂ ಬಡವರ್ಗದ ಜನತೆಗೆ ಇದು ಅಷ್ಟು ಸುಲಭ ವಲ್ಲ.ಇದಕ್ಕಾಗಿ ಕಾರ್ಮಿಕರ ಮಕ್ಕಳಿಗೆ ಈ ಸೌಲಭ್ಯ ಜಾರಿ ಮಾಡಿದೆ. ಇಂದು ಕೂಲಿ ಕಾರ್ಮಿಕರಿಗೆ,ಕಟ್ಟಡ ಕಾರ್ಮಿಕರಿಗೆ ನೆರವಾಗಲು ಸರಕಾರ ಹಲವು ಸೌಲಭ್ಯ ಘೋಷಣೆ ಮಾಡುತ್ತಿದೆ.

ಅದರಲ್ಲಿ ಕಾರ್ಮಿಕರಿಗೆ ಹಲವಾರು ಯೋಜನೆ ಪ್ರಯೋಜನವನ್ನು ನೀಡಲು ಲೇಬರ್ ಕಾರ್ಡ್ ಅನ್ನು ಜಾರಿಗೆ ತರಲಾಗಿದೆ.ಅದೇ ರೀತಿ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಂತಹ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಮದುವೆ, ಹೆರಿಗೆ, ವೈದ್ಯಕೀಯ ಸಹಾಯಧನ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಸ್ಪರ್ಧಾತ್ಮಕ ಪರೀಕ್ಷೆ ತರಭೇತಿ, ಬಸ್ ರಿಯಾಯತಿ ‌ಇತ್ಯಾದಿ ಸೌಲಭ್ಯ ಕೂಡ ಸಿಗಲಿದೆ.

advertisement

ಇದೀಗ ಮಗಳ ಮದುವೆಗಾಗಿ ಅರುವತ್ತು ಸಾವಿರ ರೂ ನೀಡಲಿದ್ದು ,ಕಾರ್ಮಿಕ ಕಾರ್ಡು ಹೊಂದಿರುವ ಕಾರ್ಮಿಕರ ಮಕ್ಕಳಿಗೆ ಮದುವೆ ಮಾಡಲು ಈ ಸೌಲಭ್ಯ ಸಿಗಲಿದೆ. ಹಾಗಾಗಿ ನೀವು ಕೂಡ ಕಾರ್ಮಿಕ ಕಾರ್ಡ್ ಗಳನ್ನು ಹೊಂದಿದ್ದೀರಿ ಎಂದರೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಆದರೆ ಇದಕ್ಕಾಗಿ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ನೋಂದಣಿ ಮಾಡಿರಬೇಕು. ಅರ್ಜಿಯಲ್ಲಿ ಉದ್ಯೋಗ ದೃಢೀಕರಣ ಪತ್ರ , ಸ್ವಯಂ ದೃಢೀಕರಣ ಪತ್ರ, ಭಾವಚಿತ್ರ, ವಯಸ್ಸಿನ ದಾಖಲೆ, ತನ್ನ ಹಾಗೂ ಅವಲಂಬಿತ ಕುಟುಂಬದವರ ಆಧಾರ್ ಕಾರ್ಡ್ ನೀಡಿರಬೇಕು.

ಈ ದಾಖಲೆ ಬೇಕು
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ
ಮದುವೆ ಪ್ರಮಾಣ ಪತ್ರದ ವಿವರ
ಕಾರ್ಮಿಕ ಕಾರ್ಡ್ ಇತ್ಯಾದಿ

Image Source: Public TV

ಈ ನಿಯಮ ಇದೆ
*ಈ ಸೌಲಭ್ಯ ಸಿಗಬೇಕಾದರೆ ನೋಂದಣಿ ದಿನಾಂಕದಿಂದ ಮದುವೆ ದಿನಾಂಕದವರೆಗೆ ಕಾರ್ಮಿಕ ಮಂಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವ ಕಡ್ಡಾಯ ಹೊಂದಿರಬೇಕು
*ಎರಡು ಬಾರಿ ಮಾತ್ರ ಈ ಸೌಲಭ್ಯ ಪಡೆಯಲು ಅವಕಾಶ ಇದೆ.
*ಮಗಳಿಗೆ ಮದುವೆಯ ವಯಸ್ಸು 18 ಆಗಿರಬೇಕು
ಕಾರ್ಮಿಕ ಕಾರ್ಡ್ ಕಡ್ಡಾಯ ಇರಬೇಕು‌

ಇದಕ್ಕಾಗಿ https://kbocwwb.karnataka.gov.in/marriage ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.

advertisement

Leave A Reply

Your email address will not be published.