Marriage: ಗುಟ್ಟಾಗಿ ಗಂಡ ಇನ್ನೊಂದು ಮದುವೆಯಾಗಿದ್ದಾರೆ ಹೆಂಡತಿ ಏನು ಮಾಡಬಹುದು? ದೇಶಾದ್ಯಂತ ಹೊಸ ರೂಲ್ಸ್

Advertisement
ಮದುವೆ (Marriage) ಎನ್ನುವುದು ಪ್ರತಿಯೊಬ್ಬರೂ ಕೂಡ ನೂರಾರು ಬಾರಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿರುವಂತಹ ಜೀವನದ ಪ್ರಮುಖ ಘಟ್ಟವಾಗಿದೆ. ಮದುವೆ ಮಾಡಿಕೊಳ್ಳುವುದು ಸುಲಭ ಹಾಗೂ ಸುಂದರವಾದ ವಿಚಾರ ಆದರೆ ಆದರೆ ಅದನ್ನು ಜೀವನ ಪರ್ಯಂತ ನಿಭಾಯಿಸುವುದು ಅದಕ್ಕಿಂತಲೂ ಪ್ರಮುಖವಾದ ಹಾಗೂ ನಿಭಾಯಿಸಲೇ ಬೇಕಾದಂತಹ ಜವಾಬ್ದಾರಿ ಆಗಿದೆ. ಆದರೆ ಮದುವೆಯಾದ ಮೇಲೆ ಕೂಡ ಕೆಲವೊಂದು ಸಮಸ್ಯೆಗಳನ್ನು ನೀವು ಎದುರಿಸಬಹುದು ಅದರ ಬಗ್ಗೆ ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ವಿವರಿಸಲು ಹೊರಟಿದ್ದೇವೆ.
ಇಲ್ಲಿ ಒಬ್ಬ ಲಾಯರ್ (Lawyer) ಗೆ ಒಬ್ಬ ವ್ಯಕ್ತಿ ಮದುವೆಯ ಒಂದು ಸಮಸ್ಯೆಯ ಕುರಿತಂತೆ ಹೇಳಿದ್ದಾರೆ. ಸರ್ಕಾರಿ ಕೆಲಸದಲ್ಲಿರುವಂತಹ ವ್ಯಕ್ತಿ ಡಿವೋರ್ಸ್ ನೀಡದೆ ಇನ್ನೊಬ್ಬರ ಜೊತೆಗೆ ಮಗುವನ್ನು ಪಡೆದರೆ ಆಗ ಮೊದಲನೇ ಹೆಂಡತಿಗೆ ಯಾವ ರೀತಿಯ ಕಾನೂನು ಅಧಿಕಾರಗಳಿರುತ್ತವೆ ಎಂಬುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಹಾಗಿದ್ರೆ ಬನ್ನಿ ಈ ಸಂದರ್ಭದಲ್ಲಿ ಆ ಮೊದಲನೇ ಹೆಂಡತಿಗೆ ಯಾವ ರೀತಿಯ ಕಾನೂನು ಕ್ರಮಗಳ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದನ್ನು ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಒಂದೇ ಲೈನ್ ನಲ್ಲಿ ಈ ಸಮಸ್ಯೆಯನ್ನು ನೋಡೋದಾದರೆ ಮೊದಲ ಹೆಂಡತಿಗೆ ವಿವಾಹ ವಿಚ್ಛೇದನವನ್ನು (Divorce) ನೀಡದೆ ಎರಡನೇ ಮಹಿಳೆ ಜೊತೆಗೆ ಅವರು ಸಂಸಾರ ಮಾಡುತ್ತಿದ್ದಾರೆ ಎಂದು ಹೇಳಬಹುದು. ಹಿಂದೂ ಕಾಯ್ದೆಯ ಪ್ರಕಾರ ಮೊದಲ ಹೆಂಡತಿ ಜೀವಂತ ಇರುವಾಗ ಇನ್ನೊಂದು ಮದುವೆಯಾದರೆ ಆ ಸಂದರ್ಭದಲ್ಲಿ ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಆದರೆ ಮದುವೆ ಆಗಿರುವಂತಹ ವ್ಯಕ್ತಿ ಮೊದಲನೇ ಹೆಂಡತಿ ಇರುವಾಗ ಇನ್ನೊಬ್ಬ ಮಹಿಳೆಯ ಜೊತೆಗೆ ದೈಹಿಕ ಸಂಬಂಧವನ್ನು ಹೊಂದುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ ಆಗಿರುವುದಿಲ್ಲ. ಇದನ್ನು ಪ್ರತಿಯೊಬ್ಬರೂ ಕೂಡ ಮೊದಲಿಗೆ ತಿಳಿದುಕೊಳ್ಳಬೇಕಾಗಿರುತ್ತದೆ.
ವಿವಾಹ (Marriage) ಆಗದೇ ಇರೋ ಮಹಿಳೆ ಆ ವ್ಯಕ್ತಿಯ ಜೊತೆಗೆ ದೈಹಿಕ ಸಂಪರ್ಕವನ್ನು ಹೊಂದಿದ್ದ ಮಾತ್ರಕ್ಕೆ ಆಕೆಗೆ ಹೆಂಡತಿಯ ಸ್ಥಾನ ಸಿಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ಹಾಗಿದ್ರೆ ಬನ್ನಿ ಈ ಸಂದರ್ಭದಲ್ಲಿ ಮೊದಲನೇ ಹೆಂಡತಿಗೆ ಇರುವಂತಹ ಕಾನೂನು ಅವಕಾಶಗಳು ಯಾವೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.
ಮೊದಲಿಗೆ ಮೊದಲ ಹೆಂಡತಿ ತನಗು ಮತ್ತು ಮಕ್ಕಳಿಗೆ ಗಂಡನ ಆಸ್ತಿಯಲ್ಲಿ ಜೀವನಾಂಶ (Alumni Amount) ಬೇಕು ಎಂಬುದಾಗಿ ದಾಖಲಿಸಬಹುದಾಗಿದೆ. ಮೊದಲ ಹೆಂಡತಿ ಆಗಿರುವ ಕಾರಣದಿಂದಾಗಿ ಆಸ್ತಿಯಲ್ಲಿ (Property) ವಿವಾಹ ವಿಚ್ಛೇದ ನಂತರವೂ ಕೂಡ ಗಂಡನ ಮೂಲಕ ಪಾಲನ್ನು ಪಡೆದುಕೊಳ್ಳುವಂತಹ ಸ್ವಾತಂತ್ರ್ಯವನ್ನು ಆಕೆ ಹೊಂದಿರುತ್ತಾಳೆ. ಡಿವೋರ್ಸ್ ಪಡೆದುಕೊಳ್ಳುವ ಆಸಕ್ತಿ ಇಲ್ಲದೆ ಹೋದಲ್ಲಿ ಮತ್ತೆ ದಾಂಪತ್ಯ ಪುನರ್ ಸ್ಥಾಪನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಂದು ವೇಳೆ ನಿಮಗೆ ಗಂಡ ಕಿರುಕುಳವನ್ನು ನೀಡುತ್ತಿದ್ದರೆ ಆತನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಮಾಡುವಂತಹ ಸಂಪೂರ್ಣ ಸ್ವಾತಂತ್ರ್ಯವನ್ನು ನೀವು ಹೊಂದಿರುತ್ತೀರಿ. ಬೇರೆಯವರ ಜೊತೆಗೆ ಸಂಬಂಧವನ್ನು ಹೊಂದಿದ್ದು ಪತ್ನಿಗೆ ಗಂಡ ಕಿರುಕುಳ ನೀಡುತ್ತದೆ ಎಂದಾದರೆ ಆತನ ವಿರುದ್ಧ ಪೋಲಿಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು ಹಾಗೂ ಆತ ಮನೆಯಿಂದ ಹೊರ ಹಾಕದಂತೆ ತಡೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇವಿಷ್ಟು ಕಾನೂನು ಲಾಭಗಳನ್ನು ಆ ಮೊದಲನೇ ಹೆಂಡತಿ ಅಥವಾ ಹೆಂಡತಿ ಪಡೆದುಕೊಳ್ಳಬಹುದಾದ ಅವಕಾಶವನ್ನು ಕಾನೂನು ಚೌಕಟ್ಟಿನಲ್ಲಿ ಹೊಂದಿದ್ದಾರೆ.