Karnataka Times
Trending Stories, Viral News, Gossips & Everything in Kannada

Gruha Lakshmi Money: ಇನ್ಮೇಲೆ ಪ್ರತಿ ತಿಂಗಳು ಯಾವ ಡೇಟ್ ಗೆ ಬರಲಿದೆ ಗೊತ್ತಾ ಗ್ರಹಲಕ್ಹ್ಮೀ ಹಣ! ಗುಡ್ ನ್ಯೂಸ್

advertisement

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಪ್ರಾರಂಭ ಆಗಿರುವಂತಹ ಮಹಿಳೆಯರಿಗೆ ಪ್ರತಿ ತಿಂಗಳ ಮಾಸಾಶನವನ್ನು ನೀಡುವಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಸದ್ಯಕ್ಕೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಗೃಹಲಕ್ಷ್ಮಿ ಯೋಜನೆ ಸಾಕಷ್ಟು ರೀತಿಯಲ್ಲಿ ಮನೆಯ ಮಹಿಳೆಯರಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಕೆಲಸವನ್ನು ಮಾಡ್ತಾ ಇದೆ ಎಂದು ಹೇಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಹಣ (Gruha Lakshmi Money) ವನ್ನು ಪಡೆದುಕೊಳ್ಳುತ್ತಿರುವಂತಹ ರಾಜ್ಯದ ಲಕ್ಷಾಂತರ ಮಹಿಳೆಯರು ಆ ಹಣವನ್ನು ತಮ್ಮ ಕುಟುಂಬದ ಖರ್ಚಿಗಾಗಿ ಬಳಸಿಕೊಳ್ಳುವುದರ ಮೂಲಕ ಚಿಕ್ಕಮಟ್ಟಿಗಾದರೂ ಕುಟುಂಬದ ಆರ್ಥಿಕ ವಿಚಾರಕ್ಕೆ ಸಹಾಯ ಮಾಡ್ತಾ ಇದ್ದಾರೆ ಹಾಗೂ ಉಳಿತಾಯದ ದೃಷ್ಟಿಯಲ್ಲಿ ಕೂಡ ಆ ಹಣವನ್ನು ಉಳಿತಾಯ ಮಾಡುವಂತಹ ಕೆಲಸವನ್ನು ಕೂಡ ಕೆಲವು ಕಡೆಗಳಲ್ಲಿ ಮಹಿಳೆಯರು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ಸಾಕಷ್ಟು ಜನ ಮಹಿಳೆಯರಿಗೆ ತಿಂಗಳಿನ ಯಾವ ದಿನಾಂಕದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು (Gruha Lakshmi Money) ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸಾಕಷ್ಟು ಗೊಂದಲ ಇದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಯಾವಾಗ ಗೃಹಲಕ್ಷ್ಮಿ ಯೋಜನೆಯ ಹಣ ಸಿಗುತ್ತೆ ಅನ್ನೋದ್ರ ಬಗ್ಗೆ ಹೇಳ್ತೀವಿ ಬನ್ನಿ.

ಈ ದಿನಾಂಕದೊಳಗೆ ಸಿಗುತ್ತೇನೆ ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ:

 

advertisement

Image Source: Swarajya

 

ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆಯ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳಕರ್ (Lakshmi Hebbalkar) ಅವರು ಹೇಳಿರುವಂತಹ ಮಾಹಿತಿಯ ಪ್ರಕಾರ ಇನ್ಮುಂದೆ ತಿಂಗಳ 21ರಿಂದ 26 ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಪ್ರತಿಯೊಬ್ಬರ ಖಾತೆಗೆ ವರ್ಗಾವಣೆ ಆಗುವಂತಹ ಕೆಲಸವನ್ನು ಮಾಡಲಾಗುತ್ತದೆ ಎಂಬುದಾಗಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೆಲವೊಮ್ಮೆ ಸರ್ವರ್ ಗಳು ಸಮಸ್ಯೆಯಾದಾಗ ಹಣ ವರ್ಗಾವಣೆ ಆಗುವುದು ಕೆಲವೊಮ್ಮೆ ಹೆಚ್ಚು ಕಮ್ಮಿ ಆಗಬಹುದಾಗಿದೆ ಎನ್ನುವಂತಹ ಸಾಧ್ಯತೆಗಳನ್ನು ಕೂಡ ನಾವು ಇಲ್ಲಿ ಗಮನಿಸಬೇಕಾಗುತ್ತದೆ.

ಎಲ್ಲಕ್ಕಿಂತ ಪ್ರಮುಖವಾಗಿ ನೀವು ನಿಮ್ಮ ಹಣವನ್ನು ಸರಿಯಾದ ಸಮಯಕ್ಕೆ ನಿಮ್ಮ ಖಾತೆಗೆ ಪಡೆದುಕೊಳ್ಳಬೇಕು ಎನ್ನುವಂತಹ ಇಚ್ಛೆಯನ್ನು ಹೊಂದಿದ್ದರೆ ಈಗಾಗಲೇ ಇಲಾಖೆ ತಿಳಿಸಿರುವ ರೀತಿಯಲ್ಲಿ KYC ಅಪ್ಡೇಟ್ ಅನ್ನು ಸರಿಯಾದ ರೀತಿಯಲ್ಲಿ ಮಾಡಿಸಿರಬೇಕು ಇಲ್ಲವಾದಲ್ಲಿ ಹಣವನ್ನು ಸರಿಯಾದ ಸಮಯಕ್ಕೆ ಪಡೆದುಕೊಳ್ಳಲು ಸಾಧ್ಯವಿರುವುದಿಲ್ಲ.

 

Image Source: Deccan Herald

 

ಹೀಗಾಗಿ ನಿಮ್ಮ ರೇಷನ್ ಕಾರ್ಡ್ (Ration Card) ಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಆಗಿರುವುದು ಹಾಗೂ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಈ ರೀತಿಯ ಪ್ರಕ್ರಿಯೆಗಳನ್ನು ನೀವು ತಪ್ಪದೆ ಸರಿಯಾದ ಸಮಯಕ್ಕೆ ಸರಿಯಾಗಿ ಮಾಡಬೇಕಾಗಿರುತ್ತದೆ ಅನ್ನೋದನ್ನ ಮರೆಯಬೇಡಿ. ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ನೀವು ಸರಿಯಾದ ರೀತಿಯಲ್ಲಿ ಮಾಡಿ ಮುಗಿಸಿದರೆ ಖಂಡಿತವಾಗಿ ನೀವು ಈ ನಿಗದಿತ ದಿನಾಂಕದ ಒಳಗಾಗಿ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಹಣವನ್ನು ಸರಿಯಾದ ಸಮಯಕ್ಕೆ ಪಡೆದುಕೊಳ್ಳುತ್ತೀರಿ.

advertisement

Leave A Reply

Your email address will not be published.