Driving Licence: ಡ್ರೈವಿಂಗ್ ಲೈಸನ್ಸ್ ಬಗ್ಗೆ ಬಂತು ಹೊಸ ತೀರ್ಪು! ಎಲ್ಲಾ ದ್ವಿಚಕ್ರ ಹಾಗೂ ಕಾರ್ ಇದ್ದವರಿಗೆ ಸೂಚನೆ
ಯಾವುದೇ ವಾಹನ ಓಡಿಸುವಾಗ ಅದಕ್ಕೆ ಚಾಲನಾ ಪರವಾನಿಗೆ ಇರುವುದು ಕಡ್ಡಾಯ. ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಅಪಘಾತವಾಗಿ ಚಾಲನಾ ಪರವಾನಗಿ (Driving Licence) ಇಲ್ಲದೇ ಇರುವುದು ಗಮನಕ್ಕೆ ಬಂದರೆ ಅಪಘಾತ ಪರಿಹಾರ ಸಿಗುವುದು ಹಾಗಿರಲಿ, ಹೆಚ್ಚುವರ್ ದಂಡವನ್ನು ಕೂಡ ಪಾವತಿಸಬೇಕಾಗಬಹುದು. ಆದರೆ ಕೆಲವು ಸಂದರ್ಭದಲ್ಲಿ ಇದು ಪ್ಲಸ್ ಕೂಡ ಆಗಬಹುದು ಹೇಗೆ ಗೊತ್ತ್?
ಅಪಘಾತದ ಪ್ರಕರಣ ಒಂದರಲ್ಲಿ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ವಾಹನ ಚಲಾಯಿಸುವಾಗ ಅಪಘಾತ ಸಂಭವಿಸಿದರೆ ಆ ಸಂದರ್ಭದಲ್ಲಿ ವಾಹನ ಚಾಲಕ ಲಘು ಮೋಟಾರ್ ವಾಹನ (LMV) ಬರವಣಿಗೆ ಹೊಂದಿದ್ದರೆ ಪ್ರತ್ಯೇಕ ದ್ವಿಚಕ್ರ ವಾಹನಕ್ಕೂ ಪರವಾನಿಗೆ ಪಡೆದುಕೊಳ್ಳುವ ಅಗತ್ಯ ಇಲ್ಲ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪನ್ನು ನೀಡಿದೆ. ದ್ವಿಚಕ್ರ ವಾಹನಕ್ಕೂ ಎಲ್ ಎಮ್ ವಿ (LMV) ವಾಹನದ ಪರವಾನಿಗೆ ಒಂದೇ ರೀತಿಯ ಪರವಾನಿಗೆ ಸ್ವೀಕರಿಸಲಾಗುವುದು. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ವ್ಯಕ್ತಿಗೆ ಅಪಘಾತವಾಗಿತ್ತು ಆ ಸಮಯದಲ್ಲಿ ಅವರ ಬಳಿ ಇದ್ದದ್ದು ಎಲ್ಎಂವಿ ಮಟ್ಟದ ಪರವಾನಿಗೆ ಮಾತ್ರ.
ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ನ್ಯಾಯಾಲಯ ತನಿಖೆಯನ್ನು ನಡೆಸಿತ್ತು. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ತಪ್ಪು ಇರಲಿಲ್ಲ ಆದರೆ ದ್ವಿಚಕ್ರ ವಾಹನ ಅಪಘಾತಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದ ವ್ಯಕ್ತಿಯ ಬಳಿ ಲಘು ಮೋಟಾರ್ ವಾಹನ ಅಂದರೆ ಎಲ್ಎಂವಿ ಪರವಾನಿಗೆ ಮಾತ್ರ ಇತ್ತು. ದ್ವಿಚಕ್ರ ವಾಹನ ಓಡಿಸುತ್ತಿದ್ದು ದ್ವಿಚಕ್ರ ವಾಹನದ ಲೈಸೆನ್ಸ್ (ಪರಮಾನಿಕೆ) ಇಲ್ಲದೆ ಇರುವ ಕಾರಣ ಅವರಿಗೆ ಪರಿಹಾರ ಸಿಗುತ್ತದೆಯೋ ಇಲ್ಲವೋ ಎನ್ನುವ ಆತಂಕ ಕುಟುಂಬದವರಲ್ಲಿ ಮೂಡಿತ್ತು. ಈ ಸಂಬಂಧ ಕೇಸ್ ನ್ಯಾಯಾಲಯದ ಮೆಟ್ಟಿಲೇರಿತು.
ಈ ಪ್ರಕರಣವನ್ನು ನ್ಯಾಯಾಧೀಶ ಅವಿನಾಶ ಶರ್ಮ ಅವರ ಮುಂದೆ ವಿಚಾರಣೆ ನಡೆಸಿ ವಾದ ವಿವಾದಗಳನ್ನು ಕೇಳಿದ ನಂತರ ನ್ಯಾಯಾಧೀಶ ಅವಿನಾಶ್ ಅವರು ಕೋರ್ಟ್ ಆದೇಶವನ್ನು ಹೊರಡಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ 23 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಅಪಘಾತ ಮಾಡಿದವರು ನೀಡಬೇಕು ಎಂದು ತೀರ್ಪನ್ನು ನೀಡಿದ್ದಾರೆ.
ಕಂಪನಿಯ ಪರವಾಗಿ ವಾದಿಸಿದ್ದ ವಕೀಲ ಮೇಹ್ರ ಮೋಟಾರ್ ವಾಹನ ಕಾಯ್ದೆಯ ಅಡಿಯಲ್ಲಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ಪರಮಾನಿಕೆ ಯನ್ನು ನೀಡಲಾಗಿದೆ ಹಾಗೂ ಲಘು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕವಾದ ಪರವಾನಿಗೆ ಇದೆ. ಈ ಎಲ್ಲಾ ವಾದಗಳನ್ನು ಆಲಿಸಿದ ಕೋರ್ಟ್ ಎಲ್ಎಂವಿ ಪರವಾನಿಗೆ ಇದ್ದವರು ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪರವಾನಿಗೆ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತೀರ್ಪನ್ನು ನೀಡಿದೆ. ಹಾಗಾಗಿ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಕುಟುಂಬದವರಿಗೆ ಪರಿಹಾರವನ್ನು ಕೂಡ ಒದಗಿಸಲಾಗಿದೆ.