Karnataka Times
Trending Stories, Viral News, Gossips & Everything in Kannada

Property: ತಂದೆ ಮಕ್ಕಳ ಸಮಾನ ಆಸ್ತಿ ಹಂಚಿಕೆ ಕುರಿತು ಕೋರ್ಟ್ ಹೊಸ ತೀರ್ಪು!

ಆಸ್ತಿಯಲ್ಲಿ ಸಮಾನವಾಗಿ ಹಂಚಿಕೆ ಆಗದೆ ಇದ್ದಾಗ ನೀವು ಏನು ಮಾಡಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಿ ಇಲ್ಲವಾದರೆ ನಿಮ್ಮ ಪಾಲಿನ ಅಥವಾ ನಿಮ್ಮ ಹಕ್ಕಿನ ಆಸ್ತಿ (Property) ನಿಮಗೆ ಸಿಗದೇ ಹೋಗಬಹುದು. ಬಹಳ ಹಿಂದಿನ ಕಾಲದಿಂದಲೂ ನೋಡುತ್ತಾ ಬಂದರೆ ಕೆಲವು ತಂದೆ ತಾಯಂದಿರು ತಮ್ಮ ಮಕ್ಕಳಲ್ಲಿ, ಆಸ್ತಿ ಹಂಚಿಕೆಯಲ್ಲಿ ಪ್ರಮಾದವನ್ನು ಮಾಡುತ್ತಾರೆ. ಕೆಲವರಿಗೆ ಹೆಚ್ಚು ಆಸ್ತಿ (Property) ಕೆಲವರಿಗೆ ಕಡಿಮೆ ಆಸ್ತಿ ಯನ್ನು ನೀಡಿ ಉಯಿಲು ಬರೆಯುತ್ತಾರೆ. ಅದೇ ರೀತಿ ತಂದೆ ತಾಯಿ ಯಾರಿಗೆ ಎಷ್ಟು ಆಸ್ತಿ ಬರೆದಿದ್ದಾರೋ ಅಷ್ಟು ಆಸ್ತಿ ಮಕ್ಕಳಿಗೆ ಸಿಗುತ್ತದೆ. ಆದರೆ ನೀವು ನಿಮ್ಮ ಪಾಲಿಗೆ ಬರಬೇಕಾದ ಸಂಪೂರ್ಣ ಆಸ್ತಿಯ ಹಕ್ಕು ಪಡೆಯಲು ಬಯಸಿದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿಸಬಹುದು.

Advertisement

ಸಾಮಾನ್ಯವಾಗಿ ತನ್ನ ಆಸ್ತಿಯಾರಿಗೆ ಸೇರಬೇಕು ಎಂದು ತಂದೆ ಉಯಿಲು ಬರೆದಿಡುತ್ತಾರೆ. ಈ ರೀತಿ ಉಯಿಲು ಬರೆಯದೆ ಮರಣ ಹೊಂದಿದರೆ ಆಸ್ತಿ (Property) ಉತ್ತರಾಧಿಕಾರಿ ಕಾನೂನಿನ ಪ್ರಕಾರ ಹಂಚಿಕೆಯಾಗುತ್ತದೆ. ಹಾಗಾಗಿ ಯಾವುದೇ ವಿವಾದಗಳು ನಡೆಯದೇ ಇರಲು ಉಯಿಲು ನೋಂದಾಯಿಸಿಕೊಳ್ಳುವುದು ಬಹಳ ಅವಶ್ಯಕವಾಗಿರುತ್ತದೆ. ಒಂದು ವೇಳೆ ಒಮ್ಮೆ ರಿಜಿಸ್ಟರ್ ಆಗಿರುವ ವೀಲನ್ನು ಕೂಡ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೇ ಎನ್ನುವ ಅನುಮಾನ ಹಲವರಲ್ಲಿ ಇರಬಹುದು ಇದಕ್ಕೆ ವಕೀಲರೊಬ್ಬರು ಉತ್ತರ ನೀಡಿದ್ದಾರೆ ನೋಡಿ.

Advertisement

ಆಸ್ತಿಯನ್ನು ವಿಂಗಡಿಸುವುದು ಹೇಗೆ?

Advertisement

ಯಾವುದೇ ವ್ಯಕ್ತಿ ಪೂರ್ವಜರ ಆಸ್ತಿ (Property) ಯನ್ನು ಹೊಂದಿದ್ದರೆ ಅದನ್ನು ತನ್ನ ಎಲ್ಲಾ ಮಕ್ಕಳು ಹಾಗೂ ಹೆಂಡತಿಗೆ ಸಮಾನವಾಗಿ ಪಾಲು ಮಾಡಬೇಕು. ಉದಾಹರಣೆಗೆ ಒಂದು ವ್ಯಕ್ತಿಗೆ ಮೂರು ಮಕ್ಕಳಿದ್ದರೆ ಆ ಮಕ್ಕಳ ಮದುವೆಯ ನಂತರ ಅವರಿಗೆ ಮಕ್ಕಳಿದ್ದರೆ, ತನ್ನ ಮಕ್ಕಳ ಹೆಸರಿಗೆ ಪೂರ್ವಜರ ಆಸ್ತಿಯನ್ನು ಹಂಚಿಕೆ ಮಾಡಬೇಕು.

Advertisement

ಆ ಮೂರು ಮಕ್ಕಳು ತಮ್ಮ ಆಸ್ತಿಯನ್ನು ತಮ್ಮ ಮುಂದಿನ ಮಕ್ಕಳಿಗೆ ಹಂಚಿಕೆ ಮಾಡಬೇಕು. ಅಂದರೆ ಇದು ತಂದೆಯಿಂದ ಮಗನಿಗೆ ಮಗನಿಂದ ಮಗನಿಗೆ ವರ್ಗಾವಣೆ ಆಗುವ ಆಸ್ತಿ (Property) ಆಗಿರುತ್ತದೆ. ಪೂರ್ವಜರ ಆಸ್ತಿ ಹಂಚಿಕೆಯಲ್ಲಿ ಯಾವುದೇ ವಿವಾದಗಳು ಆಗದಂತೆ ಮೊದಲೇ ಉಯಿಲು ಬರೆದಿಡುವುದು ಒಳ್ಳೆಯದು. ಇನ್ನೂ ಒಂದು ವೇಳೆ ತಂದೆ ಸ್ವಂತವಾಗಿ ದುಡಿದು ಗಳಿಸಿದ ಆಸ್ತಿಯಾದರೆ ಅದನ್ನು ತನಗೆ ಇಷ್ಟ ಬಂದವರಿಗೆ ಬರೆಯಬಹುದು ಆ ಉಯ್ಲಿನ ಮೇಲೆ ಪ್ರಶ್ನೆ ಮಾಡುವಂತಿಲ್ಲ

ಯಾವಾಗ ಪ್ರಶ್ನೆ ಮಾಡಬಹುದು:

ಪೂರ್ವಜರ ಆಸ್ತಿ ಹಂಚಿಕೆಯಾದಲ್ಲಿ ವಿಲ್ ನ ನೋಂದಾವಣೆ ಪ್ರಕಾರ ನಿಮಗೆ ಬರಬೇಕಿದ್ದ ಪಾಲು ಸರಿಯಾಗಿ ಹಂಚಿಕೆ ಆಗದೆ ಇದ್ದಲ್ಲಿ ಭಾರತೀಯ ಉತ್ತರಾಧಿಕಾರದ ಕಾಯ್ದೆ 1925 ನಿಬಂಧನೆಗಳ ಪ್ರಕಾರ ಪ್ರಶ್ನೆ ಮಾಡಬಹುದಾಗಿದೆ. ಹೆಣ್ಣು ಮಗಳು ಹೆತ್ತವರಿಂದ ಆಸ್ತಿ (Property) ಪಡೆದಿದ್ದಾಳೆ ಎಂದು ಭಾವಿಸಿ. ಆಕೆಗೆ ನಾಲ್ಕು ಪತ್ರರಿದ್ದು ಒಬ್ಬನ ಪರವಾಗಿ ಮಾತ್ರ ಆ ಮಹಿಳೆ ವಿಲ್ ಮಾಡಿಟ್ಟು ಮರಣ ಹೊಂದಿದ್ದಾಳೆ ಎಂದು ಭಾವಿಸಿ.

ಆಗ ಮಹಿಳೆಯ ಮರಣದ ನಂತರ ಉಳಿದ ಮೂರು ಸಹೋದರರು ಆಸ್ತಿಯ ವಿಷಯ ತಿಳಿದು ನ್ಯಾಯಾಲಯದಲ್ಲಿ ತಾಯಿ ಮಾಡಿಟ್ಟ ಆಸ್ತಿಯ ಉಯಿಲನ್ನು ಪ್ರಶ್ನೆ ಮಾಡಬಹುದೇ? ಕಾನೂನಿನ ಪ್ರಕಾರ ಖಂಡಿತವಾಗಿಯೂ ವಿಲ್ ನ ಸಿಂಧುತ್ವ ಹಾಗೂ ವಾಸ್ತವತೆಯನ್ನು ಪ್ರಶ್ನೆ ಮಾಡಬಹುದಾಗಿದೆ. ಇಲ್ಲಿ ಆ ಮೂವರು ಸಹೋದರರ ಮತ್ತೊಬ್ಬ ಸಹೋದರ ವಿಲ್ ನ್ನು ವರ್ಗಾಯಿಸಲು ಪ್ರಯತ್ನಿಸಿದಾಗ ತಮ್ಮ ವಾದವನ್ನು ಮಂಡಿಸಬಹುದು. ತಾಯಿಯ ಇಚ್ಛೆಯನ್ನು ಪ್ರಶ್ನೆ ಮಾಡಬಹುದು. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ತಮ್ಮ ಹಕ್ಕಿನ ಬಗ್ಗೆ ಪ್ರಶ್ನೆ ಮಾಡಬಹುದು.

ಇನ್ನು ತಾಯಿ ಮರಣ ಹೊಂದಿದ ನಂತರ ಆಕೆ ಬರೆದಿಟ್ಟ ವಿಲ್ ನಕಲಿ ಸಹಿ ಹೊಂದಿದ್ದರೆ ಆಗಲು ಕೂಡ ನೀವು ನ್ಯಾಯಾಲಯದಲ್ಲಿ ಆ ವಿಲ್ ಬಗ್ಗೆ ಪ್ರಶ್ನೆ ಮಾಡಬಹುದು. ಇದಕ್ಕಾಗಿ ಅನುಭವಿ ವಕೀಲರ ಸಹಾಯ ಪಡೆದುಕೊಳ್ಳುವುದು ಒಳ್ಳೆಯದು. ನೊಂದಾಯಿಸಿದ ಉಯಿಲು ಸತ್ತವರ ಕೊನೆಯ ಉಯಿಲ್ ಆಗಿರಬೇಕು ಎನ್ನುವ ಅಗತ್ಯವಿಲ್ಲ.

ಉಯಿಲನ್ನು ಒಬ್ಬ ವ್ಯಕ್ತಿ ವಂಚಿಸಿ ಪಡೆದುಕೊಂಡಿದ್ದರೆ ನ್ಯಾಯಾಲಯದ ಪ್ರಶ್ನಿಸುತ್ತದೆ ನಂತರ ಮುಕ್ತ ಒಪ್ಪಿಗೆಯೊಂದಿಗೆ ಹಂಚಿಕೆ ಮಾಡಲಾಗುತ್ತದೆ. ಅಥವಾ ಆ ಉಯಿಲನ್ನು ನ್ಯಾಯಾಲಯ ರದ್ದುಗೊಳಿಸಬಹುದು. ಯಾರದಾದರೂ ಬೆದರಿಕೆಯಿಂದ ವೀಲ್ ಮಾಡಿಸಿದ್ದರೆ ಆ ವಿಲ್ ಕೂಡ ಅಮಾನ್ಯವಾಗುತ್ತದೆ. ನಮ್ಮ ದೇಶದ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಉಯಿಲು ಮಾಡಬಹುದು. ಒಟ್ಟಿನಲ್ಲಿ ನಿಮ್ಮ ಪಾಲು ನಿಮಗೆ ಬಾರದೇ ಇದ್ದಲ್ಲಿ ಅದು ಮಾನ್ಯವಾಗಿದ್ದರೆ ವಿಲ್ ಮಾಡಿಟ್ಟ ನಂತರವೂ ಕೂಡ ನೀವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿ ನಿಮ್ಮ ಹಕ್ಕನ್ನು ಪಡೆದುಕೊಳ್ಳಬಹುದು.

Leave A Reply

Your email address will not be published.