Karnataka Times
Trending Stories, Viral News, Gossips & Everything in Kannada

Gold: ಚಿನ್ನದ ಖರೀದಿ ಹಾಗೂ ಮಾರಾಟದ ಮೆಲೆ ಹೊಸ ನಿಯಮ ತಂದ ಸರ್ಕಾರ; ಧಿಡೀರ್ ಬದಲಾವಣೆ!

Advertisement

ಚಿನ್ನ ಕೇವಲ ಆಭರಣ ಮಾತ್ರವಲ್ಲ, ಅದು ಆಪತ್ಭಾಂಧವ ಇದ್ದ ಹಾಗೆ. ಹೂಡಿಕೆಗೂ ನಾವು ಚಿನ್ನವನ್ನು ಬಳಸುತ್ತೇವೆ. ಕಷ್ಟಕಾಲದಲ್ಲಿ ಹಣದ ಅಗತ್ಯ ಬಿದ್ದಾಗಲೂ ಚಿನ್ನವನ್ನು ಬಳಸುತ್ತೇವೆ. ಹಿಂದೂ ಧರ್ಮದಲ್ಲಿಯಂತೂ ಚಿನ್ನ (Gold) ಖರೀದಿಯನ್ನು ಮಂಗಳಕರ ಎಂದೇ ಭಾವಿಸಲಾಗುತ್ತೆ. ನೀವು ನಿಮ್ಮ ವಾರ್ಡ್ರೋಬ್ ನಲ್ಲಿ ಚಿನ್ನವನ್ನು ಇಟ್ಟುಕೊಂಡಿದ್ದರೆ ಅದಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಕೂಡ ಆಗಿದೆ ಈ ಹೊಸ ನಿಯಮಗಳು ಏಪ್ರಿಲ್ ಒಂದು 2023 ರಿಂದಲೇ ಜಾರಿಗೆ ಬಂದಿದೆ. ಹಾಗಾದ್ರೆ ಚಿನ್ನ ಖರೀದಿಯ ಬದಲಾದ ನಿಯಮಗಳು ಯಾವವು ನೋಡೋಣ.

ಮೊದಲನೇದಾಗಿ ಚಿನ್ನದ ಶುದ್ಧತೆಗೆ ಸಂಬಂಧಪಟ್ಟ ಹಾಗೆ ಸರ್ಕಾರ ಹಾಲ್ ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ. ನಾಲ್ಕು ಅಂಕಿಯ ಹಾಲ್ ಮಾರ್ಕ್ ಇರುವ ಚಿನ್ನವನ್ನು ಮಾತ್ರ ಶುದ್ಧ ಚಿನ್ನ (Gold) ಎಂದು ಹೇಳಲಾಗುತ್ತೆ. ಈ ಹಿಂದೆ ಇದ್ದ ನಾಲ್ಕು ಆರು ಅಂಕೆಯ ಹೆಚ್ ಯು ಐಡಿ ಸಂಖ್ಯೆ ಬದಲಾಗುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಆರು ಅಂಕೆಯ ಪದಗಳು ಕಡ್ಡಾಯವಾಗಲಿದೆ. ಈ ಸಂಖ್ಯೆ ಇಲ್ಲದೆ ಯಾವುದೇ ಆಭರಣ ತಯಾರಕರು ಚಿನ್ನದ ಆಭರಣ ಅಥವಾ ನಾಣ್ಯವನ್ನು ಮಾರಾಟ ಮಾಡುವಂತಿಲ್ಲ.

ಬಿ ಐ ಎಸ್ ಹಾಗೂ ಹಾಲ್ ಮಾರ್ಕ್ ಕಡ್ಡಾಯ:

ಹಳೆಯ ನಾಲ್ಕು ಅಂಕೆಯ BIS ಹಾಲ್ಮಾರ್ಕ್ ಸಂಖ್ಯೆಯನ್ನು ಆರು ಅಂಕೆಯ ಹೆಚ್ಚು ಐಡಿ ಆಗಿ ಬದಲಾಯಿಸಲಾಗಿದೆ. ಈ ಅಂಕೆ ಇಲ್ಲದೆ ಯಾವುದೇ ಆಭರಣ ವ್ಯಾಪಾರಿ ಆಭರಣವನ್ನು ಮಾರಾಟ ಮಾಡಿದ್ರೆ ಅವರ ವಿರುದ್ಧ ಕಠಿಣ ಶಿಕ್ಷೆ ಹಾಗೂ ದೊಡ್ಡ ವಿಧಿಸುವ ಸಾಧ್ಯತೆ ಇರುತ್ತದೆ.

ಹಳೆಯ ಆಭರಣಗಳಿಗೆ ಏನು ಗತಿ:

ಹೊಸ ಆಭರಣಗಳನ್ನು ಮಾಡಿಸುವಾಗ ಹಾಲ್ ಮಾರ್ಕ್ ಅಂಕಿ ಹಾಕಿಸುವುದು ಕಡ್ಡಾಯ ಆದರೆ ಮನೆಯಲ್ಲಿ ಹಳೆ ಕಾಲದ ಚಿನ್ನ ಇರಬಹುದು ಆಗ ಅದಕ್ಕೆ ಹಾಲ್ ಮಾರ್ಕಿಂಗ್ ಇಲ್ಲದೆ ಇದ್ದರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಇದಕ್ಕೂ ಪರಿಹಾರವಿದೆ. ಮೊದಲನೇದಾಗಿ BIS ನೋಂದಾಯಿತ ಆಭರಣ ವ್ಯಾಪಾರಿಗಳ ಬಳಿ ನಿಮ್ಮ ಹಳೆಯ ಆಭರಣಗಳನ್ನು ಅವರಿಗೆ ಕೊಟ್ಟು ಹಾಲ್ ಮಾರ್ಕ್ (Hallmark) ಮಾಡಿಸಿಕೊಳ್ಳಬಹುದು. ಅಥವಾ ಬಿಐಎಸ್ ಮಾನ್ಯತೆ ಪಡೆದಿರುವ ಅಸ್ಸೆಯಿಂಗ್ ಹಾಗೂ ಹಾಲ್ ಮಾರ್ಕಿಂಗ್ ಕೇಂದ್ರಗಳಿಗೆ ನೇರವಾಗಿ ನಿಮ್ಮ ಆವರಣಕ್ಕೆ ಹಾಲ್ ಮಾರ್ಕ್ ಮಾಡಿಸಿಕೊಳ್ಳಬಹುದು.

ಹಳೆಯ ಆಭರಣಗಳನ್ನು ಮಾರಾಟ ಮಾಡುವಂತಿಲ್ಲ:

ನೀವು ಇನ್ನು ಮುಂದೆ ನಿಮ್ಮ ಹಳೆಯ ಆಭರಣವನ್ನು ಮಾರಾಟ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳುವುದಿದ್ದರೆ ಹಾಲ್ ಮಾರ್ಕ್ ಬೇಕೇ ಬೇಕು. ಇನ್ನು ಹಾಲ್ ಮಾರ್ಕ್ ಮಾಡಲು ಹೆಚ್ಚು ಹಣ ಖರ್ಚಾಗುವುದಿಲ್ಲ ನೀವು BIS ನೋಂದಾಯಿತ ಆಭರಣ ವ್ಯಾಪಾರಿಗಳ ಬಳಿ ಹಾಲ್ಮಾರ್ಕ್ ಅನು ಮಾಡಿಸಿಕೊಳ್ಳಬಹುದು. ಇದರ ಬೆಲೆ ಪ್ರತಿ ಆಭರಣಕ್ಕೆ ಕೇವಲ 45 ರೂಪಾಯಿಗಳು ಖರ್ಚಾಗುತ್ತವೆ. ಈ ಹಿಂದೆ 35 ರೂಪಾಯಿಗಳ ಶುಲ್ಕ ಇತ್ತು ಈಗ 45 ರೂಪಾಯಿಗಳಿಗೆ ಏರಿಸಲಾಗಿದೆ.

ನಿಮ್ಮ ಚಿನ್ನ (Gold) ವನ್ನು ಪರಿಶೀಲಿಸಿ, ಅದಕ್ಕೆ ಹಾಲ್ ಮಾರ್ಕ್ (Hallmark) ಮಾಡುವುದು ಮಾತ್ರವಲ್ಲದೆ ಪ್ರಮಾಣ ಪತ್ರವನ್ನು ಕೂಡ ನೀಡಲಾಗುತ್ತದೆ. ನಂತರ ನೀವು ನಿಮ್ಮ ಚಿನ್ನ ಬಣ್ಣ ಮಾರಾಟ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಪ್ರಮಾಣ ಪತ್ರವನ್ನು ತೋರಿಸಿದರೆ ಸಾಕು. ಜೂನ್ 16, 2021 ರಿಂದ ಭಾರತದಲ್ಲಿ ಹಾಲ್ ಮಾರ್ಕಿಂಗ್ ಕಡ್ಡಾಯವಾಗಿದೆ.

ಇಂಥವರು ಹಾಲ್ ಮಾರ್ಕಿಂಗ್ ಮಾಡಿಸಿಕೊಳ್ಳುವುದು ಬೇಡ:

ಹಾಲ್ ಮಾರ್ಕ್ ಕಡ್ಡಾಯವಾಗಿದ್ದರೂ ಕೂಡ ವಾರ್ಷಿಕವಾಗಿ 40 ಲಕ್ಷ ರೂಪಾಯಿಗಳವರೆಗೆ ವಹಿವಾಟು ನಡೆಸುವ ಆಭರಣ ವ್ಯಾಪಾರಿಗಳಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಇದರ ಜೊತೆಗೆ ಎರಡು ಗ್ರಾಂ ಗಿಂತಲೂ ಕಡಿಮೆ ಚಿನ್ನ (Gold) ವನ್ನು ಮಾರಾಟ ಮಾಡಲು ಹೊರಟರೆ ಹಾಲ್ ಮಾರ್ಕ್ ನಿಯಮ ಅನ್ವಯವಾಗುವುದಿಲ್ಲ. ಇನ್ನು ಪ್ರದರ್ಶನಕ್ಕಾಗಿ ಮಾಡಿರುವ ಆಭರಣಗಳ ಮೇಲೆ ಹಾಲ್ ಮಾರ್ಕಿಂಗ್ ರಿಯಾಯಿತಿ ನೀಡಲಾಗುತ್ತದೆ. ಇನ್ನು ಚಿನ್ನ (Gold) ದ ಗಡಿಯಾರಗಳು ಫೌಂಟೇನ್ ಪೆನ್ ಗಳು, ಪೊಲ್ಕಿ, ಕುಂದನ್ ಮೊದಲಾದ ವಿಶೇಷ ಆಭರಣಗಳಿಗೂ ಕೂಡ ಹಾಲ್ಮಾರ್ಕ್ ನಿಯಮ ಅನ್ವಯವಾಗುವುದಿಲ್ಲ.

ಹಾಲ್ ಮಾರ್ಕ್ ಯಾಕೆ ಬೇಕು:

ಚಿನ್ನ (Gold) ಕ್ಕೆ ಹಾಲ್ ಮಾರ್ಕ್ (Hallmark) ಕೊಡುವುದರಿಂದ ಹೆಚ್ಚು ಲಾಭ ಆಗುವುದಿಲ್ಲ ಗ್ರಾಹಕರಿಗೆ. ಹಾಲ್ಮಾರ್ಕ್ ಇರುವ ಆಭರಣಗಳಲ್ಲಿ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಚಿನ್ನದ ಆಭರಣಗಳ ಕ್ಯಾರೆಟ್ ಮಾಹಿತಿಯನ್ನು ಕೂಡ ಕೊಡಲಾಗುತ್ತದೆ. ಇದು ನಿಮ್ಮ ಬಳಿ ಇರುವ ಚಿನ್ನದ ಶುದ್ಧತೆಗೆ ಸಿಗುವ ಖಾತರಿ. ಇದು ನಿಮ್ಮ ಬಳಿ ಇದ್ದರೆ ಯಾವುದೇ ಜಾಗದಲ್ಲಿ ಬೇಕಾದರೂ ನೀವು ನಿಮ್ಮ ಚಿನ್ನವನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.

Leave A Reply

Your email address will not be published.