Karnataka Times
Trending Stories, Viral News, Gossips & Everything in Kannada

KSRTC: ಸಾರಿಗೆ ಇಲಾಖೆ ಬಗ್ಗೆ ಹೊಸ ತೀರ್ಪು ಕೊಟ್ಟ ಕೋರ್ಟ್!

Advertisement

ರಸ್ತೆ ನಿಯಮಗಳು ಉಲ್ಲಂಘನೆ ಆದಂತಹ ಸಂದರ್ಭದಲ್ಲಿ ಕೋರ್ಟ್ ಮೆಟ್ಟಿಲೇರುವುದು ಸಾಮಾನ್ಯವಾಗಿದೆ‌. ಅದೇ ರೀತಿ ಸರಕಾರಿ ಸಾರಿಗೆಗೂ ಅನೇಕ ನಿಯಮ ಇದ್ದರೆ ಅದು ಕೂಡ ತೀರ್ಪು ನೀಡುವ ಪ್ರಕ್ರಿಯೆ ಇದ್ದಿದ್ದೆ. ಆದರೆ ಇತ್ತೀಚೆಗೆ ಇಂತಹದ್ದೆ ಒಂದು ವಿಚಾರಣೆಯನ್ನು ಪ್ರಶ್ನಿಸಿ ಹೈಕೋರ್ಟ್ (High Court) ನಲ್ಲಿ ದಾವೆ ಹೂಡಿದ್ದ ಕಾರಣ ಈ ಬಗ್ಗೆ ಹೈ ಕೋರ್ಟ್ ಸ್ಪಷ್ಟನೆ ನೀಡಿದೆ.

ಏನಾಯ್ತು?

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ (NEKRTC) ಸಿಬಂದಿ , ಶಿಸ್ತುಕ್ರಮಗಳ ಕೆಲ ತೀರ್ಪು ನೀಡಲು ನಿವೃತ್ತ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಅನೇಕ ವಿಚಾರಗಳಿಗೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಈ ರೀತಿ ಸಿಬಂದಿಯ ಶಿಸ್ತು ಕ್ರಮ ಇತ್ಯಾದಿಗಳ ತೀರ್ಪು ನೀಡಲು ನಿವೃತ್ತ ನ್ಯಾಯಾಧೀಶರು ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ (Public Prosicutor) ಬಳಸಬಹುದೇ ಎಂಬ ಪ್ರಶ್ನೆ ಕಾಡಿದ್ದು ಈಗ ಅದಕ್ಕೆ ಸಮಂಜಸವೆಂಬ ಉತ್ತರ ಸಿಕ್ಕಿದೆ.

ಹೈ ಕೋರ್ಟ್ ಆದೇಶ ಏನು?

ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದಲ್ಲಿ ನ್ಯಾಯ ಮೂರ್ತಿ ಸೂರಜ್ ಗೋವಿಂದ ರಾಜ್ ಅವರು NEKRTC ಕ್ರಮದ ಬಗ್ಗೆ ಉತ್ತರಿಸಿ, ತೀರ್ಪು ನೀಡಿದ್ದಾರೆ. 1971ರಲ್ಲಿ 23 (2)ರಲ್ಲಿ ಪ್ರಾಧಿಕಾರ ಎಂಬ ಪದದ ಬಳಕೆ ಮಾಡಲಾಗಿದೆ‌. ಅದರ ಪ್ರಕಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಪ್ರಾಧಿಕಾರ ಸಿಬಂದಿ ನೇಮಕಾತಿ ನಡಾವಳಿ, ಶಿಸ್ತು ವಿಚಾರಣೆಗೆ KSRTC ಅಧಿಕಾರಿಯನ್ನು ಬಿಟ್ಟು ಬೇರೆ ಅವರನ್ನು ಮಾಡಬಾರದು ಎಂಬ ಯಾವ ನಿಯಮ ಇಲ್ಲ ಎಂದು ತಿಳಿಸಿ ಸಾರಿಗೆ ಇಲಾಖೆಯ ಈ ವ್ಯವಸ್ಥೆಯನ್ನೇ ಎತ್ತಿ ಹಿಡಿಯಲಾಗಿದೆ.

ಅರ್ಜಿಯನ್ನು ವಜಾ ಗೊಳಿಸಿದ್ದ ನ್ಯಾಯಮೂರ್ತಿ ಅವರು ಈ ನಿಟ್ಟಿನಲ್ಲಿ ಸರಿಯಾದ ಸ್ಪಷ್ಟನೆ ಯನ್ನು ನೀಡಿದ್ದಾರೆ. ಹಾಗಾಗಿ ರಸ್ತೆ ಸಾರಿಗೆ ನಿಗಮಗಳು ಅನುಕೂಲ ಕ್ರಮದ ಮೂಲಕ ನಿವೃತ್ತ ಸಿವಿಲ್ , ಜಿಲ್ಲಾ ನ್ಯಾಯಾಧೀಶರನ್ನು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಬಳಸುವುದು ಅಕ್ಷಮ್ಯವಲ್ಲ ಎಂಬುದು ಹೈಕೋರ್ಟ್ ಸ್ಪಷ್ಟೀಕರಣ ನೀಡಿದೆ.

ಈಶಾನ್ಯ ಕರ್ನಾಟಕದ ರಸ್ತೆ ಸಾರಿಗೆ ನಿಗಮ (NEKRTC) ಸೇರಿದಂತೆ ಬಹುತೇಕ ಭಾಗದಲ್ಲಿ ಈ ನಿಯಮ ಇದ್ದು ಇದರಿಂದ ಸಿಬಂದಿ ಶಿಸ್ತು ಕ್ರಮದ ನಿರ್ವಹಣೆಗೆ ಸರಿಯಾದ ಆದೇಶ ಸಲಹೆ ಎಲ್ಲವೂ ಸೂಕ್ತ ಮತ್ತು ಕ್ಲಪ್ತವಾಗಿ ದೊರೆಯಲಿದೆ.

1 Comment
  1. Nagaraju says

    On senior citizens day the karnataka govt will announce free bus facility to senior citizens this will not done by govt

Leave A Reply

Your email address will not be published.