High Court: ಕುಟುಂಬದಿಂದ ದೂರ ಇರಲು ಪತ್ನಿಯಿಂದ ಪತಿಗೆ ಒತ್ತಾಯ! ಹೊಸ ತೀರ್ಪು ಕೊಟ್ಟ ಕೋರ್ಟ್
ಯಾವುದೇ ಬಲವಾದ ಕಾರಣವಿಲ್ಲದೆ ತನ್ನ ಹೆತ್ತ ತಂದೆ ತಾಯಿಯಿಂದ ದೂರ ಆಗಬೇಕು ಎಂದು ಹೆಂಡತಿ ತನ್ನ ಪತಿಗೆ ನಿರಂತರವಾಗಿ ಒತ್ತಾಯ ಮಾಡುತ್ತಿದ್ದು ಇದನ್ನು ಪತಿಯ ಕಡೆಯಿಂದ ಹಿಂಸಿಸುವ ಹಾಗೂ ಕೃತ್ಯಕ್ಕೆ ಸಮಾನವಾಗಿದೆ ಎಂದು ದೆಹಲಿ ಹೈಕೋರ್ಟ್ (High Court) ತೀರ್ಮಾನ ನೀಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ವಿಚ್ಛೇದನದ ನೀಡುವ ಸಂದರ್ಭದಲ್ಲಿ ಇದನ್ನು ವಿವರಿಸಿದೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಹಾಗೂ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಪೀಠ ವಿಚ್ಛೇದನಕ್ಕೆ ಸಂಬಂಧಪಟ್ಟ ಹಾಗೆ ವಾದ ವಿವಾದಗಳನ್ನು ಗಮನಿಸಿ ಮಹತ್ವದ ತೀರ್ಪನ್ನು ನೀಡಿದೆ. ಪಶ್ಚಿಮಾತ್ಯ ದೇಶಗಳಂತೆ ಭಾರತೀಯ ಕುಟುಂಬದಲ್ಲಿ ತಂದೆ ತಾಯಿಯಿಂದ ಮಗ ಬೇರ್ಪಟ್ಟು ವಾಸಿಸುವುದು ಸಾಮಾನ್ಯ ವಿಚಾರವಲ್ಲ ಯಾವುದೇ ಬಲವಾದ ಕಾರಣವಿಲ್ಲದೆ ಕುಟುಂಬದಿಂದ ದೂರ ಇರಬೇಕು ಬೇರೆ ಮನೆ ಮಾಡಬೇಕು ಎಂದು ಪತ್ನಿ ಒತ್ತಾಯಿಸುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ನ್ಯಾಯಾಲಯ ತೀರ್ಪು ನೀಡಿದ್ದು ಇದನ್ನ ಕ್ರೌರ್ಯಕ್ಕೆ ಹೋಲಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ವಿಚ್ಛೇದನ (Divorce) ದ ಕೇಸೊಂದು ದೆಹಲಿಯ ಹೈಕೋರ್ಟ್ (High Court) ಮೆಟ್ಟಿಲೇರಿದೆ. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪತಿ ಪ್ರಶ್ನಿಸಿದ್ದು ತನ್ನ ಹೆಂಡತಿ ಮನೆಯಲ್ಲಿ ಹಿರಿಯರನ್ನ ಗೌರವಿಸುವುದಿಲ್ಲ. ಆಕೆ ಜಗಳ ಗಂಟಿ ಮಹಿಳೆ. ನನ್ನಿಂದ ನನ್ನ ಪಾಲಕರನ್ನು ಕೂಡ ದೂರ ಮಾಡಲು ಪ್ರಯತ್ನಿಸುತ್ತಿದ್ದಾಳೆ ಹಾಗಾಗಿ ಆಕೆಯಿಂದ ತಾನು ಬೇರೆಯಾಗಬೇಕು ಎಂದು ಒತ್ತಾಯಿಸಿ ಹಿಂದೂ ವಿವಾದ ಕಾಯ್ದೆಯ ಅಡಿಯಲ್ಲಿ ಮದುವೆಯನ್ನು ಮುರಿದುಕೊಳ್ಳಲು ಆತ ಬಯಸಿದ್ದ. ಹಾಗಾಗಿ ಹೆಂಡತಿಯಿಂದ ವಿಚ್ಛೇದನ ಪಡೆದುಕೊಳ್ಳಲು ಸಾಕಷ್ಟು ಕಾರಣವನ್ನು ಕೂಡ ಆ ವ್ಯಕ್ತಿ ನೀಡಿದ್ದಾನೆ. ಇದರ ಬಗ್ಗೆ ಆದೇಶ ನೀಡಿರುವ ಪೀಠ ಸಾಮಾನ್ಯವಾಗಿ ಯಾವುದೇ ಪ್ರತಿ ತನ್ನ ಪೋಷಕರಿಂದ ಬೇರೆ ಆಗಿ ಬೇರೆ ಕುಟುಂಬ ನಡೆಸಲು ಬಯಸುವುದಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದೆ. ಜೊತೆಗೆ ಕುಟುಂಬದಿಂದ ಬೇರ್ಪಡುವಂತೆ ವಿನಾಕಾರಣ ಗಂಡನನ್ನು ಒತ್ತಾಯಿಸುವ ಪತ್ನಿ, ಇದು ಪತಿಗೆ ನೀಡುವ ಹಿಂಸೆ ಅಥವಾ ಕ್ರೌರ್ಯ ಎಂದು ಪರಿಗಣಿಸಲಾಗಿದೆ.
ಕುಟುಂಬದಿಂದ ದೂರ ಇರುವಂತೆ ಒತ್ತಾಯಿಸುವುದು ಒಂದು ಕೃತ್ಯ:
ನ್ಯಾಯಾಲಯವು ಕುಟುಂಬದಿಂದ ದೂರ ಇರುವಂತೆ ಪತ್ನಿ ಒತ್ತಾಯಿಸಿದರೆ ಅದು ಒಂದು ಕ್ರೌರ್ಯ ಅಥವಾ ಕೃತ್ಯ ಎನಿಸಿಕೊಳ್ಳುತ್ತದೆ. ಪತ್ನಿ ಪತಿಯ ಬಳಿ ಪ್ರತ್ಯೇಕವಾಗಿ ವಾಸಿಸಲು ಒತ್ತಾಯ ಮಾಡುವುದಕ್ಕೆ ಯಾವುದೇ ಸಮಂಜಸವಾದ ಕಾರಣ ಇಲ್ಲ. ಇದು ಆಕೆಯ ಸ್ವಂತ ಇಚ್ಛೆಯಾಗಿದೆ ಹಾಗಾಗಿ ಇದಕ್ಕೆ ಯಾವುದೇ ಮಾನ್ಯ ಕಾರಣ ಇಲ್ಲದೇ ಇರುವುದಕ್ಕೆ ಈ ಕಾರಣವನ್ನು ಪರಿಗಣಿಸಲು ಸಾಧ್ಯವಿಲ್ಲ ಹಾಗೂ ಇದು ಆಕೆಯ ಮೊಂಡುತನವನ್ನು ತೋರಿಸುತ್ತದೆ. ಒಬ್ಬ ಹಿಂದೂ ಮಗ ತನ್ನ ಹೆಂಡತಿಯ ಮಾತಿನ ಮೇರೆಗೆ ಹೆತ್ತವರಿಂದ ಬೇರ್ಪಡುವುದು ಭಾರತದಲ್ಲಿ ಸಾಮಾನ್ಯವಾಗಿರುವ ಪದ್ಧತಿಯು ಅಲ್ಲ ಅಥವಾ ಅಪೇಕ್ಷಣೀಯ ಸಂಸ್ಕೃತಿ ಕೂಡ ಅಲ್ಲ ಎಂದು ಸುಪ್ರೀಂಕೋರ್ಟ್ ಈ ಹಿಂದೆ ತೀರ್ಮಾನ ನೀಡಿರುವುದನ್ನು ಪೀಠವು ಹೈಕೋರ್ಟ್ ನಲ್ಲಿ ಮತ್ತೆ ಎತ್ತಿ ಹೇಳಿದೆ.
ಪತ್ನಿ ಕುಟುಂಬದ ಭಾಗವಾಗಬೇಕು:
ತಂದೆ ತಾಯಿ ವಯಸ್ಸಾದ ನಂತರ ಸಮಾಜದಲ್ಲಿ ನಡೆಯುವುದಕ್ಕೆ ವ್ಯತಿರಿಕ್ತವಾಗಿ ಮಗ ನಡೆದುಕೊಳ್ಳಬಾರದು ಮಗನಿಗೆ ಆ ತಂದೆ ತಾಯಿಯನ್ನು ನೋಡಿಕೊಳ್ಳುವ ನೈತಿಕ ಹಾಗೂ ಕಾನೂನು ಬಾಧ್ಯತೆ ಇರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಒಂದು ವೇಳೆ ತಂದೆ ತಾಯಿಯಿಂದ ಬೇರೆಯಾಗಲು ಪ್ರಯತ್ನಿಸಿದರೆ ಅದಕ್ಕೆ ಸರಿಯಾದ ಕಾರಣವನ್ನು ಕೊಡಬೇಕು. ಭಾರತೀಯ ಸಂಪ್ರದಾಯದಲ್ಲಿ ಪಾಶ್ಚಿಮಾತ್ಯ ಸಿದ್ದಾಂತವನ್ನು ಅನುಸರಿಸಲು ಸಾಧ್ಯವಿಲ್ಲ. ಅಲ್ಲಿ ಮದುವೆಯಾಗಿ ಮಗ ತಂದೆ ತಾಯಿಯಿಂದ ಬೇರ್ಪಡುವುದು ದೊಡ್ಡ ವಿಷಯವಲ್ಲ ಆದರೆ ಭಾರತದಲ್ಲಿ ಹೆಂಡತಿ ಗಂಡನ ಕುಟುಂಬದ ಭಾಗವಾಗಬೇಕೆ ಹೊರತು ಮನೆಯನ್ನು ಭಾಗ ಮಾಡುವ ಹಾಗಿಲ್ಲ. ಈ ರೀತಿ ಮಾಡುವುದು ಕ್ರೂರ ವಾತಾವರಣವನ್ನು ಸೃಷ್ಟಿ ಮಾಡಿದಂತೆ ಆಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ವಿಚ್ಛೇದನ ಅರ್ಜಿ ಅನುಮೋದಿಸಿದ ಹೈಕೋರ್ಟ್:
ಇನ್ನು ಪತಿಗೆ ಮನೆಯಿಂದ ಹೊರಬರುವಂತೆ ಪತ್ನಿ ಒತ್ತಾಯ ಮಾಡಿದ್ದು ಅಲ್ಲದೆ 2007 ರಿಂದ ಪತಿ-ಪತ್ನಿ ವೈವಾಹಿಕ ಸಂಬಂಧ ನಡೆಸುತ್ತಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 (ಎ) (ಎ- ಐ) ಹಾಗೂ (ಐಬಿ) ಅಡಿಯಲ್ಲಿ ಆಕೆ ಪತ್ನಿಯಿಂದ ಮನೆಯನ್ನು ಬಿಡುವಂತೆ ಒತ್ತಾಯಿಸಿದ್ದು ತಪ್ಪು ಎನ್ನುವ ಕಾರಣಕ್ಕೆ ಮೇಲ್ಮನವಿದಾರ ಹಾಗೂ ಪ್ರತಿವಾದಿಯ ನಡುವಿನ ವೈವಾಹಿಕ ಸಂಬಂಧವನ್ನು ಕೊನೆಗೊಳಿಸಿ ವಿಚ್ಛೇದನ ನೀಡಲಾಗಿದೆ.