ನೀವು ಕೂಡ ಆಗಾಗ ಹೆದ್ದಾರಿಯಲ್ಲಿ ವಾಹನ ಓಡಿಸುತ್ತೀರಾ ನೀವು ಕೂಡ ಟೋಲ್ ಪ್ಲಾಜಾವನ್ನು ದಾಟಿಯೇ ಮುಂದೆ ಹೋಗಬೇಕಾ? ಟೋಲ್ (Toll) ದಲ್ಲಿ ಟ್ರಾಫಿಕ್ ನಿಂದ ಹೆಚ್ಚು ಸಮಯ ಕಾಯುತ್ತೀರಾ ಹಾಗಾದ್ರೆ ನಿಮಗೆ ಸಿಗಲಿದೆ ದೊಡ್ಡ ರಿಲೀಸ್. ಎನ್ ಹೆಚ್ ಎ ಐ ಹೇಳಿರುವ ಪ್ರಕಾರ ಇನ್ನು ಮುಂದೆ ಇಂತಹ ಸಂದರ್ಭದಲ್ಲಿ ಟೋಲ್ ಕಟ್ಟುವ ಅಗತ್ಯವಿಲ್ಲ. ಹೆದ್ದಾರಿಯಲ್ಲಿ ಚಲಿಸುವ ಚಾಲಕರು ಇದನ್ನು ಗಮನಿಸಲೇಬೇಕು.
ಇನ್ನು ಮುಂದೆ ಟೋಲ್ ಪ್ಲಾಸಾ (Toll Plaza) ದಲ್ಲಿ ನೀವು ಹೆಚ್ಚು ಸಮಯ ಕಾಯುವ ಪರಿಸ್ಥಿತಿ ಬಂದರೆ ಒಂದು ರೂಪಾಯಿಗಳನ್ನು ಕೂಡ ಟೋಲ್ (Toll) ಕಟ್ಟಬೇಕಾಗಿಲ್ಲ ಎಂದು ಹೊಸ ಮಾರ್ಗಸೂಚಿಯನ್ನು ಸರ್ಕಾರ ನೀಡಿದೆ. ಟೋಲ್ (Toll) ಆರಂಭದ ದಿನಗಳಿಗೂ ಈಗಿನ ದಿನಗಳಿಗೂ ಸಾಕಷ್ಟ ವ್ಯತ್ಯಾಸಗಳು ಇವೆ. ಮೊದಲು ಆರಂಭವಾದಾಗ ಟ್ರಾಫಿಕ್ ನಲ್ಲಿ ಸಾಕಷ್ಟು ಸಮಯ ಕಾಯಬೇಕಿತ್ತು.
ಬೆಳಗಿನ ಜಾವ ಟೋಲ್ ನಲ್ಲಿ ನಿಂತರೆ ಬೆಳಕು ಹರಿಯುವವರೆಗೂ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಕಾಲಕ್ರಮೇಣ ಹೊಸ ನಿಯಮಗಳನ್ನು ಜಾರಿಗೊಳಿಸಿ ಫಾಸ್ಟ್ ಟ್ಯಾಗ್ ಮೂಲಕ ತೆರಿಗೆ ಪಾವತಿ ಮಾಡುವಂತೆ ಚಾಲಕರಿಗೆ ಅವಕಾಶ ಮಾಡಿಕೊಡಲಾಯಿತು. ಇದರಿಂದಾಗಿ ಚಾಲಕರು ಟೋಲ್ ಪ್ಲಾಜಾ (Toll Plaza) ದಲ್ಲಿ ಹೆಚ್ಚು ಸಮಯ ನಿಲ್ಲದೆ, ಫಾಸ್ಟ್ ಟ್ಯಾಗ (FASTag) ನ್ನು ಆಟೋಮ್ಯಾಟಿಕ್ ಆಗಿ ಸ್ಕ್ಯಾನ್ ಮಾಡಿಕೊಂಡು ಅದರಿಂದ ಹಣ ಕಟ್ಟಾಗುವಂತೆ ಮಾಡುವ ವ್ಯವಸ್ಥೆ ಜಾರಿಗೆ ಬಂದಿತು. ಇದರಿಂದ ಜನರ ಸಮಯವೂ ಕೂಡ ಉಳಿತಾಯವಾಗಿದೆ.
ಈಗ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಹೊಸ ಮಾರ್ಗ ಸೂಚಿಯನ್ನು ನೀಡಿದೆ. ನೀವು ಟೋಲ್ ಪ್ಲಾಜಾದಲ್ಲಿ 10 ಸೆಕೆಂಡ್ಗಿಂತ ಹೆಚ್ಚಿನ ಸಮಯ ಕಾಯಬೇಕಾದ ಪರಿಸ್ಥಿತಿ ಬಂದರೆ ನೀವು ಟೋಲ್ ತೆರಿಗೆ (Toll Tax) ಪಾವತಿಸುವ ಅಗತ್ಯವೇ ಇಲ್ಲ. ಅಥವಾ ಟೋಲ್ ಪ್ಲಾಜಾದಲ್ಲಿ 100 ಮೀಟರ್ ಗಿಂತ ಉತ್ತಮವಾಗಿರುವ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಬಂದರೂ ಕೂಡ ನಿಮ್ಮಿಂದ ಟೋಲ್ ತೆರಿಗೆ ತೆಗೆದುಕೊಳ್ಳುವುದಿಲ್ಲ.
ಟೋಲ್ ತೆರಿಗೆ ನಿಯಮ ರೂಪಿಸಿದ್ದು ಹೇಗೆ
ಇನ್ನು ಟೋಲ್ (Toll) ನಿಯಮದ ಪ್ರಕಾರ ನೀವು 10 ಸೆಕೆಂಡ್ ಗಳು ಕೂಡ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ಟೋಲ್ ಪ್ಲಾಜಾ (Toll Plaza) ಕ್ಯೂನಲ್ಲಿ ವಾಹನ ಬರುವ ಜಾಗದಲ್ಲಿ ಹಳದಿ ಬಣ್ಣದ ರೇಖೆ ಒಂದನ್ನು ಎಳೆಯಲಾಗುತ್ತಿದೆ. ಆ ಗೆರೆಯನ್ನು ದಾಟಿ ವಾಹನ ನಿಲ್ಲಬೇಕಾದ ಪರಿಸ್ಥಿತಿ ಬಂದರೆ ಅಂತಹ ವಾಹನಗಳು ಟೋಲ್ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಟೋಲ್ ನಲ್ಲಿ ಟ್ರಾಫಿಕ್ ಜಾಮ್ ಆಗಬಾರದು ಸಂಚಾರ ನಿಯಮಗಳನ್ನು ಜನರಿಗೆ ಸಹಾಯಕವಾಗುವಂತೆ ಮಾಡಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಫಾಸ್ಟ್ ಟ್ಯಾಗ್ ಬಂದ ನಂತರ ಜನರಿಗೆ ಟೋಲ್ ಪ್ಲಾಜಾ ಕ್ಯೂನಲ್ಲಿ ಹೆಚ್ಚು ಸಮಯ ಇರುವ ಅಗತ್ಯವಿಲ್ಲ. ಕೇವಲ 30 ಸೆಕೆಂಡುಗಳಲ್ಲಿ ಟೋಲ್ ಪ್ಲಾಜಾವನ್ನು ಪಾಸ್ ಮಾಡಿ ಮುಂದೆ ಹೋಗಬಹುದು. ಈಗ ಈ ಅವಧಿಯನ್ನು ಇನ್ನಷ್ಟು ಇಳಿಕೆ ಮಾಡಲಾಗಿದ್ದು, 10 ಸೆಕೆಂಡ್ಗಳಿಗಿಂತ ಹೆಚ್ಚು ಸಮಯ ಟೋಲ್ ನಲ್ಲಿ ಇರುವ ಪರಿಸ್ಥಿತಿ ಎದುರಾದರೆ ಟೋಲ್ ಕೂಡ ಭರಿಸುವ ಅಗತ್ಯವಿಲ್ಲ.