ಪ್ರತಿ ವರ್ಷ ಮಾರ್ಚ್ (March) ಅಂತ್ಯದ ವೇಳೆ ಹಣಕಾಸು ವರ್ಷ ಮುಗಿದು ಹೊಸ ಯೋಜನೆ ನೀತಿಗಳು ಇರುವುದು ಸಾಮಾನ್ಯ ಸಂಗತಿಯಾಗಿದೆ ಅದೇ ರೀತಿ ಈ ಬಾರಿ ಹೊಸ ಯೋಜನೆ ನೀತಿ ನಿಯಮ ಎಲ್ಲ ಸಿದ್ಧವಾಗಿದ್ದು ಎಲ್ಲದಕ್ಕೂ ನೀವು ಸದಾ ಸನ್ನದ್ಧವಾಗಬೇಕಿದೆ.
ಯಾವೆಲ್ಲ ವಿಚಾರ:
2023ರ ಈ ವರ್ಷದಂದು ಕೆಲವೊಂದು ಸಂಗತಿಗಳ ಬಗ್ಗೆ ನೀವು ಗಮನ ಹರಿಸುವುದು ಅತ್ಯಗತ್ಯವಾಗಿದೆ.
ಆಧಾರ್ ಪ್ಯಾನ್ ಲಿಂಕ್:
ಇಂದು ಆಧಾರ್ (Aadhaar) ಮತ್ತು ಪಾನ್ ಕಾರ್ಡ್ (PAN Card) ನಮ್ಮ ಅಗತ್ಯ ದಾಖಲಾತಿಗಳಲ್ಲಿ ಒಂದಾಗಿದ್ದು ಇದರ ಜೊಡಣೆ ಇಂದು ಅಗತ್ಯವಾಗಿದೆ. ಮಾ31 ಇದಕ್ಕೆ ಕಡೆಯ ದಿನವಾಗಿದ್ದು ಈಗಾಗಲೇ ಜೋಡಣೆ ಮಾಡದಿದ್ದವರಿಗೆ ಫೈನ್ (Fine) ಕೂಡ ಹಾಕಿದ್ದಾರೆ. ಈ ಮೂಲಕ 1000ರೂ. ಮೊತ್ತವನ್ನು ಅಧಿಕವಾಗಿ ದಂಡವೆಂದು ಪಾವತಿಸಿದ ಬಳಿಕ ಆಧಾರ್ ಹಾಗೂ ಪಾನ್ ಲಿಂಕ್ ಆಗುತ್ತಿದೆ. ಇದರ ಮೇಲೂ ನೀವು ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಗೊಳ್ಳುವ ಸಾಧ್ಯತೆ ಇದ್ದು ಪುನಃ ಪಡೆಯಲು ಸಹ ಕಷ್ಟವಾಗುವ ಸಾಧ್ಯತೆ ಇದೆ. ಹಾಗಾಗಿ 31ರೊಳಗಾಗಿ ಲಿಂಕ್ ಮಾಡುವುದೇ ಒಳಿತು ಎನ್ನಬಹುದು.
ತೈಲದರ ಏರಿಕೆ:
ಅಡುಗೆ ಎಣ್ಣೆ (Cooking Oil) ಯಿಂದ ಹಿಡಿದು ಕಚ್ಚಾ ತೈಲಗಳಾದ ಪೆಟ್ರೋಲ್ (Petrol) ಹಾಗೂ ಡಿಸೇಲ್ ದರ (Diesel Price) ವು ಏರಿಕೆಯಾಗುವ ಸಾಧ್ಯತೆ ಇದ್ದು ಅದು ಕೂಡ ಎಪ್ರಿಲ್ ನಲ್ಲಿ ದರ ನಿಗಧಿಯಾಗಲಿದೆ.
ಗ್ಯಾಸ್ ಬೆಲೆಗೆ ತಟ್ಟಲಿದೆ ಬಿಸಿ:
ಗ್ಯಾಸಿನ ದರ (Gas Price) ವನ್ನು ಈಗಾಗಲೇ 50ರೂ. ಏರಿಕೆ ಮಾಡಿದ್ದು ಮುಂಬರುವ ಹಣಕಾಸು ವರ್ಷವನ್ನು ಗಮನದಲ್ಲಿ ಇರಿಸಿಕೊಂಡು ಮತ್ತಷ್ಟು ದರ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ರಜಾದಿನಗಳು:
RBI ಈ ಬಾರಿಯ ಏಪ್ರಿಲ್ 2023 ಬ್ಯಾಂಕ್ ರಜಾದಿನಗಳು ಪಟ್ಟಿಯನ್ನು ಬಿಡುಗಡೆ ಮಡಿದ್ದು ಈ ಬಾರಿ ರಜಾದಿನಗಳು (Holidays) ಅಧಿಕವಿದ್ದು ಅದನ್ನು ಗಮನದಲ್ಲಿರಿಸಿಕೊಂಡು ಕೆಲಸ ಕಾರ್ಯಗಳಿಗೆ ಮುನ್ನಡೆಯುವುದು ಅಗತ್ಯವಾಗಿದೆ.