Karnataka Times
Trending Stories, Viral News, Gossips & Everything in Kannada

Street Vendor: ಬೀದಿಬದಿ ವ್ಯಾಪಾರ ಮಾಡಿಕೊಂಡಿದ್ದವರಿಗೆ ರಾಜ್ಯದಲ್ಲಿ ಸಿಹಿಸುದ್ದಿ

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಎದ್ದು ತರಕಾರಿಯನ್ನು ಖರೀದಿಸಲು ಬೀದಿ ಬದಿಯ ವ್ಯಾಪಾರಿಗಳ ಬಳಿ ಹೋಗುವುದನ್ನು ನೀವು ಗಮನಿಸಿರುತ್ತೀರಿ. ಅಂತಹ ಬೀದಿ ಬದಿಯ ವ್ಯಾಪಾರಿಗಳಿಗೆ (Street Vendors) ಬೆಳಗ್ಗೆಯ ಸಂದರ್ಭದಲ್ಲಿ ಏನಾಗುತ್ತೋ ಅದೇ ವ್ಯಾಪಾರ ಎನ್ನುವುದು ಕೂಡ ನಿಮಗೆಲ್ಲರಿಗೂ ತಿಳಿದಿರಬಹುದು. ಅಂಥವರಿಗೆ ಖಂಡಿತವಾಗಿ ನಾವು ಗುಡ್ ನ್ಯೂಸ್ ಹೇಳೋಕೆ ಹೊರಟಿದ್ದೀವಿ ಅಂತ ಭಾವಿಸುತ್ತೇವೆ. ಹಾಗಿದ್ರೆ ಬನ್ನಿ ಆ ಗುಡ್ ನ್ಯೂಸ್ ಏನು ಅಂತ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

Advertisement

ಕೇಂದ್ರ ರಾಜ್ಯ ಸಚಿವರಾಗಿರುವಂತಹ ಭಗವತ್ ಕಿಶನ್ ರಾವ್ ಕರಾಡ್ (Kisan Rao Karad) ಈ ಬಗ್ಗೆ ಹೇಳಿದ್ದಾರೆ. ರಾಜ್ಯದಲ್ಲಿ 3 ಲಕ್ಷದ 2 ಸಾವಿರ ಪಿಎಂ ಯೋಜನೆಯ ಫಲಾನುಭವಿಗಳು ಇದ್ದಾರೆ ಎನ್ನುವುದಾಗಿ ಅವರು ಇತ್ತೀಚಿಗಷ್ಟೇ ಮಾಹಿತಿಯನ್ನು ಹೊರ ಹಾಕಿದ್ದಾರೆ. ಬೀದಿ ಬದಿಯ ವ್ಯಾಪಾರಿಗಳಿಗೆ ಕೆಲವೊಂದು ಅಗತ್ಯ ಸಾಲಗಳನ್ನು ನೀಡುವ ಕುರಿತಂತೆ ಯಾವ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿರುವ ಬಗ್ಗೆ ಕೂಡ ಈ ಸಂದರ್ಭದಲ್ಲಿ ಅವರು ಹಂಚಿಕೊಂಡಿದ್ದಾರೆ.

Advertisement

ಚಿಕ್ಕ ಪುಟ್ಟ ವ್ಯಾಪಾರಿಗಳಿಗೂ ಕೂಡ ಈ ರೀತಿಯ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಯಾವ ರೀತಿಯಲ್ಲಿ ಅವರ ವ್ಯಾಪಾರವನ್ನು ಇನ್ನಷ್ಟು ದೊಡ್ಡ ರೀತಿಯಲ್ಲಿ ಮಾಡುವಂತೆ ಅವರಿಗೆ ಆರ್ಥಿಕ ಸಹಾಯವನ್ನು ನೀಡಬಹುದೇ ಎನ್ನುವುದರ ಬಗ್ಗೆ ಕೂಡ ಈ ಸಂದರ್ಭದಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವಂತಹ ಪ್ರಯತ್ನಗಳು ನಡೆಯುತ್ತಿರುವುದು ಕಂಡುಬಂದಿವೆ.

Advertisement

ಕೆನರಾ ಬ್ಯಾಂಕ್ (Canara Bank) ಮೂಲಕ ಸಾಲ ಸೌಲಭ್ಯವನ್ನು ನೀಡುವಂತಹ ಮಾತುಗಳನ್ನಾಡಿರುವ ಅವರು ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ನೀಡುವಂತಹ ವಿಚಾರಕ್ಕಾಗಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕುಗಳನ್ನು ಬಳಸಿಕೊಳ್ಳುವುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಯೋಜನೆ ಯಶಸ್ವಿಯಾಗಿ ಪ್ರತಿಯೊಬ್ಬರಿಗೂ ಕೂಡ ಇದರ ಉದ್ದೇಶ ತಲುಪುವ ಕುರಿತಂತೆ, ಪ್ರತಿಯೊಬ್ಬರೂ ಕೂಡ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕೂಡ ಈಗಾಗಲೇ 68%ದಷ್ಟು ಯೋಜನೆಯ ಯಶಸ್ವಿಯಾಗಿದೆ ಎಂಬುದಾಗಿ ಕೂಡ ರಾಜ್ಯದ ಕುರಿತಂತೆ ಅವರು ಹೆಮ್ಮೆಯ ಫಲಿತಾಂಶವನ್ನು ಹೊರಹಾಕಿದ್ದಾರೆ.

Advertisement

ಈ ಸಂದರ್ಭದಲ್ಲಿ ಯಾರೊಬ್ಬರ CIBIL Score ನೋಡಬೇಕಾದಂತಹ ಅಗತ್ಯವೂ ಇಲ್ಲ ನೇರವಾಗಿ ಸಾಲವನ್ನು ನೀಡುವಂತಹ ಆದೇಶವನ್ನು ನೀಡಲಾಗಿದೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ಪ್ರತಿ ಬುಧವಾರ ಬೀದಿಬದಿಯ ವ್ಯಾಪಾರಿ (Street Vendor) ಗಳಿಗಾಗಿ ಸಾಲ ಮೇಳವನ್ನು ಆಯೋಜನೆ ಮಾಡಲಾಗುತ್ತದೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಈ ನಿರ್ಧಾರವನ್ನು ತೆಗೆದುಕೊಂಡಿರುವಂತಹ ಸಭೆಯಲ್ಲಿ ಕೇವಲ ಕರ್ನಾಟಕದ ಪ್ರತಿನಿಧಿಗಳು ಮಾತ್ರವಲ್ಲದೆ ದೇಶದ ಬೇರೆ ಬೇರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿಗಳು ಕೂಡ ಭಾಗಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಬೀದಿಬದಿಯ ವ್ಯಾಪಾರಿಗಳ ಬಗ್ಗೆ ತೆಗೆದುಕೊಂಡಿರುವಂತಹ ಅತ್ಯುತ್ತಮ ನಿರ್ಧಾರ ಇದಾಗಿದೆ ಎಂಬುದಾಗಿ ಪ್ರತಿಯೊಬ್ಬರಿಗೂ ತಮ್ಮ ಮೆಚ್ಚಿಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Leave A Reply

Your email address will not be published.