ರಾಜ್ಯ ಸರಕಾರ ಗ್ಯಾರಂಟಿ (Guarantee) ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ, ಈ ನಡುವೆ ಈ ಗ್ಯಾರಂಟಿ ಯೋಜನೆಗಳನ್ನು ಜನರು ಬಳಕೆ ಮಾಡಿಕೊಳ್ತಾರೆ ನಿಜ, ಅದರೆ ಇತ್ತೀಚಿನ ದಿನದಲ್ಲಿ ನಾವು ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಿದೆ, ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆಬೆಲೆ ಹೆಚ್ಚಾಗುತ್ತಿದ್ದು, ಇದೀಗ ಗೂಡ್ಸ್ ವಾಹನ (Goods Vehicle) ಗಳ ತೆರಿಗೆ ಮೊತ್ತವನ್ನು ಹೆಚ್ಚಿಸಿ ವಾಹನ ಸವಾರರಿಗೆ ಶಾಕ್ ನೀಡಿದೆ, ಈಗಾಗಲೇ ಜುಲೈ 7ರಂದು ಮಂಡಿಸಿದ್ದ ಬಜೆಟ್‌ನಲ್ಲಿ ವಾಹನಗಳ ತೆರಿಗೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಾಹಿತಿ ನೀಡಿದ್ದರು, ಕಳೆದ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಅದರಂತೆ ಈ ಕಾಯ್ದೆ ಜಾರಿಗೆ ಬಂದಿದೆ.
ಯಾವ ವಾಹನಗಳ ಮೇಲೆ ಎಷ್ಟು ತೆರಿಗೆ:
ಇದೀಗ ಕೆಲವೊಂದಿಷ್ಟು ಗೂಡ್ಸ್ ವಾಹನ (Goods Vehicle) ಗಳ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದು, ಜನರಿಗೆ ಮತ್ತಷ್ಟು ಹೊರೆ ಬೀಳಲಿದೆ, 1,500 ರಿಂದ 2,000 ಕೆಜಿ ತೂಕದ ಯಲ್ಲೋ ಬೋರ್ಡ್ ಗೂಡ್ಸ್ ವಾಹನಗಳ ಮೇಲೆ ಈ ಮೊದಲು 11,000 ರೂ ಮೊತ್ತ ಇತ್ತು, ಇದೀಗ 22,000 ರೂ ಮೊತ್ತ ಪಾವತಿ ಮಾಡಬೇಕಿದೆ. ಅದೇ ರೀತಿ 2,000 ರಿಂದ 3,000 ಕೆಜಿ ತೂಕದ ವಾಹನಗಳಿಗೆ ಈ ಮೊದಲು ವಿಧಿಸುತ್ತಿದ್ದ 16,650 ರೂ.ಗಳ ಬದಲಾಗಿ 33,300 ರೂ ಪಾವತಿ ಮಾಡಬೇಕಿದೆ .
ಕ್ಯಾಬ್ ವಾಹನಗಳ ತೆರಿಗೆ:
10 ಲಕ್ಷದಿಂದ 15 ಲಕ್ಷ ವರೆಗಿನ ಕ್ಯಾಬ್ ವಾಹನಗಳ ಖರೀದಿ ಮೇಲೆ ಶೇ.9ರಷ್ಟು ತೆರಿಗೆ ಹಾಗೂ ತೆರಿಗೆ ಮೊತ್ತದ ಮೇಲೆ ಶೇ.11ರಷ್ಟು ತೆರಿಗೆ ಹಾಕಲು ನಿಯಮ ತಿದ್ದುಪಡಿ ಮಾಡಿದೆ, ಶಾಲೆ-ಕಾಲೇಜು ವಾಹನ, ಕ್ಯಾಬ್, ಟ್ರಕ್‍ಗಳ ಮೇಲೆ ವಿಧಿಸುವ ತೆರಿಗೆಯನ್ನು ಹೆಚ್ಚಿಸಲಾಗಿದೆ. ತೆರಿಗೆ ಹೆಚ್ಚಳದಿಂದ ಹೆಚ್ಚುವರಿ ಆದಾಯ ಸಂಗ್ರಹಿಸುವ ಗುರಿಯನ್ನು ಸರ್ಕಾರ ಕೂಡ ಹೊಂದಿದೆ.
ಒಟ್ಟಿನಲ್ಲಿ ದಿನ ನಿತ್ಯದ ಬೆಲೆ ಏರಿಕೆ ನಡುವೆ ವಾಹನ ತೆರಿಗೆ ಹೆಚ್ಚಳ ಬಗ್ಗೆಯು ವಾಹನ ಸಾವರ ರಿಗೆ ಮತ್ತಷ್ಟು ಶಾಕ್ ಕೂಡ ನೀಡಿದೆ, ಈ ಮೂಲಕ ಯಲ್ಲೋ ಬೋರ್ಡ್ ಎಲ್ ಜಿವಿ, ಎಂಜಿವಿ ಗೂಡ್ಸ್ ವಾಹನ (Goods Vehicle) ಮಾಲೀಕರಿಗೆ ಈ ಮೂಲಕ ಬಿಗ್ ಶಾಕ್ ನೀಡಿದೆ ಎನ್ನಬಹುದು.