KSRTC: KSRTC ನೌಕರರಿಗೆ ಹೊಸ ಸಿಹಿಸುದ್ದಿ! ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

Advertisement
ರಾಜ್ಯದಲ್ಲಿ ಶಕ್ತಿ ಯೋಜನೆ (Shakthi Yojana) ಯಶಸ್ವಿಯಾದ ಬಳಿಕ ಸಾರಿಗೆ ಬಸ್ ಗಳ ಬೇಡಿಕೆ ಕೂಡ ಅಧಿಕವಾಗುತ್ತಿದೆ. ಹೆಚ್ಚುವರಿ ಸಾರಿಗೆ ಬಸ್ ಬರಲಿದೆ ಇದರಿಂದಾಗಿ ಗುತ್ತಿಗೆ ಆಧಾರದ ಮೇಲೆ ಚಾಲಕರು ನಿರ್ವಾಹಕರ ನೇಮಕ ಆಗುತ್ತದೆ ಎಂದು ಹೇಳಲಾಗಿದ್ದು ಆ ಪ್ರಸ್ತಾವನೆ ಇನ್ನಷ್ಟೇ ತಿಳಿಯಬೇಕಾಗಿದೆ. ಅದರ ಬೆನ್ನಲ್ಲೆ ಸಾರಿಗೆ ನೌಕರರ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಹೊಸ ಸುದ್ದಿ ಒಂದು ಕೇಳಿ ಬಂದಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗೆ 2023ನೇ ಸಾಲಿನ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದ್ದು ವಾಯುವ್ಯ ಸಾರಿಗೆ ನೌಕರರಿಗೆ ಇದೊಂದು ಶುಭ ಸುದ್ದಿಯಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಸಿಕ್ಕಿದ್ದು ಗದಗ , ಹಾವೇರಿ, ಧಾರವಾಡ, ಬೆಳಗಾವಿ,ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆ 9ವಿಭಾಗದ ನೌಕರರು ವರ್ಗಾವಣೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಬಹುದಾಗಿದೆ.
ಕುಟುಂಬ ನಿಮ್ಮಿತ್ತ, ಮಕ್ಕಳ ಶಿಕ್ಷಣ , ಆರೋಗ್ಯ (Health, Education, Family Reason) ಇನ್ನಿತರ ಕಾರಣಕ್ಕೆ ವರ್ಗಾವಣೆ ಬಯಸುವ ವರ್ಗಕ್ಕೆ ಈಗ ಈ ವರ್ಗಾವಣೆಯೂ ಸಾಕಷ್ಟು ಸಹಕಾರಿ ಆಗಲಿದೆ. ಈ ಒಂದು ಚಾಲಕರು, ನಿರ್ವಾಹಕರು, ಚಾಲಕ ಕಂ ನಿರ್ವಾಹಕರು, ತಾಂತ್ರಿಕ ಸಿಬಂದಿ, ಆಡಳಿತ ಸಿಬಂದಿ ಇತರರು ಸೇರಿ ಒಟ್ಟು 21,584ನೌಕರರಿದ್ದು ವರ್ಗಾವಣೆ ಬಯಸಿದ್ದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಕ್ರಿಯೆ ಹೇಗಿದೆ?
ಅರ್ಜಿಯನ್ನು ಸಲ್ಲಿಸುವವರು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಆ ಬಳಿಕ ಅದರ ಫಾರ್ಮ್ ಅನ್ನು ಹಾಗೂ ಅಗತ್ಯ ದಾಖಲೆಗಳ ಪ್ರತಿಯನ್ನು ಘಟಕ ವ್ಯವಸ್ಥಾಪಕರಿಗೆ, ಕಾರ್ಯ ಸ್ಥಳದ ಮುಖ್ಯಸ್ಥರಿಗೆ ಸಲ್ಲಿಸಬೇಕು. ಮ್ಯಾನುವಲ್ ಅರ್ಜಿ ಸಲ್ಲಿಸಿದ್ದರೂ ಮತ್ತೊಮ್ಮೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಯಾವಾಗ ಕೊನೆ ದಿನ:
ಈ ಒಂದು ಅರ್ಜಿ ಪ್ರಕ್ರಿಗೆ ಸೆಪ್ಟೆಂಬರ್ 4 ಕೊನೆಯ ದಿನವಾಗಿದ್ದು ಅಷ್ಟರ ಒಳಗೆ ಅರ್ಜಿ ಸಲ್ಲಿಸಬೇಕು. ವರ್ಗಾವಣೆಗೆ ನಿರ್ದಿಷ್ಟ ಕಾರಣ ಸಹ ನೀಡಬೇಕಾಗಿದ್ದು ಅವರ ಮನವಿ ಪರಿಗಣಿಸತ್ತಕ್ಕದ್ದು ಎಂದಾದರೆ ಆಗ ವರ್ಗಾವಣೆಗೆ ಸಮ್ಮತಿಸಲಾಗುವುದು ಇದು ಸಾರಿಗೆ ನೌಕರರ ಅನೇಕ ಉದ್ದೇಶಕ್ಕಾಗಿ ಮಾಡುವ ವರ್ಗಾವಣೆಗೆ ಇಲಾಖೆ ಇಂದಲೇ ಸಮ್ಮತಿ ಸಿಕ್ಕಂತಾಗುವುದು.
Also Read: KSRTC: ಉಚಿತ ಎಂದು KSRTC ಬಸ್ ಹತ್ತುವ ಮಹಿಳೆಯರೆ ಎಚ್ಚರಿಕೆ..! ನಿಮಗೂ ಹೀಗೆ ಆಗಬಹುದು..