Karnataka Times
Trending Stories, Viral News, Gossips & Everything in Kannada

New Guarantee: ಬೆಳ್ಳಂಬೆಳಿಗ್ಗೆ ಕರ್ನಾಟಕಕ್ಕೆ ಮತ್ತೊಂದು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್ ಸರ್ಕಾರ

ಈ ಬಾರಿ ಕರ್ನಾಟಕದಲ್ಲಿ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಸರಕಾರವು ಅಪಾರ ಜನಮಾತಾಗಿತ್ತು ಅದಕ್ಕೆ ಮುಖ್ಯ ಕಾರಣ ಪ್ರಣಾಳಿಕೆಯ ಅನ್ವಯ ಪಂಚ ಗ್ಯಾರೆಂಟಿ (Guarantee) ಭರವಸೆ ನೀಡಿದ್ದು. ಈ ಮೂಲಕ ಈ ಗ್ಯಾರೆಂಟಿ ಸುಳ್ಳು ನಂಬಬೇಡಿ ಅನ್ನುತ್ತಿದ್ದ ವಿಪಕ್ಷದವರೆ ಮೋಸ ಮಾಡುವಂತಿಲ್ಲ ನುಡಿದಂತೆ ಗ್ಯಾರೆಂಟಿ ಆಡಳಿತ ನೀಡಿ ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೆ ತಮ್ಮ ಕರ್ತವ್ಯ ಮರೆಯದ ಕಾಂಗ್ರೆಸ್ ಆಡಳಿತ ವರ್ಗದವರು ಗ್ಯಾರೆಂಟಿ ಯ ಕಾರ್ಯಕ್ರಮ ಹಂತ ಹಂತವಾಗಿ ಜಾರಿಗೆ ತಂದಿದ್ದಾರೆ.

Advertisement

ಶಕ್ತಿ ಯೋಜನೆ (Shakti Yojana) ಬಹುತೇಕ ಯಶಸ್ವಿಯ ಬಳಿಲ ಅನ್ನಭಾಗ್ಯ ಯೋಜನೆಯಲ್ಲಿ ಧನಸಹಾಯ ಮಂಜೂರು, ಗೃಹಜ್ಯೋತಿ (Gruha Jyothi) ಅಡಿಯಲ್ಲಿ ಉಚಿತ ಇನ್ನೂರು ಯುನಿಟ್ ಸಹ ಸಿಗುತ್ತಿದೆ. ಗೃಹಲಕ್ಷ್ಮೀ ಯೋಜನೆಗೆ (Gruha Lakshmi) ಇನ್ನು ಕೆಲವೇ ದಿನದಲ್ಲಿ ಚಾಲನೆ ಸಿಗಲಿದ್ದು ಅರ್ಜಿ ಪರಿಶೀಲನಾ ಹಂತದಲ್ಲಿದ್ದಾರೆ. ಹಾಗೇ ನಿರುದ್ಯೋಗಿಗಳಿಗೆ ಧನ ಸಹಾಯ ನೀಡುವ ಯುವನಿಧಿಗೆ (Yuva Nidhi) ಮುಂದಿನ ದಿನದಲ್ಲಿ ಚಾಲನೆ ಸಿಗಲಿದೆ. ಇದರ ಬೆನ್ನಲ್ಲೆ ಇನ್ನೊಂದು ಗ್ಯಾರೆಂಟಿ ಸಹ ಘೋಷಣೆ ಆಗಲು ರೆಡಿ ಆಗುತ್ತಿದೆ. ಆ ಗ್ಯಾರೆಂಟಿ ಯಾವುದು ಇನ್ನಿತರ ಮಾಹಿತಿ ಈ ಲೇಖನದಲ್ಲಿ ಇದೆ.

Advertisement

ಯಾವುದು ಈ ಹೊಸ ಗ್ಯಾರೆಂಟಿ:

Advertisement

ಶಿಕ್ಷಣ, ಆಹಾರ, ಉದ್ಯೋಗ ಮಾತ್ರ ಇದ್ದರೆ ಸಾಕೇ ಆರೋಗ್ಯ ಬೇಕಲ್ಲ ಹಾಗಾಗಿ ಹೊಸ ಗ್ಯಾರೆಂಟಿ (New Guarantee) ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದ್ದು ಇದನ್ನು ಗೃಹ ಆರೋಗ್ಯ (Gruha Arogya) ಎಂಬ ಹೆಸರಿನ ಮೂಲಕ ಕರೆಯಲಾಗುವುದು. ರಾಜ್ಯದಲ್ಲಿ ಮನೆಬಾಗಿಲಿಗೆ ವೈದ್ಯರನ್ನು ಕಳುಹಿಸಿ ಆರೋಗ್ಯ ತಪಾಸಣೆ ಮಾಡಿಸುವುದು. ಈ ಮೂಲಕ ಉಚಿತ ವೈದ್ಯಕೀಯ ಆರೋಗ್ಯ ಸೇವೆ ವದಗಿಸಲು ರಾಜ್ಯ ಸರಕಾರ ಮುಂದಾಗಿದೆ.

Advertisement

ಈಯೋಜನೆಯ ಅಡಿಯಲ್ಲಿ ಆರೋಗ್ಯ ಸಿಬಂದಿ ಹಾಗೂ ವೈದ್ಯರು ಗ್ರಾಮೀಣ ಹಂತದಲ್ಲೇ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಆರೋಗ್ಯ ಸ್ಥಿತಿ ವಿಚಾರಣೆ ಮಾಡಲಿದ್ದಾರೆ. ಬಿಪಿ, ಮಧುಮೇಹ ಚಿಕಿತ್ಸೆ (BP, Sugar) ಸಹ ಮಾಡಲಿದ್ದು ಅಲ್ಲೆ ಔಷಧ ಕೂಡ ನೀಡುವರು. ಸೂಕ್ಷ್ಮ ಮತ್ತು ಗಂಭೀರ ಖಾಯಿಲೆ ಇದ್ದವರಿಗೆ ಸೂಚಿಸಿ ಹೆಚ್ಚಿನ ವೈದ್ಯಕೀಯ ಸೇವೆಗೆ ಆಸ್ಪತ್ರೆಗೆ ಬರಲು ಹೇಳುವರು.

ಉದ್ದೇಶ ಏನು?

ಸದ್ಯ ಈ ಗೃಹ ಆರೋಗ್ಯ ಸೌಲಭ್ಯವು ಪ್ರಾಯೋಗಿಕ ಕಾರ್ಯದಲ್ಲಿದೆ. ಮೊದಲ ಹಂತದಲ್ಲಿ ಎಂಟು ಜಿಲ್ಲೆಗೆ ಜಾರಿಗೆ ತರಲಾಗುವುದು ಆ ಮೂಲಕ ಆರೋಗ್ಯ ಮತ್ತು ಕುಟುಂಬ ಇಲಾಖೆ ಈ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿದ್ದು ರೋಗ ಬರುವ ಪೂರ್ವದಲ್ಲೇ ಚಿಕಿತ್ಸೆ ನೀಡು ರೋಗ ಮೊದಲ ಹಂತಕ್ಕೆ ತಡೆಯುವ ಉದ್ದೇಶ ಈ ಯೋಜನೆಯಲ್ಲಿ ಇದೆ. ಈ ಯೋಜನೆ ಮೂಲಕ ಅಬಾಲವೃದ್ಧರವರೆಗೂ ಆರೋಗ್ಯ ಸೌಲಭ್ಯ ಮನೆ ಬಾಗಿಲಿಗೆ ಬಂದಂತಾಗುತ್ತದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ (Health Minister Dinesh Gundu Rao) ಅವರು ತಿಳಿಸಿದ್ದಾರೆ.

Leave A Reply

Your email address will not be published.