Karnataka Times
Trending Stories, Viral News, Gossips & Everything in Kannada

Property: ಆಸ್ತಿಯಲ್ಲಿ ಗಂಡು ಹೆಣ್ಣಿಗೆ ಸಮಪಾಲು ಸಿಗುವ ಬಗ್ಗೆ ಕೋರ್ಟ್ ಹೊಸ ರೂಲ್ಸ್!.

ಆಸ್ತಿಯನ್ನು ಪಾಲು ಮಾಡುವ ಬಗ್ಗೆ ಪ್ರತಿಯೊಬ್ಬರು ಕೂಡ ತಮ್ಮ ಮರಣದ ಸಂದರ್ಭದಲ್ಲಿ ನಿರ್ಧಾರ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಅವರು ಪ್ರತ್ಯೇಕವಾಗಿ ಅವರಿಗೆ ಆಸ್ತಿಯನ್ನು ನೀಡಬೇಕು ಎನ್ನುವಂತಹ ನಿರ್ಧಾರ ಮಾಡಿದ್ರೆ ಅದಕ್ಕಾಗಿ ಅವರು ವಿಲ್ (Property Possession Will) ಅನ್ನು ಬರೆದಿಟ್ಟು ಹೋಗುತ್ತಾರೆ. ಹೀಗೆ ಮಾಡದೆ ಹೋದಲ್ಲಿ ಅದು ಸಹಜವಾಗಿ ಸ್ವಾಭಾವಿಕ ರೂಪದಲ್ಲಿ ಆ ವ್ಯಕ್ತಿಯ ಪ್ರತಿಯೊಂದು ಮಕ್ಕಳಲ್ಲೂ ಕೂಡ ಸಮಾನವಾಗಿ ಹಂಚಿಕೆಯಾಗುತ್ತದೆ ಎನ್ನುವುದು ಭಾರತೀಯ ಹಿಂದೂ ಉತ್ತರಾಧಿಕಾರ ಕಾಯಿದೆಯಲ್ಲಿ ಕಂಡುಬರುವಂತಹ ನಿಯಮವಾಗಿದೆ.

Advertisement

ಒಬ್ಬ ವ್ಯಕ್ತಿಯ ಆಸ್ತಿ (Property) ಯಲ್ಲಿ ಆತನ ನಂತರ ಆತನ ಮಕ್ಕಳು ಹಾಗೂ ಹೆಂಡತಿಯ ನಡುವೆ ಸಮಾನವಾಗಿ ಆಸ್ತಿ ಹಂಚಿಕೆ ಆಗುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಗೆ ಮೂರು ಮಕ್ಕಳಿದ್ದು ಅವರಿಗೆ ಮದುವೆಯಾಗಿ ಅವರಿಗೂ ಕೂಡ ಮಕ್ಕಳಾಗಿದ್ದರೆ ಪಿತ್ರಾರ್ಜಿತ ಆಸ್ತಿ (Inherited Property) ಹಂಚಿಕೆ ಮೊದಲಿಗೆ ನಡೆಯುತ್ತದೆ ನಂತರ ಅವರ ಮಕ್ಕಳಿಗೆ ನಡೆಯುತ್ತದೆ. ಒಂದು ವೇಳೆ ಆಸ್ತಿ (Property) ಯಾರಿಗೆ ಸೇರಬೇಕು ಎನ್ನುವುದಾಗಿ ಮೊದಲೇ ವಿಲ್ ಅನ್ನು ರಿಜಿಸ್ಟರ್ ಮಾಡಿದ್ರು ಕೂಡ ಸರಿಯಾದ ಪಾಲು ಆಗಿಲ್ಲ ಎಂದರೆ ಅದನ್ನು ಕೋರ್ಟಿನಲ್ಲಿ ನೀವು ಚಾಲೆಂಜ್ ಮಾಡಬಹುದು.

Advertisement

ಒಂದು ವೇಳೆ ಕೋಟಿನಲ್ಲಿ ಕೂಡ ಇದರ ವಿರುದ್ಧ ಚಾಲೆಂಜ್ ಹಾಕಬಾರದು ಎನ್ನುವ ಯೋಜನೆ ಇದ್ದರೆ ಮೊದಲನೇ ನೀವು ಈ ವಿಲ್ ಅನ್ನು ಭಾರತೀಯ ಉತ್ತರಾಧಿಕಾರಿ ಕಾನೂನು 1925 ರ ಪ್ರಕಾರ ಇದನ್ನು ರಿಜಿಸ್ಟರ್ (Will Registration) ಮಾಡಿಸಿಕೊಳ್ಳಬೇಕು. ಒಂದು ವೇಳೆ ಒಬ್ಬ ತಾಯಿಗೆ ಅಥವಾ ವ್ಯಕ್ತಿಗೆ ನಾಲ್ಕು ಮಕ್ಕಳಿದ್ದರೆ ಆ ಸಂದರ್ಭದಲ್ಲಿ ಆ ವ್ಯಕ್ತಿ ಆ ತಾಯಿ ಅಥವಾ ಪೋಷಕರಿಂದ ವಿಲ್ ಮೇಲೆ ನಕಲಿಯಾಗಿ ಹಸ್ತಾಕ್ಷರ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದರೆ ನೀವು ಅವರ ವಿರುದ್ಧ ಕೋರ್ಟಿನಲ್ಲಿ ಚಾಲೆಂಜ್ ಹಾಕುವಂತಹ ಸಂಪೂರ್ಣ ಸ್ವಾತಂತ್ರವನ್ನು ಹೊಂದಿರುತ್ತೀರಿ.

Advertisement

ಒಳ್ಳೆಯ ವಕೀಲರನ್ನು ಹಿಡಿದುಕೊಂಡು ನೀವು ಕೋರ್ಟಿನಲ್ಲಿ ಇದರ ವಿರುದ್ಧ ಪ್ರಕರಣವನ್ನು ನಡೆಸಬಹುದಾಗಿದ್ದು ಅವರು ಬರೆದಿರುವಂತಹ ವಿಲ್ ಅನ್ನೇ ಅಂತಿಮ ವಿಲ್ ಎಂಬುದಾಗಿ ಭಾವಿಸಲು ಸಾಧ್ಯವಾಗಿರುವುದಿಲ್ಲ ಅದನ್ನು ಕಾನೂನು ಚೌಕಟ್ಟಿನಲ್ಲಿ ರಿಜಿಸ್ಟ್ರೇಷನ್ ನಿಂದ ಹಿಂಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ನೀಡಲಾಗುತ್ತದೆ. ಈ ಮೂಲಕ ನೀವು ಆಸ್ತಿ ಹಂಚಿಕೆಯ ವಿಚಾರದಲ್ಲಿ ಯಾವುದಾದರೂ ಅನ್ಯಾಯ ನಡೆದಿದೆ ಎಂಬುದಾಗಿ ಭಾವಿಸಿದರೆ ಸರಿಯಾದ ವಕೀಲರನ್ನು ಈ ಪ್ರಕರಣವನ್ನು ಕೋರ್ಟಿನಲ್ಲಿ ವಾದಿಸಿ ನಿಮ್ಮ ಪರವಾಗಿ ಆಗುವಂತೆ ಮಾಡಬಹುದಾಗಿದೆ.

Advertisement

ಒಂದು ವಿಲ್ ಅನ್ನು ತಯಾರಿಸಲು ಸಂಬಂಧಪಟ್ಟ ವ್ಯಕ್ತಿಗೆ ಮೋಸ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದರೆ ಕೋರ್ಟಿನಲ್ಲಿ(Court) ಅದರ ವಿರುದ್ಧ ಪ್ರಕರಣವನ್ನು ದಾಖಲಿಸುವಂತಹ ಸಂಪೂರ್ಣ ಸ್ವಾತಂತ್ರವನ್ನು ನೀಡಲಾಗುತ್ತದೆ. ಒಂದು ವೇಳೆ ನಿಮಗೆ ಧಮಕಿ ನೀಡಿ ವಿಲ್ ಅನ್ನು ತಯಾರಿಸಿದ್ದಾರೆ ಎಂಬುದಾಗಿ ಕೂಡ ಕೋರ್ಟಿನಲ್ಲಿ ತೆಗೆದು ಬಂದರೆ ಅದನ್ನು ಕೂಡ ರದ್ದು ಮಾಡಲಾಗುತ್ತದೆ ಹಾಗೂ ವಿಲ್ ಮಾಡುವಂತಹ ಜವಾಬ್ದಾರಿಯನ್ನು ಹಾಗೂ ಅರ್ಹತೆಯನ್ನು ಮಾನಸಿಕ ಸ್ಥಿಮಿತವನ್ನು ಹೊಂದಿರುವಂತಹ 18 ವರ್ಷದ ಮೇಲಿನ ವ್ಯಕ್ತಿಗಳಿಗೆ ಮಾತ್ರ ನೀಡಲಾಗುತ್ತದೆ.

Leave A Reply

Your email address will not be published.