Karnataka Times
Trending Stories, Viral News, Gossips & Everything in Kannada

High Court: ಇನ್ಸುರೆನ್ಸ್ ಹಾಗೂ ಡ್ರೈವಿಂಗ್ ಲೈಸನ್ಸ್ ಬಗ್ಗೆ ಐತಿಹಾಸಿಕ ತೀರ್ಪು ಕೊಟ್ಟ ಕೋರ್ಟ್! ಎಲ್ಲರಿಗೂ ಕಡ್ಡಾಯ

Advertisement

ನಮ್ಮ ಭಾರತ ದೇಶ ಅತ್ಯಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶ ಆಗಿರುವ ಕಾರಣದಿಂದಾಗಿ ಬೇರೆ ಬೇರೆ ವಿಭಾಗಗಳಲ್ಲಿ ಅದಕ್ಕೆ ಸರಿ ಹೊಂದುವಂತಹ ನಿಯಮಗಳನ್ನು ಭಾರತದ ಕಾನೂನಿನ ಚೌಕಟ್ಟಿನಲ್ಲಿ ಸಮಯಕ್ಕೆ ಅನುಗುಣವಾಗಿ ಬದಲಾವಣೆ ಮಾಡುವಂತಹ ಹಾಗೂ ಹೊಸದಾಗಿ ಸೇರಿಸುವಂತಹ ಕೆಲಸಗಳು ಆಗಾಗ ನಡೆಯುತ್ತಲೆ ಇರುತ್ತವೆ. ಹೀಗಾಗಿ ಅವುಗಳನ್ನು ಒಬ್ಬ ಭಾರತೀಯ ಪ್ರಜೆಯಾಗಿ (Indian Citizen) ನಾವು ಸರಿಯಾಗಿ ಪಾಲನೆ ಮಾಡುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಬೇರೆ ಬೇರೆ ರೀತಿಯ ಕಾನೂನುಗಳನ್ನು ನಾವು ಭಾರತ ದೇಶದಲ್ಲಿ ಕಾಣಬಹುದಾಗಿದ್ದು ಕೆಲವರಿಗೆ ಆ ರೀತಿಯ ಕಾನೂನುಗಳು ನಿಜಕ್ಕೂ ಕೂಡ ಇರುತ್ತವೆ ಅನ್ನೋದೇ ತಿಳಿದಿರುವುದಿಲ್ಲ. ಉದಾಹರಣೆಗೆ ಇತ್ತೀಚಿಗಷ್ಟೇ ಮದ್ರಾಸ್ ಹೈಕೋರ್ಟ್ (Madras High Court) ನಲ್ಲಿ ಒಂದು ವಾಹನ ವಿಭಾಗದ ಪ್ರಕರಣದಲ್ಲಿ ನೀಡಿರುವ ತೀರ್ಪು ನಿಜಕ್ಕೂ ಕೂಡ ಈಗ ಎಲ್ಲರನ್ನೂ ಆಶ್ಚರ್ಯಕ್ಕೆ ತಳ್ಳಿದೆ ಎಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಗಾಡಿಗಳಿಗೂ ಕೂಡ ಇನ್ಸೂರೆನ್ಸ್ ಮಾಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ ಯಾಕೆಂದರೆ ಒಂದು ವೇಳೆ ಆಚಾತುರ್ಯದಿಂದಾಗಿ ಅಪ’ ಘಾತ ನಡೆದಾಗ ಅದಕ್ಕೆ ಪರಿಹಾರ ರೂಪದಲ್ಲಿ ಇನ್ಸೂರೆನ್ಸ್ (Insurance) ಕಂಪನಿ ನಿಮಗೆ ಹಣವನ್ನು ನೀಡುತ್ತದೆ.

ಈ ಸಂದರ್ಭದಲ್ಲಿ ಸರಿಯಾದ ದಸ್ತಾವೇಜುಗಳು ಕೂಡ ನಿಮ್ಮಲ್ಲಿ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದನ್ನು ಕೂಡ ನೀವು ನೆನಪು ಬಿಡಬಾರದು. ಹೌದು ಇನ್ಸೂರೆನ್ಸ್ (Insurance) ಹಣವನ್ನು ಕ್ಲೈಮ್ ಮಾಡಲು ನಿಮ್ಮ ಬಳಿ ಸರಿಯಾದ ದಾಖಲೆ ಪತ್ರಗಳು ಕೂಡ ಅದಕ್ಕೆ ಸಂಬಂಧಿಸಿದ ಹಾಗೆ ಇರಬೇಕು ಆದರೆ ಇತ್ತೀಚಿಗಷ್ಟೇ ಮದ್ರಾಸ್ ಹೈಕೋರ್ಟ್ ನಲ್ಲಿ ಹೊರಬಂದಿರುವ ತೀರ್ಪು ಇದಕ್ಕೆ ತದ್ವಿರುದ್ಧವಾಗಿದೆ ಅನ್ನುವ ರೀತಿಯಲ್ಲಿ ಕಂಡು ಬರುತ್ತದೆ. ಹಾಗಿದ್ರೆ ಬನ್ನಿ ಮದ್ರಾಸ್ ಹೈಕೋರ್ಟ್ ಇನ್ಸೂರೆನ್ಸ್ ವಿಚಾರದಲ್ಲಿ ಇತ್ತೀಚಿಗಷ್ಟೇ ನೀಡಿರುವಂತಹ ಲೇಟೆಸ್ಟ್ ತೀರ್ಪು ಯಾವುದು ಹಾಗೂ ಯಾತಕ್ಕಾಗಿ ಎಲ್ಲರೂ ಈ ತೀರ್ಪಿನ ಬಗ್ಗೆ ತಮ್ಮ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಮದ್ರಾಸ್ ಹೈಕೋರ್ಟ್ ನಲ್ಲಿ ಇತ್ತೀಚಿಗಷ್ಟೇ ನೀಡಿರುವ ತೀರ್ಪಿನ ಪ್ರಕಾರ ಅಪಘಾತ ಆಗಿರುವಂತಹ ವಾಹನದ ಡ್ರೈವರ್ ನ ವ್ಯಾಲಿಡ್ ಆಗಿರುವಂತಹ ಡ್ರೈವಿಂಗ್ ಲೈಸೆನ್ಸ್ (Driving License) ಇಲ್ಲದೆ ಹೋದರೂ ಕೂಡ ಇನ್ಸೂರೆನ್ಸ್ (Insurance) ಅನ್ನು Claim ಮಾಡಬಹುದಾಗಿದೆ ಎಂಬುದಾಗಿ ಕೋರ್ಟಿನಲ್ಲಿ ತೀರ್ಪು ನೀಡಲಾಗಿದೆ. ಡ್ರೈವರ್ ಬಳಿ ಅವಧಿ ಮೀರಿದ ಡ್ರೈವಿಂಗ್ ಲೈಸೆನ್ಸ್ ಇದ್ದರೂ ಕೂಡ ಇನ್ಸೂರೆನ್ಸ್ ಕಂಪನಿಯವರು ಇನ್ಸೂರೆನ್ಸ್ ಹಣವನ್ನು ನೀಡಬೇಕಾಗುತ್ತದೆ ಎಂಬುದಾಗಿ ಹೇಳಿದ್ದಾರೆ. ನಂತರ ಬೇಕಾದರೆ ವಾಹನದ ಮಾಲೀಕರಿಂದ ಹಣವನ್ನು ಮರುಪಡೆಯಬಹುದಾಗಿದೆ ಎಂಬುದಾಗಿ ಇತ್ತೀಚಿಗಷ್ಟೇ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

Leave A Reply

Your email address will not be published.