KSRTC: KSRTC ಗೆ ಹೊಸ ಆದೇಶ ಕೊಟ್ಟ ಹೈಕೋರ್ಟ್! ಮಹತ್ವದ ಸೂಚನೆ

Advertisement
ಜನರಿಗೆ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡುವಂತಹ ರಸ್ತೆ ಸಾರಿಗೆ ಹಾಗೂ ರಸ್ತೆ ಸಾರಿಗೆಯ ನೌಕರರಿಗೆ ಅನುಕೂಲವಾಗುವಂತೆ ವೇತನ ಪಾವತಿ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಆರ್ಥಿಕ ಸ್ಥಿತಿ ಸುಧಾರಣೆಯ ಜೊತೆಗೆ ಆರ್ಥಿಕ ನೆರವನ್ನು ಕೂಡ ನೀಡಬೇಕು ಎಂದು ನ್ಯಾಯಾಲಯ ಸರ್ಕಾರಕ್ಕೆ ಆದೇಶ ನೀಡಿದೆ.
ಹೌದು, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೌಕರರಿಗೆ ಪ್ರತಿ ತಿಂಗಳ 10ನೇ ತಾರೀಖಿನ ಒಳಗೆ ವೇತನವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು ಎಂಬುದು ಹೈಕೋರ್ಟ್ ಆದೇಶವಾಗಿದೆ. ವೇತನ ಹಾಗೂ ಪಿಂಚಣಿ ಪಾವತಿಯಲ್ಲಿ ಯಾವುದೇ ವಿಳಂಬ ಆಗಬಾರದು ಈ ವಿಚಾರವನ್ನು ಪ್ರಶ್ನಿಸಿ ಹಲವು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿತ್ತು. ನ್ಯಾಯಮೂರ್ತಿ ದೇವನ ರಾಮಚಂದ್ರನ್ ಅವರು ಈ ವಿಚಾರಣೆಯನ್ನು ನಡೆಸಿ ತಮ್ಮ ಆದೇಶವನ್ನು ನೀಡಿದ್ದಾರೆ. 27 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಅನುಕೂಲಕರವಾಗಲೂ ರಾಜ್ಯ ಸಾರಿಗೆ ಬಸ್ ಅನ್ನು ಅವಲಂಬಿಸಿರುತ್ತಾರೆ. ರಾಜ್ಯ ಸಾರಿಗೆ ನೌಕರರಿಗೆ ಸರಿಯಾಗಿ ವೇತನ ಪಾವತಿ ಆಗದೆ ಇದ್ದರೆ ಜನರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಿಲ್ಲ.
ಜುಲೈ ತಿಂಗಳ ವೇತನ ಪಾವತಿ ಆಗಿದೆ ಎಂದು ಕೇರಳ ಸಾರಿಗೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಓಣಂ ಭತ್ಯೆಯಾಗಿ 2,750ಗಳನ್ನು ನೌಕರರಿಗೆ ನೀಡಲಾಗಿದೆ, ಅಂದರೆ ಇದಕ್ಕಾಗಿ 7.30 ಕೋಟಿಗಳನ್ನು ಮೀಸಲಿಡಲಾಗಿದ್ದು, ನೌಕರರಿಗೆ 7,500 ರೂ. ಮುಂಗಡವಾಗಿ ಹಣ ನೀಡಲಾಗುತ್ತದೆ ಹಾಗೂ ಐದು ಕಂತುಗಳಲ್ಲಿ ಈ ಹಣವನ್ನು ಹಿಂಪಡೆಯಲಾಗುವುದು. ಇನ್ನು ಉದ್ಯೋಗಿಗಳಿಗೆ ಮುಂಗಡವಾಗಿ ಹಣ ಪಾವತಿ ಮಾಡುವುದಿದ್ದರೆ 19 ಕೋಟಿ ರೂಪಾಯಿಗಳು ಬೇಕಾಗುತ್ತದೆ ಇದಕ್ಕಾಗಿ ಸಾಲ ತೆಗೆದುಕೊಳ್ಳಲು ಕೆಎಸ್ಆರ್ಟಿಸಿ (KSRTC) ನಿರ್ಧರಿಸಿದೆ ಎಂದು ವಕೀಲರು ತಿಳಿಸಿದ್ದಾರೆ.
ಇನ್ನು ಕೆ ಎಸ್ ಆರ್ ಟಿ ಸಿ (KSRTC) ಸರ್ಕಾರಿ ಇಲಾಖೆಗಳಿಗೆ ಸಮಾನ ಎಂದು ಪರಿಗಣಿಸಬೇಕು ಎಂಬುದಾಗಿ ಅರ್ಜಿಯಲ್ಲಿ ಬೇಡಿಕೆ ಇಡಲಾಗಿತ್ತು. ಇದನ್ನು ನ್ಯಾಯಾಲಯ ತಿರಸ್ಕರಿಸಿದೆ ಕೆ ಎಸ್ ಆರ್ ಟಿ ಸಿ (KSRTC) ಒಂದು ಸಾರ್ವಜನಿಕ ವಲಯದ ಉದ್ಯಮವಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಪ್ರತಿ ತಿಂಗಳು ಬರುತ್ತಿರುವ ಆದಾಯದಿಂದ ನೌಕರರ ಬಾಕಿಯನ್ನು ಪಾವತಿ ಮಾಡಲು ಸಾಧ್ಯ ಇಲ್ಲ ಎಂದು ಹೈಕೋರ್ಟ್ ಗೆ ಅಫಿಡವಿತ ಸಲ್ಲಿಸಲಾಗಿತ್ತು. ಕೆರಳ ಸರ್ಕಾರ ಸಾರಿಗೆ ನಿಗಮದ ಸರಾಸರಿ ಮಾಸಿಕ ಹಣದ ಸಂಗ್ರಹ ಇನ್ನೂರು ಕೋಟಿ ಇದರಲ್ಲಿ 104 ಕೋಟಿ ಇಂಧನಕ್ಕೆ ಬಳಕೆ ಆಗುತ್ತದೆ ಹಾಗೂ 30.18 ಕೋಟಿ ಸಾಲ ಮರುಪಾವತಿಗೆ ಬೇಕು. 10.5 ಕೋಟಿ ಟಯರ್ ಹಾಗೂ ಬಸ್ ಬಿಡಿ ಭಾಗಗಳ ಖರೀದಿಗೆ ಮೀಸಲಿಡಬೇಕು. 5 ಕೋಟಿ ಫಾಸ್ಟ್ ಟ್ಯಾಗ್, ಫೋನ್ ಹಾಗೂ ವಿದ್ಯುತ್ ಶುಲ್ಕ 9 ಕೋಟಿ ಸುಂಕ ಸಿಲೆಂಡರ್ ಹಾಗೂ ಇನ್ವೆಂಟಿವ್ಗಳಿಗೆ ಮೀಸಲಿಡಬೇಕು.
ಇದರ ಜೊತೆಗೆ ಪಿಂಚಣಿ ಎಲ್ಐಸಿ (LIC) ಮೊದಲಾದವುಗಳಿಗೆ 6.35 ಕೋಟಿ ಬೇಕು. ಉಳಿದ 35 ಕೋಟಿ ರೂಪಾಯಿಗಳಲ್ಲಿ ನೌಕರರ ವೇತನ ಪಾವತಿ ಮಾಡುವುದಾದರೆ ಕೇವಲ 45 ರಿಂದ 50% ಮಾತ್ರ ಪಾವತಿ ಮಾಡಲು ಸಾಧ್ಯವಾಗುತ್ತದೆ. ಇದು ಮಾತ್ರವಲ್ಲದೆ ಅಪಘಾತ ಪರಿಹಾರದಂತಹ ಇತರ ಖರ್ಚುಗಳು ಕೂಡ ಇರುತ್ತವೆ ನ್ಯಾಯಾಲಯದ ಮುಂದೆ ವಕೀಲರು ಪ್ರಸ್ತಾಪ ಮಾಡಿದ್ದಾರೆ. ಹಾಗಾಗಿ ಕರ್ಚಿಗಿಂತಲೂ ಆದಾಯ ಹೆಚ್ಚಿಸುವ ಹೊಣೆ ಸಾರಿಗೆ ನಿಗಮದ ಮೇಲಿದೆ.
ಸಾರಿಗೆ ನೌಕರರ ಸಂಬಳವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಬೇಕು ಅದರಲ್ಲೂ ಪ್ರತಿ ತಿಂಗಳ 10ನೇ ತಾರೀಕಿನ ಒಳಗೆ ಪಾವತಿ ಆಗಿರಲೇಬೇಕು ಇದೇ ನಿಯಮ ಬಹುಶಃ ಕರ್ನಾಟಕದಲ್ಲಿಯೂ ಕೂಡ ಜಾರಿಗೆ ಬರಬಹುದು ಯಾಕೆಂದರೆ ಈಗಾಗಲೇ ವೇತನ ಸರಿಯಾಗಿ ಸಿಗುತ್ತಿಲ್ಲ ಎನ್ನುವುದು ಕರ್ನಾಟಕ ರಸ್ತೆ ಸಾರಿಗೆ ನೌಕರರ ಅಳಲು. ಕೇರಳ ರಸ್ತೆ ಸಾರಿಗೆ ನಿಗಮದ ವೇತನ ಪಾವತಿ ಆಗಬೇಕು ಎಂದು ಹೈಕೋರ್ಟ್ ಹೇಗೆ ನಿರ್ದೇಶನವನ್ನು ನೀಡಿದೆಯೋ ಕರ್ನಾಟಕದಲ್ಲಿಯೂ ಕೂಡ ಇದೇ ಆದೇಶ ಬರುವ ಸಾಧ್ಯತೆ ಇದೆ.