Rented House: ದೇಶಾದ್ಯಂತ ಮನೆ ಬಾಡಿಗೆ ಕೊಟ್ಟಿರುವ ಎಲ್ಲರಿಗೂ ಮಹತ್ವದ ಸೂಚನೆ! ಕೋರ್ಟ್ ಆದೇಶ

Advertisement
ದೂರದ ಊರುಗಳಿಗೆ ಕೆಲಸಕ್ಕೆ ಹೋಗುವಂತಹ ವ್ಯಕ್ತಿಗಳಿಗೆ ಅಲ್ಲಿ ನೆಲೆಸಲು ರೂಮುಗಳನ್ನು ಬಾಡಿಗೆ ಪಡೆದುಕೊಳ್ಳಬೇಕಾದ ಅಗತ್ಯ ಹೆಚ್ಚಾಗಿರುತ್ತದೆ. ಕೆಲವು ಉದ್ಯೋಗಿಗಳು PG ನಲ್ಲಿ ವಾಸ ಮಾಡಿದರೆ ಇನ್ನು ಕೆಲವರು ಅಂದರೆ ಹೆಚ್ಚಿನ ಗುಂಪಿನಲ್ಲಿ ವಾಸ ಮಾಡೋದಕ್ಕೆ ತಯಾರಿಯನ್ನು ನಡೆಸಿಕೊಳ್ಳುತ್ತಿರುವವರು ರೂಮನ್ನು ಬಾಡಿಗೆ ಪಡೆದುಕೊಳ್ಳುತ್ತಾರೆ. ಅಡ್ವಾನ್ಸ್ ಹಾಗೂ ತಿಂಗಳಿಗೆ ಇಂತಿಷ್ಟು ಹಣವನ್ನು ಬಾಡಿಗೆ ರೂಪದಲ್ಲಿ ನೀಡುತ್ತಾ ಹೋದರೆ ಆಯ್ತು ಯಾರು ಬೇಕಾದರೂ ಕೂಡ ನಿಮಗೆ ರೂಮನ್ನು ಬಾಡಿಗೆ (Rented House) ನೀಡುತ್ತಾರೆ. ಈ ಸಂದರ್ಭದಲ್ಲಿ ಕೆಲವೊಂದು ವಿವರಗಳನ್ನು ಪ್ರಮುಖವಾಗಿ ಗಮನಿಸಬೇಕಾಗುತ್ತದೆ.
ಸಾಮಾನ್ಯವಾಗಿ ಈ ರೀತಿ ಬೇರೆ ನಗರಗಳಲ್ಲಿ ಹೋಗಿ ಬಾಡಿಗೆ ಮನೆ (Rented House) ಯನ್ನು ಪಡೆದುಕೊಳ್ಳುವಂತಹ ಕೆಲಸ ಮಾಡುವುದು ಆ ನಗರದಲ್ಲಿ ಕೆಲಸವನ್ನು ಹೊಸದಾಗಿ ಪಡೆದಿರುವಂತಹ ಉದ್ಯೋಗಿಗಳೇ ಎಂಬುದು ತಿಳಿದಿರುತ್ತದೆ ಆದರೂ ಕೂಡ ಮನೆಯ ಮಾಲೀಕರು ಬೇಕಾಬಿಟ್ಟಿಯಾಗಿ ಮನೆಯನ್ನು ಯಾರಿಗೆ ಬೇಕಾದರೂ ಬಾಡಿಗೆ ನೀಡುವ ಹಾಗೆ ಇರುವುದಿಲ್ಲ. ನೀಡುವ ಹಾಗೆ ಇರುವುದಿಲ್ಲ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ನೀಡಿದರೆ ಮುಂದಿನ ದಿನಗಳಲ್ಲಿ ಅವರೇ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ಅವರು ಬಾಡಿಗೆ ಕರಾರು ಪತ್ರವನ್ನು ತಯಾರಿಸಬೇಕಾಗುತ್ತದೆ (Rental Agreement).
ಅದರಲ್ಲಿ ಅವರು ಬಾಡಿಗೆ ಮನೆಯ ಬಾಡಿಗೆ (Rented House) ಅಡ್ವಾನ್ಸ್ ಸೇರಿದಂತೆ ಪ್ರತಿಯೊಂದು ಸೌಲಭ್ಯಗಳ ಕುರಿತಂತೆ ಕೂಡ ಅಧಿಕೃತವಾಗಿ ಸರ್ಕಾರಿ ಸ್ಟಾಂಪ್ ಮೂಲಕ ಸ್ಪಷ್ಟೀಕರಣವನ್ನು ನೀಡುತ್ತಾರೆ. ಈ ಮೂಲಕ ಬಾಡಿಗೆದಾರರಿಗೆ ಮನೆಯ ಓನರ್ ಯಾವ ರೀತಿ ಇರಬೇಕು ಹಾಗೂ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಎನ್ನುವುದರ ಬಗ್ಗೆ ಸರ್ಕಾರಿ ದಾಖಲೆಗಳ ಮೂಲಕ ಅಧಿಕೃತವಾಗಿ ಹೇಳಿದಂತಾಗುತ್ತದೆ. ಆದರೆ ಬಾಡಿಗೆ ನೀಡುವುದಕ್ಕಿಂತ ಮುಂಚೆ ಕೆಲವೊಂದು ಪ್ರಮುಖ ವಿಚಾರಗಳನ್ನು ಗಮನಿಸಬೇಕು ಅದರಲ್ಲಿ ವಿಶೇಷವಾಗಿ ಪೋಲಿಸ್ ವೆರಿಫಿಕೇಶನ್.
ಬಾಡಿಗೆ (Rented House) ನೀಡುವುದಕ್ಕಿಂತ ಮುಂಚೆ ಯಾರು ಬಾಡಿಗೆಗಾಗಿ ಬಂದಿರುತ್ತಾರೋ ಅವರ ಬಗ್ಗೆ ಮನೆಯ ಮಾಲೀಕರು ಪೊಲೀಸ್ ವೆರಿಫಿಕೇಶನ್(Police Verification) ಮಾಡಿಸಬೇಕು. ಯಾಕೆಂದರೆ ಒಂದು ವೇಳೆ ಅವರು ಮನೆಯ ಮಾಲೀಕರಿಗೆ ತಿಳಿಯದಂತೆ ಆ ಬಾಡಿಗೆ ಮನೆಯಲ್ಲಿ ಏನಾದರೂ ಕಾನೂನು ಬಾಹಿರ ಅಪರಾಧವನ್ನು ಮಾಡುತ್ತಿದ್ದರೆ ಆ ಸಂದರ್ಭದಲ್ಲಿ ಮೊದಲೇ ಪೊಲೀಸ್ ವೆರಿಫಿಕೇಶನ್ ಮಾಡಿಸಿದ್ದರೆ ಮನೆಯ ಮಾಲೀಕರಿಗೆ ಯಾವುದೇ ತೊಂದರೆ ಇರುವುದಿಲ್ಲ. ಒಂದು ವೇಳೆ ಪೊಲೀಸ್ ವೆರಿಫಿಕೇಶನ್ ಮಾಡಿಸಿದೆ ನೇರವಾಗಿ ಬಾಡಿಗೆ ಮನೆಯನ್ನು ಆ ಬಾಡಿಗೆದಾರರಿಗೆ ನೀಡಿದ್ದರೆ ಮನೆಯ ಮಾಲೀಕರು ಮುಂದಿನ ದಿನಗಳಲ್ಲಿ ಅವರು ಸಿಕ್ಕಿಬಿದ್ದಾಗ ಕೂಡ ಕಾನೂನು ರೀತಿಯಲ್ಲಿ ಶಿಕ್ಷೆಯನ್ನು ಅನುಭವಿಸಬೇಕಾದಂತಹ ಸಾಧ್ಯತೆ ಕೂಡ ಇರುತ್ತೆ.