Karnataka Times
Trending Stories, Viral News, Gossips & Everything in Kannada

Property: ಬೇರೆ ಬೇರೆ ಕಡೆ ಜಾಗ ಆಸ್ತಿ ಇದ್ದವರಿಗೆ ರಾಜ್ಯ ಸರ್ಕಾರದ ಹೊಸ ರೂಲ್ಸ್!

Advertisement

ಇಂದು ನಿಯತ್ತಾಗಿ ಇರಿ ಎಂದು ಸರಕಾರ, ಅಧಿಕಾರಿಗಳು ಜನಸಾಮಾನ್ಯರಿಂದ ಉನ್ನತ ಅಧಿಕಾರಿಗಳ ವರೆಗೆ ಎಷ್ಟು ಬಾರಿ ಹೇಳಿದರೂ ಅಡ್ಡ ಮಾರ್ಗಹೋಗುವವರ ಸಂಖ್ಯೆ ಕಡಿಮೆ ಏನಾಗಿಲ್ಲ. ಇಂದು ಅಕ್ರಮವಾಗಿ ಆಸ್ತಿ (Property) ಪಾಸ್ತಿ ಮಾಡುವವರ ಸಂಖ್ಯೆ ಅಧಿಕವಾಗಿದ್ದು ರಾಜ್ಯದ ವಿವಿಧೆಡೆ ಅಕ್ರಮ ಕಟ್ಟಡ ಬಂಗಲೆ ಹೊಂದಿರುವ ಮಾಲಿಕರಿಗೆ ಈಗ ಸಂಕಷ್ಟದ ಕಾಲ ಆರಂಭ ಆಗಿದೆ.

ಯಾವುದು ಈ ಹೊಸ ಸಂಕಷ್ಟ:

ಕಟ್ಟಡ, ಸೈಟಿಗೆ ಈಗ ದುಪ್ಪಟ್ಟು ತೆರಿಗೆ ವಿಧಿಸಲು ಸರಕಾರ ಚಿಂತಿಸಿದೆ. ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ (Ishwar Kandre) ಅವರ ನೇತೃತ್ವದಲ್ಲಿ ಸಮೀತಿ ಉಪಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಈ ಮೂಲಕ ಅನಧಿಕೃತ ಕಟ್ಟಡ ಮತ್ತು ನಿವೇಶನದಿಂದ ಆಸ್ತಿ (Property) ತೆರಿಗೆ ಪ್ರಮಾಣ ಅಧಿಕ ಮಾಡಲು ಸರಕಾರ ಕಾರ್ಯ ಯೋಜನೆ ರೂಪಿಸಿದೆ‌. ಹಾಗಾಗಿ ಉಪ ಸಮಿತಿ ಮೂಲಕ ಕೆಲ ಸೂಕ್ತ ತೀರ್ಮಾನ ಸಹ ಕೈಗೊಳ್ಳಲಾಗುವುದು.

ವರದಿ ಸಲ್ಲಿಕೆ:

ಕರ್ನಾಟಕ ಮಹಾನಗರ ಪಾಲಿಕೆಯ ಕಾಯ್ದೆ (Karnataka Municipality Act) 1979ರ ಅನ್ವಯ 2020ರ ಕಾಯ್ದೆ ಮತ್ತು ಪುರಸಭೆಯ ಕಾಯ್ದೆಯಲ್ಲಿಬಕೆಲ ಮಹತ್ವದ ಬದಲಾವಣೆ ಮಾಡಲಾಗುವುದು. ಆ ಮೂಲಕ ಅನಧಿಕೃತ ಆಸ್ತಿಗೆ ಅಧಿಕ ತೆರಿಗೆ ಹಾಕಲು ಈ ಕಾಯ್ದೆ ಅನ್ವಯ ವಿಧಿ ವಿಧಾನ ನೆರವೇರಿಕೆಗೆ ಸರಕಾರ ಚಿಂತನೆ ನಡೆಸಿದೆ. ಅದರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ ಕಲಂ 144(6) ಮತ್ತು (21) ಇದರ ಅಂಶ ಹಾಗೂ ಇತರ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗೆ ವಿಸ್ತರಿಸಲು ಸರಕಾರ ತೀರ್ಮಾನಿಸಿದೆ. ಈ ಎಲ್ಲ ಪ್ರಕ್ರಿಯೆ ಬಗ್ಗೆ ಉಪಸಮಿತಿಗೆ ವರದಿ ಸಲ್ಲಿಕೆ ಆಗಲಿದೆ.

ಯಾರೆಲ್ಲ ಇರಲಿದ್ದಾರೆ?

ಈ ಒಂದು ಉಪಸಮಿತಿಯಲ್ಲಿ ಅನೇಕ ಸದಸ್ಯರು ಇರಲಿದ್ದಾರೆ. ಇದರ ಅಧ್ಯಕ್ಷತೆ ಈಶ್ವರ್ ಖಂಡ್ರೆ ನೇತೃತ್ವ ವಹಿಸಲಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ. ಪಾಟೀಲ್ (HK Pateel) ,ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್, (BH Suresh) ಪೌರಾಡಳಿತ ಇಲಾಖೆ ಸಚಿವ ರಹೀಂ ಖಾನ್ (Rahim Khan) , ಕಂದಾಯ ಸಚಿವ ಕೃಷ್ಣೆ ಬೈರೆಗೌಡ (Krishna Baire Gowda) ಸಹ ಈ ಉಪಸಮಿತಿಯಲ್ಲಿ ಸದಸ್ಯರಾಗಿದ್ದಾರೆ.

ಕಾನೂನು ಮಾನ್ಯತೆ ಇದೆಯಾ?

ಅಕ್ರಮ, ಅನಧಿಕೃತ ಆಸ್ತಿ (Property) ಗೆ ದುಪ್ಪಟ್ಟು ತೆರಿಗೆ ವಿಧಿಸಿ ಅದನ್ನು ಸಂಬಂಧ ಪಟ್ಟವರು ಕಟ್ಟಿದರೆ ಆಗ ಅಂತಹ ಆಸ್ತಿ ಕಾನೂನು ಮಾನ್ಯತೆ ಪಡೆದು ಅಕ್ರಮ ರಹಿತ ಆಗುತ್ತಾ ಎಂಬ ಅನುಮಾನ ಕಾಡಿದ್ದು ಹಾಗೇನು ವ್ಯವಸ್ಥೆ ಇಲ್ಲ ಬದಲಾಗಿ ಅಕ್ರಮ ಎಂದು ಕ್ರಮ ಜರುಗಿಸುವವರೆಗೆ ಅಂತಹ ಆಸ್ತಿಗೆ ಸಂಬಂಧ ಪಟ್ಟವರು ತೆರಿಗೆ ಬರಿಸಬೇಕಾಗುತ್ತದೆ. ಇದು ಅಕ್ರಮ ಎಂದು ಸಾಬೀತಾದರೆ ಕಾನೂನು ಪ್ರಕಾರ ತೆರವಿಗೂ ಹೋಗಲಿದೆ.

Leave A Reply

Your email address will not be published.