Supreme Court: ಕೇಸ್ ದಾಖಲಾಗಿರುವ ಎಲ್ಲರಿಗೂ ಸುಪ್ರೀಂ ಕೋರ್ಟ್ ನಿಂದ ಹೊರ ಬಿತ್ತು ಮಹತ್ವದ ತೀರ್ಪು.

Advertisement
ಭಾರತದ ಪ್ರತಿಯೊಂದು ದೊಡ್ಡ ಪ್ರಮಾಣದ ಅಥವಾ ಕೊನೆಯ ನ್ಯಾಯದ ಮನೆಯ ಎಂಬುದಾಗಿ ಕರೆಯಲ್ಪಡುವ ನ್ಯಾಯ ದೇಗುಲ ಎಂದರೆ ಅದು ಸುಪ್ರೀಂ ಕೋರ್ಟ್ (Supreme Court) ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅದಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯ ಎಂಬುದಾಗಿ ಹೇಳಲಾಗುತ್ತದೆ. ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಹಾಕುವುದರ ಬಗ್ಗೆ ಇತ್ತೀಚಿಗಷ್ಟೇ ಸುಪ್ರೀಂಕೋರ್ಟ್ (Supreme Court) ಐತಿಹಾಸಿಕ ತೀರ್ಪನ್ನು ನೀಡಿದ್ದು ಬನ್ನಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಇದು ಮಧ್ಯಪ್ರದೇಶದಲ್ಲಿ ನಡೆದಿರುವಂತಹ ಒಂದು ಘಟನೆಯ ಪ್ರಕರಣದ ತೀರ್ಪಾಗಿದ್ದು CBI ಹಾಗೂ ಆರೋಪಿಯ ನಡುವಿನ ಚಾರ್ಜ್ ಶೀಟ್ (Charge Sheet) ಮೇಲೆ ಕೇಳಿ ಬಂದಿರುವಂತಹ ಪ್ರಕರಣವಾಗಿದೆ ಎಂಬುದಾಗಿ ತಿಳಿದುಬಂದಿದೆ. 1973ರ CRPC ಸೆಕ್ಷನ್ 272ರ ಪ್ರಕಾರ ಚಾರ್ಜ್ ಶೀಟ್ ನಲ್ಲಿ ಅನುವಾದ ಅಗತ್ಯ ಇದೆಯೋ ಇಲ್ಲವೋ ಎನ್ನುವುದರ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ನಡೆದಿದೆ.
ಸಾಮಾನ್ಯವಾಗಿ ರಾಜ್ಯ ನ್ಯಾಯಾಲಯದಲ್ಲಿ ಹೇಳಿರುವಂತೆ ಕಾನೂನಿನಲ್ಲಿ ಅಧಿಕೃತವಾಗಿ ಹೇಳಿರುವಂತಹ ಭಾಷೆಯನ್ನು ಪ್ರತಿಯೊಂದು ವಿಚಾರಣೆ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ ಹಾಗಾಗಿ ಚಾರ್ಜ್ ಶೀಟ್ ಸೇರಿದಂತೆ ಸಾಕ್ಷಿ ಒಟ್ಟು ಗೂಡುವಿಕೆ ಹಾಗೂ ಇನ್ನಿತರ ವಿಚಾರಣಾ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಅಧಿಕೃತವಾಗಿ ಸೂಚಿಸಿರುವಂತಹ ಭಾಷೆಯನ್ನು ಉಪಯೋಗಿಸಲಾಗುತ್ತದೆ ಆದರೆ CRPC ಕಾಯ್ದೆ 207 ಹಾಗೂ 208ರ ಪ್ರಕಾರ ಒಂದು ವೇಳೆ ಅಪರಾಧಿಗಳಿಗೆ ಚಾರ್ಜ್ ಶೀಟ್ ನಲ್ಲಿ ದಾಖಲು ಮಾಡಿರುವಂತಹ ಭಾಷೆ ಅರ್ಥವಾಗದೆ ಹೋದಾಗ ಅವರಿಗೆ ಅನುವಾದವನ್ನು ಮಾಡುವಂತಹ ಅಥವಾ ಅದನ್ನು ಪಡೆದುಕೊಳ್ಳುವಂತಹ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಒಂದು ವೇಳೆ ಬೇರೆ ಭಾಷೆಯಲ್ಲಿ ಬರೆದಿರುವಂತಹ ಚಾರ್ಜ್ ಶೀಟ್ ನಲ್ಲಿ ಇರುವಂತಹ ಅಂಶಗಳ ಬಗ್ಗೆ ಅವರಿಗೆ ಯಾವುದಾದರೂ ಆಕ್ಷೇಪಣೆ ಇದ್ದರೆ ಅಥವಾ ಚಾರ್ಜ್ ಶೀಟ್ ನಲ್ಲಿ ಅಪರಾಧಿಯಾಗಿ ಕಾಣಿಸಿಕೊಂಡಿರುವ ವ್ಯಕ್ತಿಯ ಕಾನೂನು ಪ್ರತಿನಿಧಿ ಚಾರ್ಜ್ ಶೀಟ್ ನಲ್ಲಿ ಬರೆಯಲಾಗಿರುವ ಯಾವುದೇ ವಿಚಾರದ ಬಗ್ಗೆ ಅಸಮಾಧಾನವನ್ನು ಹೊಂದಿದ್ದರೆ ಆ ಸಂದರ್ಭದಲ್ಲಿ ಅವರು ಅವರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ಅದನ್ನು ತರ್ಜುಮೆ ಮಾಡಿರುವ ಪ್ರತಿಯೊಂದು ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ ಎಂಬುದಾಗಿ ನ್ಯಾಯಾಲಯ ಹೇಳಿದೆ.
ಒಟ್ಟಾರೆಯಾಗಿ ಈ ತೀರ್ಪಿನ ಮೂಲಕ ಹೇಳಿರುವುದೆನೆಂದರೆ ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಅನ್ನು ಅವರ ಕಾನೂನು ಭಾಷೆಯಲ್ಲಿ (Language Of Law) ದಾಖಲಿಸಬಹುದು ಆದರೆ ಒಂದು ವೇಳೆ ಆರೋಪಿ ಅದನ್ನು ಆತ ಅರ್ಥ ಮಾಡಿಕೊಳ್ಳುವಂತಹ ಭಾಷೆಯಲ್ಲಿ ಬೇಕು ಎಂದಾಗ ಟ್ರಾನ್ಸ್ಲೇಷನ್ ಮಾಡಿ ಅದರ ಪ್ರತಿಯನ್ನು ಆತನಿಗೆ ನೀಡಬಹುದು ಎಂಬುದಾಗಿ ಸುಪ್ರೀಂಕೋರ್ಟ್ ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಪ್ರಕರಣದಲ್ಲಿ ತೀರ್ಪನ್ನು ನೀಡುವ ಮೂಲಕ ಐತಿಹಾಸಿಕ ಬದಲಾವಣೆಯನ್ನು ಮಾಡಿದೆ ಎಂದು ಹೇಳಬಹುದಾಗಿದೆ.