Karnataka Times
Trending Stories, Viral News, Gossips & Everything in Kannada

Shakti Yojana: ಶಕ್ತಿ ಯೋಜನೆಯ ಫ್ರಿ ಬಸ್ ಗೆ ಮತ್ತೊಂದು ಸಂಕಷ್ಟ!

ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಜಾರಿಗೆ ಬಂದಾಗಿನಿಂದ ಮಹಿಳೆಯರ ಓಡಾಟ ಬರದಿಂದ ಸಾಗುತ್ತಿದೆ ಈ ಮೂಲಕ ಶಕ್ತಿ ಯೋಜನೆಯ ಯಶಸ್ವಿ ಎಂದು ಸರಕಾರ ಬೀಗುತ್ತಿದ್ದು ಮಹಿಳೆಯರು ಖುಷಿಯಲ್ಲಿ ರಶ್ (Rush) ಇದ್ದರೂ ಬಸ್ ಹತ್ತುತ್ತಲೇ ಇದ್ದು ಇದರಿಂದ ತೊಂದರೆ ಆದದ್ದು ಮಾತ್ರ ಖಾಸಗಿ ಆಟೋ, ಬಸ್, ಕ್ಯಾಬ್  (Auto, Cab and Bus) ಚಾಲಕರಿಗೆ. ಹಾಗಾಗಿ ಈ ಶಕ್ತಿ ಯೋಜನೆಯ ವಿರಿದ್ಧ ಅನೇಕ ಹೋರಾಟ ಕರೆ ಈ ಹಿಂದೆ ನೀಡಲಾಗಿದ್ದು ಇದೇ ವಿಚಾರವಾಗಿ ಹೊಸತೊಂದು ತೀರ್ಮಾನಕ್ಕೆ ಬಂದ ವಿಚಾರ ಇದೀಗ ಬೆಳಕಿಗೆ ಬಂದಿದೆ.

Advertisement

ಶಕ್ತಿ ಯೋಜನೆ (Shakti Yojana) ಬಳಿಕ ಬಸ್ ತುಂಬಾ ರಶ್ ಇದೆ ಎಂಬ ದೂರು ಬರುತ್ತಿದ್ದರೂ ಬಸ್ ಹತ್ತುವವರ ಸಂಖ್ಯೆ ಏನು ಕಮ್ಮಿಆಗಿಲ್ಲ ಹಾಗಾಗಿ ಇದು ಖಾಸಗಿ ಆದಾಯಕ್ಕೆ ಬಹಳ ಪೆಟ್ಟು ಬಿದ್ದಿದೆ. ಇದರಿಂದ ದಿನ ನಿತ್ಯ ಆದಾಯ ಪಡೆಯುವ ಆಟೋ, ಕ್ಯಾಬ್ ಹಾಗೂ ಬಸ್ಸಿನವೆಚ್ಚ ಬರಿಸಲು ಆದಾಯ ಸಾಲುತ್ತಿಲ್ಲ ಎಂಬಗೋಳು ತೋಡುತ್ತಿದ್ದು ಯೋಜನೆ ವಿರುದ್ಧ ಪ್ರತಿಭಟನೆಯ ತೀರ್ಮಾನ ಸಹ ಕೈಗೊಂಡಿದ್ದರು.

Advertisement

ಸಾರಿಗೆ ಸಚಿವರ ನಿಲುವೇನು?

Advertisement

ಪರಿಸ್ಥಿತಿ ವಿಕೋಪಾರಿತ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು BMTC ಯ RTO ಕಚೇರಿಯಲ್ಲಿ ಈ ಬಗ್ಗೆ ಖಾಸಗಿ ಚಾಲಕರು ಮಾಲಕರ ಸಂಘಟನೆ ಜೊತೆ ಸಭೆ ನಡೆಸಿದ್ದಾರೆ. ಸಮಸ್ಯೆ ಅರ್ಥವಾಗಿದೆ ಸಿಎಂ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿ ಮುಂದಿನ ದಿನದಲ್ಲಿ ಖಾಸಗಿ ದಾರರಿಗೂ ಪ್ರಯೋಜನ ಆಗುವಂತೆ ನೋಡಿಕೊಳ್ಳುವ ಭರವಸೆ ನೀಡಿದ್ದರು.

Advertisement

ಆ. 21 ರಂದು ಸಾರಿಗೆ ಸಂಸ್ಥೆ ಮತ್ತು ಖಾಸಗಿ ಆಡಳಿತ ಸಂಘಟನೆಗಳೊಂದಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸಭೆ ನಡೆಸಿದ್ದಾರೆ. ಸಂಘಟನೆಯ ಬೇಡಿಕೆಗೆ ಸರಕಾರದ ಪ್ರತಿಕ್ರಿಯೆ ಸರಿಯಾಗಿಲ್ಲ. ಅವರು ನಮ್ಮ ಬೇಡಿಕೆಗೆ ಕಿವಿಗೊಟ್ಟಿಲ್ಲ ಎಂದು ಖಾಸಗಿ ಸಂಘಟಕರು , ಸಾರಿಗೆ ಒಕ್ಕೂಟದವರು ಸರಕಾರದ ಈ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಸಂಘಟನೆಯ ಅಧ್ಯಕ್ಷ ಹಮೀದ್ ಅವರು ಈಬಗ್ಗೆ ಮಾತನಾಡಿ, ನಮ್ಮ ನಮ್ಮಲ್ಲೆ ಒಗ್ಗಟ್ಟಿನ ಸಮಸ್ಯೆ ಇದೆ. ಸಾರಿಗೆ ಸಚಿವರ ಭರವಸೆ ನಂಬೋ ವರ್ಗ ಒಂದೆಡೆ ಇನ್ನೊಂದೆಡೆ ಸಿಎಂ ಸಭೆ ಬಹಿಷ್ಕಾರ ಸಹ ನಡೆಯುತ್ತಿದೆ. ಸಿಎಂ ಅವರು ನಮ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲವಾದರೆ ಸೆಪ್ಟೆಂಬರ್ 1ರಂದು ಕರ್ನಾಟಕ ಬಂದ್ ಮಾಡಯವೆವು ಎಂದು ಅವರು ಹೇಳಿದ್ದಾರೆ.

ಸುಮಾರು 32 ಸಂಘಟನೆ ಸಿಎಂ ಸಭೆ ಬಹಿಷ್ಕಾರ ಮಾಡಿದ್ದು ಮುಂದಿನ ದಿನದಲ್ಲಿ ಶಕ್ತಿ ಯೋಜನೆಗೆ ವ್ಯಾಪಕ ವಿರೋಧ ಸಹ ವ್ಯಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಕೆಲ ವಿದ್ಯಾರ್ಥಿಗಳಿಂದ ಸಹ ಹೈ ಕೋರ್ಟ್ ನಲ್ಲಿ ಶಕ್ತಿ ಯೋಜನೆ ವಿರುದ್ಧ ಮನವಿ ಮಾಡಿದ್ದು ಎಲ್ಲ ಮಿಶ್ರವಾಗಿ ಯೋಜನೆ ಸ್ಥಗಿತವಾಗುತ್ತಾ ಎಂಬ ಅನುಮಾನಸಹ ಕಾಡುತ್ತಿದೆ.

Leave A Reply

Your email address will not be published.