Rented House: ಬಾಡಿಗೆ ಮನೆ ಮಾಡಿಕೊಂಡಿರುವವರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ.

Advertisement
ಸಾಕಷ್ಟು ಬಾರಿ ಬಾಡಿಗೆ ಮನೆ ನೀಡುವಂತಹ ಮನೆ ಮಾಲೀಕನಿಗೂ ಹಾಗೂ ಅಲ್ಲಿ ಬಾಡಿಗೆ ಬರುವಂತಹ ಬಾಡಿಗೆದಾರರಿಗೂ ಕೂಡ ಸಾಕಷ್ಟು ಸಂದರ್ಭಗಳಲ್ಲಿ ಮಾತುಕತೆ ಹಾಗೂ ಜಗಳಗಳು ನಡೆಯುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ ಎಂದು ಹೇಳಬಹುದಾಗಿದೆ. ಈ ಜಗಳವನ್ನು ನಿಲ್ಲಿಸುವ ಕಾರಣಕ್ಕಾಗಿ ಈಗ ಬಾಡಿಗೆ ಕಾನೂನು ನಿಯಮವನ್ನು (Rental Agreement Rules) 2021 ರಲ್ಲಿ ತರಲಾಗಿದ್ದು ಅದರಲ್ಲಿ ಬಾಡಿಗೆದಾರರಿಗೆ ಕೂಡ ಕೆಲವೊಂದು ಅಧಿಕಾರಗಳನ್ನು ನೀಡಲಾಗಿದೆ. ಹಾಗಿದ್ರೆ ಬನ್ನಿ ಆ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಬಾಡಿಗೆ ಮನೆಯ ವಿಚಾರದಲ್ಲಿ ಪ್ರತಿಯೊಂದು ವರ್ಗದ ಜನರಿಗೂ ಕೂಡ ಸರಿಯಾದ ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ನಿಯಮವನ್ನು ಜಾರಿಗೆ ತರಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಹಾಗಿದ್ರೆ ಬನ್ನಿ ಬಾಡಿಗೆ ಮನೆಯನ್ನು ಪಡೆದುಕೊಂಡ ಸಂದರ್ಭದಲ್ಲಿ ಬಾಡಿಗೆದಾರರಿಗೆ ಸಿಗುವಂತಹ ಆ ಪ್ರಮುಖ ಅಧಿಕಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನೀವು ಕೂಡ ಬಾಡಿಗೆ ಮನೆ (Rented House) ಯಲ್ಲಿ ಇದ್ದರೆ ಖಂಡಿತವಾಗಿ ಈ ನಿಯಮವನ್ನು ಚಾಚು ತಪ್ಪದೆ ಪಾಲಿಸುವ ಮೂಲಕ ನೀವು ನಿಮ್ಮ ಅಧಿಕಾರವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಅದರ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಮೊದಲನೇದಾಗಿ ಕರೆಂಟ್ ಅಗ್ರಿಮೆಂಟ್ (Rental Agreement). ಬಾಡಿಗೆ ಕರಾರು ಪತ್ರವನ್ನು ಕಾನೂನು ರೂಪದಲ್ಲಿ ಸಿದ್ಧಪಡಿಸುವ ಮೂಲಕ ಎರಡು ವರ್ಗದ ಜನರಿಗೂ ಕೂಡ ತಮ್ಮ ಅಧಿಕಾರ ಏನು ಎಂಬುದನ್ನು ಅಧಿಕೃತವಾಗಿ ಅರ್ಥಮಾಡಿಕೊಳ್ಳಬಹುದು.
ಎರಡನೇದಾಗಿ ಅಡ್ವಾನ್ಸ್ ಹಣದ ವಿಚಾರ. ಬಾಡಿಗೆ ಮನೆ (Rented House) ಯಲ್ಲಿ ವಾಸಿಸುವವರಿಗೆ ಎರಡು ತಿಂಗಳ ಅಡ್ವಾನ್ಸ್ ಹಣವನ್ನು ಕಟ್ಟಿದರೆ ಸಾಕು. ಕಮರ್ಷಿಯಲ್ ಅಂದರೆ ಅಂಗಡಿ ಮುಂಗಟ್ಟುಗಳ ಕಟ್ಟಡವನ್ನು ಬಾಡಿಗೆ ಪಡೆದುಕೊಳ್ಳುವವರು ಆರು ತಿಂಗಳ ಅಡ್ವಾನ್ಸ್ ಹಣವನ್ನು ಹೆಚ್ಚೆಂದರೆ ಕಟ್ಟ ಬೇಕಾಗಿರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಇಲ್ಲಿ ಬಾಡಿಗೆ ನೀಡುವಂತಹ ಮನೆಯ ಮಾಳಿಕ ಕೆಲವೊಂದು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಅದೇನೆಂದರೆ, ಬಾಡಿಗೆ ಮನೆಗೆ ಕರೆಂಟ್ ಹಾಗೂ ನೀರಿನ ಸಪ್ಲೈ ಸರಿಯಾಗಿ ತಲುಪಿಸುವುದು. ಇನ್ನು ಇಂತಹ ಮನೆ ಬಾಡಿಗೆಯ ವಿವಾದಗಳನ್ನು ಪರಿಹರಿಸುವುದಕ್ಕಂತಾನೆ ಪ್ರತ್ಯೇಕವಾದ ನ್ಯಾಯಾಲಯವನ್ನು ಸ್ಥಾಪಿಸಲಾಗಿದ್ದು ನೀವು ಅಲ್ಲಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದೇ ಸಂದರ್ಭದಲ್ಲಿ ಮನೆಯ ಮಾಲೀಕನ ಅಧಿಕಾರವನ್ನು ಕೂಡ ತಿಳಿಯೋಣ ಬನ್ನಿ.
ಬಾಡಿಗೆ ಮನೆಯ ಮಾಲೀಕನ ಅಧಿಕಾರದ (Rental House Owner’s Rights) ಬಗ್ಗೆ ಮಾತನಾಡುವುದಾದರೆ, ಬಾಡಿಗೆ ಮನೆಗೆ ಶಿಫ್ಟ್ ಆಗುವುದಕ್ಕಿಂತ ಮುಂಚೆ ಬಾಡಿಗೆದಾರ 24 ಗಂಟೆಗಳ ಮುಂಚೆನೇ ಈ ವಿಚಾರದ ಕುರಿತಂತೆ ಮನೆಯ ಮಾಲೀಕನಿಗೆ ಹೇಳಬೇಕಾಗುತ್ತದೆ ಇದರಿಂದಾಗಿ ಆತ ಯಾವುದೇ ಕೊರತೆಗಳಿಲ್ಲದೆ ಬಾಡಿಗೆ ಮನೆಯನ್ನು ಬಾಡಿಗೆದಾರರಿಗೆ ತಯಾರು ಮಾಡಿಕೊಡಬಹುದು. ಯಾವುದೇ ರೀತಿಯ ವಿವಾದ ಆದರೂ ಕೂಡ ಮನೆಯ ಮಾಲೀಕ ನೀರು ಅಥವಾ ವಿದ್ಯುತ್ ಪೂರೈಕೆಯನ್ನು ನಿಲ್ಲಿಸುವ ಹಾಗೆ ಇರುವುದಿಲ್ಲ. ಒಟ್ಟಾರೆಯಾಗಿ ನೋಡುವುದಾದರೆ ಈ ನಿಯಮಗಳ ಮೂಲಕ ಬಾಡಿಗೆದಾರರಿಗೆ ಸಾಕಷ್ಟು ಲಾಭಗಳು ಉಂಟಾಗುತ್ತಿವೆ ಎಂದು ಹೇಳಬಹುದಾಗಿದೆ.