ಇಂದು ಅಡುಗೆ ಮಾಡಲು ಒಲೆ ಉರಿಸಿ ಕಷ್ಟ ಪಡೊ ಜನರು ತುಂಬಾ ಕಡಿಮೆ ಇದ್ದವರೆಲ್ಲರೂ ಗ್ಯಾಸ್ ಖರ್ಚುಮಾಡೇ ಅಡುಗೆ ಮಾಡುತ್ತಾರೆ. ಜನರ ಬಳಕೆ ಪ್ರಮಾಣ ಅಧಿಕವಾಗುತ್ತಾ ಹೋದಂತೆ ಕ್ರಮೇಣ ಗ್ಯಾಸ್ ಸಿಲಿಂಡರ್ (Gas Cylinder) ಬಳಕೆ ಕೂಡ ಹೆಚ್ಚಾಗಿದೆ. ಹಾಗಾಗಿ ಪರ್ಯಾಯ ಮಾರ್ಗ ಹುಡುಕುವ ವರ್ಗ ಒಂದೆಡೆಯಾದರೆ ಇದ್ದ ಸಿಲಿಂಡರ್ ಬೆಲೆ ತಗ್ಗಬಹುದೇ ಎಂದು ಕಾಯುವ ವರ್ಗ ಇನ್ನೊಂದೆಡೆ.
LPG ಸಿಲಿಂಡರ್ ಬೆಲೆ (Gas Cylinder Price) ಕಾಲ ಕಾಲಕ್ಕೆ ಬದಲಾಗುತ್ತಿದ್ದು ಬಹುತೇಕ ಎಲ್ಲ ಸಿಲಿಂಡರ್ ಬುಕ್ ಮಾಡಿ ಬಳಿಕ ಪಡೆಯುವಂತವಾಗಿದೆ. ಸಿಲಿಂಡರ್ ಬುಕ್ ಮಾಡುವ ಮೊದಲು ಈ ಒಂದು ಪ್ರಕ್ರಿಯೆ ನೀವು ಫಾಲೋ ಮಾಡಿದರೆ ನಿಮಗೆ ಸ್ವಲ್ಪ ಅಗ್ಗದ ದರದಲ್ಲು ಗ್ಯಾಸ್ ಸಿಲಿಂಡರ್ ಲಭ್ಯವಾಗಲಿದೆ. ಈಗ ಡಿಜಿಟಲ್ ಬುಕ್ಕಿಂಗ್ ತುಂಬಾ ಮಾನ್ಯತೆ ಪಡೆಯುತ್ತಿದ್ದು ಈ ನೆಲೆಯಲ್ಲು ಸಾಗುವುದು ಈಗ ಅವಶ್ಯವಾಗಿದೆ.
ಆನ್ಲೈನ್ ಬುಕ್ಕಿಂಗ್
ಇಂದು ಆನ್ಲೈನ್ ವ್ಯಾಪಾರ ವ್ಯವಹಾರ ತುಂಬಾ ಹೇರಳವಾಗಿದೆ. ಅಗತ್ಯ ಸಾಮಾಗ್ರಿ,ಬಟ್ಟೆ , ದಿನಸಿ ಸಾಮಾಗ್ರಿಯಿಂದ ಎಲ್ಲವೂ ಈಗ ಆನ್ಲೈನ್ ವ್ಯವಸ್ಥೆ ಅವಲಂಬಿಸಲಾಗಿದೆ. ಅದೇ ರೀತಿ ಈಗ ಗ್ಯಾಸ್ ಬುಕ್ಕಿಂಗ್ (Booking) ಕೂಡ ಆನ್ಲೈನ್ (Online) ಮೂಲಕ ಮಾಡಲಾಗುವ ಕಾರಣ ದೊಡ್ಡ ಮಟ್ಟದ ಪ್ರಯೋಜನ ದೊರೆಯಲಿದೆ. ಆನ್ಲೈನ್ ನಲ್ಲಿ ಮನೆಯಲ್ಲೇ ಕೂತು ಬುಕ್ಕಿಂಗ್ ಮಾಡಿ ಹಣ ಸಂದಾಯ ಸಹ ಮಾಡಬಹುದು.
ಆನ್ಲೈನ್ ಬುಕ್ ಮಾಡುವುದರಿಂದ ಸುರಕ್ಷಿತವಾಗಿ ಇರಲಿದೆ. ಏಜೆನ್ಸಿ ಹೋಗುವ ಸಂಪರ್ಕ ಮಾಡುವ ಕಿರಿ ಕಿರಿ ಕೂಡ ಇರಲಾರದು. ಬುಕ್ಕಿಂಗ್ ಮಾಡುವುದರಿಂದ ಹೆಚ್ಚುವರಿ ಶುಲ್ಕ ಕೂಡ ಇಲ್ಲ. ಇದಕ್ಕೆ ಇಂತಿಷ್ಟೇ ಸಮಯ ನಿಗಧಿ ಇಲ್ಲದ ಕಾರಣ ಯಾವಾಗ ಬೇಕಾದರೂ ಬುಕ್ ಮಾಡಬಹುದು. ಸುಲಭವಾಗಿ ಪಾವತಿ ಮಾಡಬಹುದಾಗಿದ್ದು ಡೆಲಿವರಿ ಆಗುವ ದಿನಾಂಕ ಕೂಡ ಮೊದಲೇ ತಿಳಿಯಲಿದೆ.
ಹಣ ಮರುಪಾವತಿ:
ಇಂದು ಆನ್ಲೈನ್ ವ್ಯವಸ್ಥೆ ಇರುವ ಅನೇಕ ಆ್ಯಪ್ ಗಳು ಗ್ಯಾಸ್ ಸಿಲಿಂಡರ್ (Gas Cylinder) ಬುಕ್ಕಿಂಗ್ ಬಗ್ಗೆ ಸಹ ಅಪ್ಡೇಟ್ ನೀಡುತ್ತದೆ. ಈ ಮೂಲಕ ಆನ್ಲೈನ್ ಬುಕ್ಕಿಂಗ್ ಮಾಡಿದಾಗ ರಿಯಾಯಿತಿ ಮತ್ತು ಕ್ಯಾಶ್ ಬ್ಯಾಕ್ ಆಫರ್ ಕೂಡ ಇರಲಿದೆ. ಕ್ಯಾಶ್ ಬ್ಯಾಕ್ ಆಫರ್ ಸಿಕ್ಕಾಗ ನಿಮಗೆ ಹಣ ಮರುಪಾವತಿ ಸಹ ಆಗಿ ಲಾಭ ಆಗುವ ಪ್ರಮಾಣ ಅಧಿಕವಿದೆ. ಆನ್ಲೈನ್ ಬುಕ್ ಮಾಡುವುದರಿಂದ ಕೆಲಸ ಸುಲಭ ಮತ್ತಿ ನಿರರ್ಗಳ ವಾಗಲಿದೆ.