Karnataka Times
Trending Stories, Viral News, Gossips & Everything in Kannada

Ration Card: ಕಾರಿದ್ದವರ ರೇಷನ್ ಕಾರ್ಡ್ ಬ್ಯಾನ್ ಬಗ್ಗೆ ಸ್ಪಷ್ಟನೆ ಕೊಟ್ಟ ಸರ್ಕಾರ

Advertisement

ಇತ್ತೀಚಿನ ದಿನದಲ್ಲಿ ಒಂದು ವಿಚಾರ ದೊಡ್ಡ ಮಟ್ಟಕ್ಕೆ ಸುದ್ದಿಯಾಗಿತ್ತು. ಬಿಪಿಎಲ್ (BPL) ಅಕ್ರಮ ವಾಗುತ್ತಿರುವ ಬಗ್ಗೆ ಎಚೆತ್ತುಕೊಂಡ ರಾಜ್ಯ ಸರಕಾರವು ಅಕ್ರಮ, ಅನರ್ಹರ ಜಾಲ ಪತ್ತೆ ಹಚ್ಚಲು ಅನೇಕ ಕ್ರಮ ವಿಧಾನಗಳನ್ನು ಅನುಸರಿಸಲು ಮುಂದಾಗಿದೆ. ಅಂತಹ ವಿಧಾನದಲ್ಲಿ ವೈಟ್ ಬೋರ್ಡ್ ಕಾರು ಇರೊರಿಗೆ ಬಿಪಿಎಲ್ ಕಾರ್ಡ್ (BPL Ration Card) ಶೀಘ್ರ ರದ್ದು ಎಂದು ಹೇಳಲಾಗಿತ್ತು ಈ ಮೂಲಕ ಸೆಕೆಂಡ್ ಹ್ಯಾಂಡ್ (Second Hand Old Car) ಹಳೆ ಕಾರು ಖರೀದಿ ಮಾಡಿದ್ದವರಿಗೂ ಈ ಕಷ್ಟ ಬಂದೊದಗಿತ್ತು. ಇದೀಗ ಈ ಬಗ್ಗೆ ಸ್ಪಷ್ಟ ನಿಲುವನ್ನು ಸರಕಾರ ಮತ್ತೊಮ್ಮೆ ಖಾತರಿ ಪಡಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೀವನ ಆಧಾರಕ್ಕೆ ಟ್ಯಾಕ್ಸಿ, ಕ್ಯಾಬ್ ಮಾಡಿದ್ದವರ ಹೊರತು ಬಿಪಿಎಲ್ ಕಾರ್ಡ್ (BPL Ration Card) ದಾರರು ಐಷರಾಮಿ ಕಾರು ಹೊಂದಿದ್ದು ತಿಳಿದರೆ ಅಂತಹ ಕಾರ್ಡ್ ರದ್ದು ಮಾಡುವುದು ಎಂದು ಈ ಹಿಂದೆ ಮಾಧ್ಯಮದ ಮುಂದೆ ತಿಳಿಸಿದ್ದ ಸರಕಾರ ಜನರ ಕೆಂಗಣಿಗೆ ಗುರಿಯಾಗಿದೆ. ಈ ಮೂಲಕ ಎಲ್ಲರಂತೆ ಸಾಮಾನ್ಯರಿಗೂ ತಾವು ಬೆಳೆಯಬೇಕು ಎಂಬ ಆಸೆ ಇರುತ್ತದೆ ಹಾಗಾಗಿ ಕಾರು ಐಷರಾಮಿ ಜೀವನವನ್ನು ಸಾಲ ಮಾಡಿ ಆದರೂ ಮಾಡುತ್ತಾರೆ. ಇದಕ್ಕೂ ಪಡಿತರ ಚೀಟಿಗೂ ಸಂಬಂಧ ಯಾಕೆ ಅಭಿವೃದ್ಧಿ ಹೊಂದಬೇಕು ಎಂದು ಹೇಳಿ ಹೊಂದುವ ಅಂಶಗಳನ್ನೇ ತಪ್ಪು ಎಂದರೆ ಎಲ್ಲ ಇದ್ದಾಗೆ ಇರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಕ್ರಮದ ವಿರುದ್ಧ ವ್ಯಾಪಕ ವಿರೋಧ ಮಾಡುತ್ತಿದ್ದಾರೆ.

ಸದ್ಯಕ್ಕೆ ಕ್ರಮ ಇಲ್ಲ:

ವೈಟ್ ಬೋರ್ಡ್ ಕಾರು ರದ್ಧತಿ ಬಗ್ಗೆ ಆಹಾರ ಸಚಿವ ಕೆ. ಎಚ್. ಮುನಿಯಪ್ಪ (Food Minister K H Muniyappa) ಅವರಲ್ಲಿ ನೇರವಾಗಿ ಮಾಧ್ಯಮದವರು ಪ್ರಶ್ನೆ ಮಾಡಿದ್ದು ಬಿಪಿಎಲ್ ಕಾರ್ಡ್ (BPL Ration Card) ಹೊಂದಿರುವ ಅನೇಕರು ಸಣ್ಣ ಕಾರನ್ನೆ ಬಳಸಿರುತ್ತಾರೆ. ಕೆಲವರು ಲೋನ್ ಎಲ್ಲ ಮಾಡಿದ್ದಾರೆ ಹಾಗಾಗಿ ಈ ವಿಚಾರದ ಬಗ್ಗೆ ಈಗಲೇ ಸರಕಾರದ ನಿಲುವು ಬರಲು ಸಾಧ್ಯವಿಲ್ಲ. ಕಾರು ಇಟ್ಟುಕೊಂಡವರ ಬಿಪಿಎಲ್ ಕಾರ್ಡ್ ರದ್ದು ಅಥವಾ ಬೇಡ ಎಂಬ ಬಗ್ಗೆ ಇನ್ನಷ್ಟು ಚರ್ಚೆ ಆಗಬೇಕಿದೆ. ಸದ್ಯಕ್ಕೆ ಈ ಕುರಿತು ಕ್ರಮ ಇಲ್ಲ. ಇದು ನಮ್ಮ ಆಡಳಿತ ನಿರ್ಧಾರ ಅಲ್ಲಿ ಈ ಹಿಂದೆ ಇದ್ದ ಬಿಜೆಪಿಯ ಪ್ರಸ್ತಾವನೆ ಯಷ್ಟೇ ಹಾಗಾಗಿ ನಾವು ಕಾರ್ಡ್ (Ration Card) ಇದ್ದು ಕಾರು ಇರುವವರು ಅವರ ಆರ್ಥಿಕ ಸ್ಥಿತಿ ಎಲ್ಲ ಕಂಡು ಸೂಕ್ತ ನಿರ್ಧಾರ ಬರುತ್ತೇವೆ ಎಂದು ಅವರು ಹೇಳಿದ್ದಾರೆ.

ಅನ್ನಭಾಗ್ಯ ಶೀಘ್ರ ಪೂರ್ಣ:

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿ ಲಭ್ಯ ಇಲ್ಲದ ಕಾರಣ ಐದು ಕೆ.ಜಿ. ಅಕ್ಕಿಗೆ ಬದಲಿಗೆ ಹಣವನ್ನು ಆಯಾ ಪಡಿತರ ಖಾತೆಗೆ ಹಾಕಲಾಗುತ್ತಿತ್ತು ಹಾಗಾಗಿ ಅಕ್ಕಿಯ ಹುಡುಕಾಟ ಆರಂಭ ಆಗಿದೆ. ನೆರೆಯ ಆಂಧ್ರಪ್ರದೇಶದ ಹಾಗೂ ತೆಲಂಗಾಣಕ್ಕೂ ಹೋಗಿ ಬಂದಿದ್ದೇವೆ. ಅಕ್ಕಿ ದರ ವಿಚಾರಣೆ ಚರ್ಚೆ ಆಗುತ್ತಿದ್ದು ಶೀಘ್ರ ತೀರ್ಮಾನ ಸಹ ಬರಲಿದೆ. ಹಾಗಾಗಿ ಇನ್ನು ಮುಂದಿನ ದಿನದಲ್ಲಿ ಅಕ್ಕಿ ಸಂಪೂರ್ಣ 10kg ನೀಡುವ ನಮ್ಮ ಭರವಸೆ ನಾವು ಉಳಿಸಿಕೊಳ್ಳುವೆವು ಎಂದು ಅವರು ಹೇಳಿದ್ದಾರೆ.

ಪಡಿತರ ಕಾರ್ಡ್ ವಿತರಣೆ:

ಈ ಹಿಂದೆ ಆಡಳಿತದಲ್ಲಿದ್ದ ಬಿಜೆಪಿ ಅವಧಿಯಲ್ಲಿ ಬಿಪಿಎಲ್ ಕಾರ್ಡ್ (BPL Card) ಗೆ 3 ಲಕ್ಷಕ್ಕೂ ಅಧಿಕ ಅರ್ಜಿ ಬಂದಿದ್ದು ಅದರ ಪ್ರಕ್ರಿಯೆ ಬಾಕಿ ಇತ್ತು ಇದೀಗ ಹೊಸದಾಗಿ ನಮ್ಮ ಆಡಳಿತ ಅವಧಿಯಲ್ಲಿಯೂ ಅರ್ಜಿ ಸಲ್ಲಿಕೆ , ತಿದ್ದುಪಡಿ ಎಲ್ಲ ಮನವಿ ಬಂದಿದ್ದು ಎಲ್ಲ ಅರ್ಹರೆನಿಸಿದವರು ಈ ಬಗ್ಗೆ ಚಿಂತಿಸಬೇಡಿ ಅರ್ಹರಿಗೆ ಖಂಡಿತಾ ಬಿಪಿಎಲ್ ಮಾನ್ಯತೆ ಇದ್ದೇ ಇದೆ ಎಂದಿದ್ದಾರೆ.

Leave A Reply

Your email address will not be published.