Karnataka Times
Trending Stories, Viral News, Gossips & Everything in Kannada

Guarantee Scheme: ಗ್ಯಾರಂಟಿ ಯೋಜನೆ ಬಗ್ಗೆ ಇನ್ನೊಂದು ಸಿಹಿಸುದ್ದಿ ಕೊಟ್ಟ ಸರ್ಕಾರ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಈಗ ತುಂಬಾ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಈ ಹಿಂದೆ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದ ಪಂಚ ಯೋಜನೆಗಳು ತುಂಬಾ ಫೇಮಸ್ ಆಗಿದೆ. ಈ ಮೂಲಕ ನುಡಿದಂತೆ ನಡೆದ ಸರಕಾರ ಎಂಬ ಹೆಗ್ಗಳಿಕೆ ಕೂಡ ಇದರ ಬೆನ್ನಲ್ಲೆ ಸಿಕ್ಕುತ್ತಿದೆ ಎಂದು ಹೇಳಬಹುದು. ಈ ಮೂಲಕ ನಿರುದ್ಯೋಗ (Unemployed) ಯುವಕ ಯುವತಿಯರಿಗೂ ಈಗ ಶುಭ ಸುದ್ದಿಯೊಂದು ಘೋಷಣೆಯ ಹಂತದಲ್ಲಿ ಇದೆ.

Advertisement

ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣ ಮಾಡಿದ್ದು ಬಳಿಕ ಗೃಹಜ್ಯೋತಿ ಮೂಲಕ ಸರಾಸರಿ ಆಧಾರ ಮೇಲೆ ಇನ್ನೂರು ಯುನಿಟ್ ಉಚಿತ ಕರೆಂಟ್ ಸಹ ಸಿಗುತ್ತಿದೆ. ಗೃಹಲಕ್ಷ್ಮೀ (Gruha Lakshmi) ಯೋಜನೆ ಅರ್ಜಿ ಪರಿಶೀಲನೆಯಾಗಿ ಇನ್ನೆನು ಇದೇ ತಿಂಗಳ ಕೊನೆಗೆ ಎರಡು ಸಾವಿರ ಬರಲಿದೆ ಅದೇ ರೀತಿ ಅನ್ನಭಾಗ್ಯ (Anna Baghya) ಯೋಜನೆ ಮೂಲಕ ಹಣ ಮಂಜೂರು ಆಗುತ್ತಿದೆ. ಇನ್ನುಳಿದದ್ದು ಒಂದೇ ಯೋಜನೆ ಎಂದರೆ ಅದು ಯುವನಿಧಿ ಈಗ ಅದಕ್ಕೂ ಕಾಲ ಸನ್ನಿಹಿತವಾಗಿದೆ.

Advertisement

ಯಾವಾಗ ಬರುತ್ತೆ

Advertisement

ನಿರುದ್ಯೋಗ ಯುವಕ ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆ (Guarantee Scheme) ಯಾದ ಯುವನಿಧಿ ಬರಲು ಈಗ ಕಾಲ ಬಂದಿದೆ. ಡಿಪ್ಲೋಮಾ (Diploma and Degree) , ಪದವೀದರರಿಗೆ ಪೂರ್ಣ ಆದವರಿಗೆ ಈ ಸೌಲಭ್ಯ ಲಾಭ ಸಿಗಲಿದೆ. ಪದವೀಧರರಿಗೆ ಮೂರು (3000) ಸಾವಿರ , ಡಿಪ್ಲೋಮಾ ಆದವರಿಗೆ 1500 ರೂ. ಮಾಸಿಕ ನೀಡಲಾಗುವುದು. ಡಿಸೆಂಬರ್ ಕೊನೆ ವಾರದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ಸರಕಾರದಿಂದಲೇ ಅಧಿಕೃತ ಮಾಹಿತಿ ಬಂದಿದೆ.

Advertisement

ಡಿಸಿಎಂ ಏನಂದ್ರ?

ಆಗಸ್ಟ್ 30ರಂದು ಗೃಹಲಕ್ಷ್ಮೀ ಬರುವುದು ಅದಾದ ಬಳಿಕ ಇನ್ನೊಂದು ಗ್ಯಾರೆಂಟಿ ಆದ ಯುವನಿಧಿ ಯನ್ನು ಡಿಸೆಂಬರ್ ತಿಂಗಳ ಕೊನೆವಾರ ಜಾರಿಗೆ ಮಾಡುವೆವು. ಈ ಮೂಲಕ ನುಡಿದಂತೆ ನಡೆಯುವೆವು ಅರ್ಹ ರೆನಿಸಿದ ನಿರುದ್ಯೋಗಿಗಳಿಗೆ ಅರ್ಹತೆ ಆಧಾರದ ಮೇಲೆ ಹಣ ಮಂಜೂರು ಆಗಲಿದೆ.ಅದರ ಅರ್ಜಿ ಸಲ್ಲಿಕೆ ಇತರ ವಿಚಾರ ಇನ್ನು ಕೆಲ ದಿನದಲ್ಲಿ ತಿಳಿಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (DCM DK Shivakumar) ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಪಂಚ ಯೋಜನೆಯಲ್ಲಿ ನಾಲ್ಕು ಸಹ ಯಶಸ್ವಿಯಾಗಿ ಎಲ್ಲ ಮಹಿಳೆಯರಿಗೆ, ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲ ಆಗಿದೆ ಮುಂದಿನ ದಿನದಲ್ಲಿ ನಿರುದ್ಯೋಗ ಯುವಕ ಯುವತಿಯರಿಗೆ ಸಹ ಸಹಾಯಧನ ಲಭ್ಯ ಆಗಲಿದ್ದು ಆರ್ಥಿಕ ನೆರವು ಸಿಕ್ಕಂತಾಗುವುದು.

Leave A Reply

Your email address will not be published.