ಪ್ರತಿ ವ್ಯಕ್ತಿಗೂ ಜೀವಿಸುವ ಸ್ವಾತಂತ್ರ್ಯ ಇದೆ. ಅದೇ ರೀತಿ ಜೀವನದುದ್ದಕ್ಕೂ ಎಲ್ಲಿ ಇರಬೇಕು ತನ್ನ ಕರ್ತವ್ಯ ಎಲ್ಲ ನಿಭಾಯಿಸುವುದು ಕೂಡ ಅಷ್ಟೇ ಮುಖ್ಯ. ಒಬ್ಬ ವ್ಯಕ್ತಿ ಮದುವೆಯಾದ ಬಳಿಕ ಪತ್ನಿಯೊಂದಿಗೆ ತನ್ನ ಮನೆಯಲ್ಲಿ ವಾಸವಾಗುವುದು ಲೋಕ ರೂಢಿ ಆದರೆ ಈಗ ಕಾಲ ಬದಲಾಗುತ್ತಿದೆ.ಗಂಡ ಹೆಂಡತಿ ಪ್ರತ್ಯೇಕ ಅಥವಾ ಮನೆ ಅಳಿಯನಾಗಲು ಬೇಡಿಕೆ ಬಹಳ ಹೆಚ್ಚಿದೆ. ಈ ನಿಟ್ಟಿನಲ್ಲಿ ಮಹತ್ವದ ತೀರ್ಪೊಂದು ಈಗ ಹೊರಬಂದಿದೆ.
ಒಬ್ಬ ವ್ಯಕ್ತಿ ತನ್ನ ಕುಟುಂಬ ಬಿಟ್ಟು ಮನೆ ಅಳಿಯ ನಾಗಬೇಕೆಂಬ ಈ ಧೋರಣೆ ಸರಿ ಅಥವಾ ತಪ್ಪು ಎಂಬ ವಿಚಾರ ಮೊದಲಿಂದಲು ಇದ್ದು ಯಾಕೆ ಹೆಣ್ಣಿಗೆ ಮಾತ್ರ ತನ್ನ ತವರುಮನೆ ಬಿಡಬೇಕು ಎಂಬ ಅಂಶವು ಮುನ್ನೆಲೆಗೆ ಬಂದಿದೆ. ಸದ್ಯ ಇಂತಹದ್ದೆ ಒಂದು ಅಪರೂಪದ ಪ್ರಕರಣ ಕೋರ್ಟ್ (High Court) ಮೊರೆ ಹೋಗಿದ್ದು ಈ ಬಗ್ಗೆ ಕೋರ್ಟಿನಿಂದಲೇ ಸ್ಪಷ್ಟ ತೀರ್ಪು ಸಿಕ್ಕಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ದಿಲ್ಲಿ ಹೈ ಕೋರ್ಟ್ ನಲ್ಲಿ ತೀರ್ಪು:
ದಿಲ್ಲಿ ಹೈ ಕೋರ್ಟ್ (Delhi High Court) ನಲ್ಲಿ ಒಂದು ಅಪರೂಪದ ಕೇಸ್ ಬಗ್ಗೆ ತೀರ್ಪು ಹೊರಬಿದ್ದಿದೆ. 2001ರಲ್ಲಿ ನರೇಂದ್ರ ವಿ.ಕೆ., ಮೀನಾ ಅವರು ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದರು ಬಳಿಕ ದಂಪತಿ ನಡುವೆ ವೈಮನಸ್ಸು ಬಂದಿದೆ ಹಾಗಾಗಿ ಆಕೆ ಗುಜರಾತ್ ನಿಂದ ತನ್ನ ತವರೂರು ದಿಲ್ಲಿ(ದೆಹಲಿ) (Delhi) ಗೆ ಹೋಗಿದ್ದಾಳೆ. 2002ರಲ್ಲಿ ಆಕೆ ಪೋಷಕರೊಂದಿಗೆ ಇದ್ದ ಕಾರಣ ಪತಿ ಆಕೆಯ ಮನವೊಲಿಸಿ ಮನೆಗೆ ಕರೆತರಲು ತುಂಬಾ ಪ್ರಯತ್ನ ಪಟ್ಟಿದ್ದಾರೆ ಆದರೆ ಆಕೆ ಬರಲು ಒಪ್ಪಲಿಲ್ಲ ಮತ್ತು ಗುಜರಾತ್ ನಿಂದ ದಿಲ್ಲಿಯ ತನ್ನ ಮನೆಗೆ ಬಂದು ಮನೆ ಅಳಿಯನಾದರೆ ಮಾತ್ರ ಒಟ್ಟಿಗೆ ಸಂಸಾರ ಮಾಡುವುದಾಗಿ ಈ ಹಿಂದೆ ತಿಳಿಸಿದ್ದಾರೆ.ಆದರೆ ಪತಿ ನಿರಾಕರಿಸಿದ್ದಾರೆ ಎಂದು ದಿಲ್ಲಿ ಹೈಕೋರ್ಟ್ (High Court) ಮನವಿಯಲ್ಲಿ ತಿಳಿಸಿದ್ದಾರೆ.
2002 ರಿಂದ ಅವರ ಜೋಡಿ ಬೇರ್ಪಟ್ಟು ಜೀವನ ನಡೆಸುತ್ತಿದ್ದು ಬಳಿಕ ವಿಚ್ಛೇದನಕ್ಕೆ (Divorce) ಮನವಿ ಮಾಡಿದೆ. ಈ ಹಿಂದೆ ಒಮ್ಮೆ ಸಂದಾನ ಮಾಡಿ ಕಳುಹಿಸಿದ್ದರು ಅವರು ಒಟ್ಟಿಗೆ ಇರಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ನಡುವೆ ಮನಸ್ಸು ಹಾಗೂ ಅಂತರ ಹೆಚ್ಚಾಗಿದೆ. ಮಹಿಳೆ ಒಟ್ಟಾಗಿ ಇರಬೇಕಾದರೆ ಮನೆ ಅಳಿಯನಾಗಬೇಕೆಂಬ ಮೇಲ್ಮನವಿ ಸರಿಯಲ್ಲ. ಆತನಿಗೂ ಕುಟುಂಬ ಜವಾಬ್ದಾರಿ ಇರುವುದು ಅದಕ್ಕೂ ಮಾನ್ಯತೆ ನೀಡಬೇಕು ಎಂದು ತೀರ್ಪು ತಿಳಿಸಿತ್ತು.
ಆಗ ಕೋರ್ಟ್ ಈ ಬಗ್ಗೆ 2016 ರಲ್ಲಿ ತೀರ್ಪು ನೀಡಿದೆ. ಈ ಮೂಲಕ ಮಗನನ್ನು ಮನೆಯಿಂದ ಬೇರ್ಪಟ್ಟು ತನ್ನ ಮನೆ ಅಳಿಯನಾಗು ಎನ್ನುವ ಧೋರಣೆ ಕ್ರೌರ್ಯಕ್ಕೆ ಸಮನಾಗಿರುವುದು. ಮದುವೆ ಎಂದ ಮೇಲೆ ಪರಸ್ಪರ ಗೌರವ, ಪ್ರೀತಿ ಇರಬೇಕು. ಅದೇ ಇಲ್ಲದ ಸಂಬಂಧ ಕೋರ್ಟು ಮೂಲಕ ಒಟ್ಟು ಗೂಡಿಸುವುದು ಕಷ್ಟವೇ ಎಂದು ಕೋರ್ಟು ಮೂಲಕ ತಿಳಿಸಲಾಗಿದೆ.