Transport Department: ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್! ಎಲ್ಲಾ ನಗರಕ್ಕೂ ವಿಸ್ತರಣೆ

Advertisement
ಝೋಮ್ಯಾಟೋ, ಸ್ವಿಗ್ಗಿ ಮೊದಲಾದ ಆಪ್ ಗಳ ಮೂಲಕ ಫುಡ್ ಡೆಲಿವರಿ ಮಾಡುವವರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. ಇಂದು ನಾವು ಕುಳಿತಲ್ಲಿಂದಲೇ ಫುಡ್ ಆರ್ಡರ್ ಮಾಡಬಹುದು. ಕೆಲವೇ ನಿಮಿಷಗಳಲ್ಲಿ ಬೈಕ್ ಮೇಲೆ ನಿಮ್ಮ ಫುಡ್ ಡೆಲಿವರಿ ಆಗುತ್ತೆ. ಆದರೆ ಈಗ ಫುಡ್ ಡೆಲಿವರಿ ಬೈಕ್ ಗಳೂ ಕೇವಲ ಆಹಾರ ಸಪ್ಲೈ ಮಾಡೋದು ಮಾತ್ರವಲ್ಲ, ಫುಡ್ ಡೆಲಿವರಿ ಹೆಸರಿನಲ್ಲಿ ಟ್ಯಾಕ್ಸಿ ಕೆಲಸವನ್ನೂ ಕೂಡ ಮಾಡುತ್ತಿವೆ ಎಂದು ಜಂಟಿ ಸಾರಿಗೆ ಆಯುಕ್ತರು ತಿಳಿಸಿದ್ದಾರೆ.
ನಗರದಲ್ಲಿ ಅಕ್ರಮವಾಗಿ ಚಲಿಸುತ್ತಿರುವ ಬೈಕ್ ಗಳನ್ನು ಕಂಡುಹಿಡಿದು ಅದರ ಬಗ್ಗೆ ಮಾಹಿತಿ ನೀಡುವಂತೆ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಂಟಿ ಸಾರಿಗೆ ಆಯುಕ್ತರು ಆದೇಶ ನೀಡಿದ್ದಾರೆ. ಈ ಮೂಲಕ ಫುಡ್ ಡೆಲಿವರಿ ಹೆಸರಿನಲ್ಲಿ ಅಕ್ರಮವಾಗಿ ಚಲಿಸುತ್ತಿರುವ ಬೈಕಗಳ ತಡೆ ಹಿಡಿಯುವಿಕೆಗೆ ಪ್ರಯತ್ನಿಸಲಾಗುತ್ತಿದೆ.
ನಗರದಲ್ಲಿ ಫುಡ್ ಡೆಲಿವರಿ ಹೆಸರಿನಲ್ಲಿ ಅಕ್ರಮವಾಗಿ ಬೈಕಗಳನ್ನು ಟ್ಯಾಕ್ಸಿ ಆಗಿ ಬಳಸಿಕೊಳ್ಳಲಾಗುತ್ತಿದೆ. ಇವುಗಳನ್ನು ಕಂಡುಹಿಡಿದು ನಿಯಂತ್ರಣ ಮಾಡಬೇಕು ಎಂದು ಸಾರಿಗೆ ಇಲಾಖೆಗೆ (Transport Department) ಆದೇಶ ನೀಡಲಾಗಿದೆ. ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಆಫ್ ಹೆಸರಿನಲ್ಲಿ ಅನಧಿಕೃತವಾಗಿ ಸಾಕಷ್ಟು ವಾಹನಗಳು ಚಲಾಯಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಇಂತಹ ಬೈಕುಗಳ ತಪಾಸಣೆಯನ್ನು ಎಲ್ಲಡೆ ನಡೆಸಬೇಕು ಎಂದು ಜಂಟಿ ಸಾರಿಗೆ ಆಯುಕ್ತರು ಆದೇಶ ನೀಡಿದ್ದಾರೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು ಬೈಕ್ ಡೆಲಿವರಿ ಮಾಡುವ ಹುಡುಗರು ಬೈಕನ್ನು ಟ್ಯಾಕ್ಸ್ ಸೇವೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಹಾಗಾಗಿ ಯಾವುದೇ ಆಪ್ ನವರು ಫುಡ್ ಡೆಲಿವರಿ ಮಾಡುವಾಗ ಬೈಕ್ ನವರಿಗೆ (ಫುಡ್ ಡೆಲಿವರಿ ಬಾಯ್ಸ್) ಸರಿಯಾದ ಐಡೆಂಟಿಟಿ ಕೊಟ್ಟಿರಬೇಕು. ಇನ್ನು ಸಂಚಾರಿ ಪೊಲೀಸರು ಕೂಡ ಫುಡ್ ಡೆಲಿವರಿ ಮಾಡುವ ಬೈಕ್ ಸವಾರರನ್ನು ಹಿಡಿದು ಅವರು ನಿಜವಾಗಿಯೂ ಆಹಾರ ಡೆಲಿವರಿ ಮಾಡುತ್ತಿದ್ದಾರೆ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬೇಕು. ಒಂದು ವೇಳೆ ಅನುಮಾನಾಸ್ಪದವಾಗಿ ಕಂಡಲ್ಲಿ ಅವರ ಬಳಿ ಸರಿಯಾದ ದಾಖಲೆಯನ್ನು ಪಡೆದುಕೊಳ್ಳಬೇಕು. ದಾಖಲೆ ಸಿಗದೇ ಇದ್ದಲ್ಲಿ ಅಂತಹ ಟ್ಯಾಕ್ಸಿ ಕೆಲಸ ಮಾಡುತ್ತಿರುವ ಬೈಕ್ ಸವಾರರನ್ನು ತಾರಾಟಿಗೆ ತೆಗೆದುಕೊಳ್ಳುವಂತೆ ಸಾರಿಗೆ ಇಲಾಖೆಗೆ ಖಡಕ್ ಆದೇಶ ಹೊರಡಿಸಲಾಗಿದೆ.
ಇತ್ತೀಚಿಗೆ ಖಾಸಗಿ ವಾಹನಗಳು ಪ್ರಯಾಣಿಕರಿಲ್ಲದೆ ಸಮಸ್ಯೆ ಅನುಭವಿಸುವಂಥಾಗಿದೆ ಉಚಿತ ಬಸ್ಸು ನಿಂದಾಗಿ ಮಹಿಳೆಯರು ಖಾಸಗಿ ವಾಹನಗಳನ್ನು ಅವಲಂಬಿಸುತ್ತಿಲ್ಲ. ಇದರಿಂದಾಗಿ ಟ್ಯಾಕ್ಸಿ ಹಾಗೂ ಖಾಸಗಿ ಇತರ ವಾಹನಗಳಿಗೆ ಸಮಸ್ಯೆ ಉಂಟಾಗುತ್ತದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೊಂದಿಗೆ ಖಾಸಗಿ ವಾಹನ ಚಾಲಕ ಸಂಘದ ಅಧ್ಯಕ್ಷರು ಸಮಾಲೋಚನೆ ನಡೆಸಿದ್ದಾರೆ. ಇದರ ಜೊತೆಗೆ ಅಕ್ರಮವಾಗಿ ಬೈಕ್ ನಲ್ಲಿ ಫುಡ್ ಡೆಲಿವರಿ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ಕೂಡ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಇದರ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.