ಕೇಂದ್ರ ಸರ್ಕಾರ (Central Govt) ದಿಂದ ವಿಶೇಷ ಯೋಜನೆ ಆರಂಭವಾಗಿದ್ದು, ವಿವಾಹಿತರಿಗೆ ಇದರಿಂದಾಗಿ ಭಾರಿ ಲಾಭ ವಾಗುತ್ತದೆ. ಕೇಂದ್ರ ಸರ್ಕಾರವು (Central Govt) ವಿವಾಹಿತ ದಂಪತಿಗೆ ಸಂಪೂರ್ಣ 51,000 ರೂ. ನೀಡಲು ಮುಂದಾಗಿದ್ದು ಈ ಹೊಸ ಯೋಜನೆಗೆ ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (Pradhan Mantri Vaya Vandana Yojana) ಎಂದು ಹೆಸರಿಡಲಾಗಿದೆ. ಇದರಲ್ಲಿ ನೀವು ವೃದ್ಧಾಪ್ಯದಲ್ಲಿ ಪಿಂಚಣಿಯ ಲಾಭವನ್ನೂ ಪಡೆಯುವ ರೀತಿಯ ಯೋಜನೆ ಇದಾಗಿದೆ.
ಯೋಜನೆ ಏನು:
- ಪ್ರಧಾನ ಮಂತ್ರಿ ವಯ ವಂದನಾ (Pradhan manthri vaya vandhana) ಯೋಜನೆಯು ಸಾಮಾಜಿಕ ಭದ್ರತಾ ಯೋಜನೆಯಾಗಿದ್ದು, ಅರ್ಜಿದಾರರಿಗೆ ವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಪಿಂಚಣಿ (Penction) ನೀಡಲು ಅವಕಾಶವಿದೆ. ಭಾರತ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಭಾರತೀಯ ಜೀವ ವಿಮಾ ನಿಗಮ (LIC) ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
- 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಯೋಜನೆಗೆ ಫಲಾನುಭವಿ ಗಳಾಗುತ್ತಾರೆ. ಅಂದರೆ ನವ ವಿವಾಹಿತರು ಯೋಜನೆಗೆ ಮೊದಲು ವಾರ್ಷಿಕ, ತಿಂಗಳ ಕಂತು ಕಟ್ಟಿಕೊಂಡು ಹೋಗಬೇಕು ಬಳಿಕ ಅವರಿಗೆ ವೃದ್ಧಾಪ್ಯದ ಅವಧಿಯಲ್ಲಿ ಪಿಂಚಣಿ (Penction) ದೊರೆಯುತ್ತದೆ. ಯೋಜನೆಯಡಿ, ಅವರು ಗರಿಷ್ಠ 15 ಲಕ್ಷ ರೂ ವರೆಗೂ ಈ ಎಲ್ಐಸಿ (LIC)ಅನ್ನು ಮಾಡಬಹುದು. ಈ ಯೋಜನೆಯಲ್ಲಿ, ಇತರ ಯೋಜನೆಗಳಿಗೆ ಹೋಲಿಸಿದರೆ, ಹಿರಿಯ ನಾಗರಿಕರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.
51,000 ರೂಪಾಯಿ ಪಡೆಯುವುದು ಹೇಗೆ:
ಪತಿ ಮತ್ತು ಪತ್ನಿ ಇಬ್ಬರೂ ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದರೆ ಅದನ್ನು ಸಹ ನೀಡಲಾಗುತ್ತದೆ. ಇಬ್ಬರೂ ಕಟ್ಟಿದ ಹಣಕ್ಕೆ ಸುಮಾರು 7.40ರೂ. ರಷ್ಟು ವಾರ್ಷಿಕ ಬಡ್ಡಿಯನ್ನು ಈ ಯೋಜನೆಗೆ ನೀಡಲಾಗುತ್ತದೆ. ಅದರಂತೆ ಹೂಡಿಕೆದಾರರ ವಾರ್ಷಿಕ ಪಿಂಚಣಿ 51 ಸಾವಿರದ 45 ರೂ. ನೀವು ಈ ಪಿಂಚಣಿಯನ್ನು ಮಾಸಿಕವಾಗಿ ತೆಗೆದುಕೊಳ್ಳಲು ಬಯಸಿದರೆ, ಪ್ರತಿ ತಿಂಗಳು ನೀವು 4100 ರೂಪಾಯಿಗಳನ್ನು ಪಿಂಚಣಿಯಾಗಿ ಪಡೆಯುತ್ತೀರಿ ಎನ್ನಬಹುದು. ಒಟ್ಟಾರೆಯಾಗಿ ವೃದ್ಧಾಪ್ಯದಲ್ಲಿ ಅತೀ ಅಗತ್ಯ ಅಂಶಗಳಿಗೆ ಈ ಪಿಂಚಣಿ ಸಹಕಾರಿಯಾಗಲಿದ್ದು ಈಗಲೇ ಈಬಗ್ಗೆ ನಿಖರ ಮಾಹಿತಿ ಪಡೆದು ಫಲಾನುಭವಿಗಳಾಗುದು ಉತ್ತಮವಿಧಾನವಾಗಿದೆ.